ಅಮೆರಿಕಾದ ಮಿಯಾಮಿಯಲ್ಲಿ ನಡೆದ ಸರ್ಜರಿ; ಯುದ್ದ ಗೆದ್ದ ಕರುನಾಡ ಶಿವ!

Dec 26, 2024, 6:48 PM IST

ಹೌದು, ಅಭಿಮಾನಿಗಳ ಪ್ರೀತಿಯ ಸೆಂಚ್ಯೂರಿ ಸ್ಟಾರ್.. ದೊಡ್ಮನೆ ದೊಡ್ಮಗ ಶಿವಣ್ಣನ ಸರ್ಜರಿ ಯಶಸ್ವಿಯಾಗಿ ನಡೆದಿದೆ. ಅಮೇರಿಕದ ಮಿಯಾಮಿ ಕ್ಯಾನ್ಸರ್ ಇನ್​ಸ್ಟಿಟ್ಯೂಟ್​​ಗೆ ದಾಖಲಾಗಿದ್ದ ಶಿವಣ್ಣನಿಗೆ ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದ್ದು, ಕ್ಯಾನ್ಸರ್​ ತಗುಲಿದ್ದ ಭಾಗವನ್ನ ಆಪರೇಷನ್​ ಮಾಡಿ ತೆಗೆದುಹಾಕಲಾಗಿದೆ.

ಶಿವಣ್ಣನ ಚಿಕಿತ್ಸೆ ಕಂಪ್ಲೀಟ್ ಆಗೋವರೆಗೂ ಅಭಿಮಾನಿಗಳಿಗೆ ಆತಂಕ ಮನೆಮಾಡಿತ್ತು. ಇಡೀ ನಾಡಿನಾದ್ಯಂತ ಅನೇಕ ದೇಗುಲಗಳಲ್ಲಿ ಶಿವರಾಜ್​ಕುಮಾರ್ ಸರ್ಜರಿ ಯಶಸ್ವಿಯಾಗಲಿ ಅಂತ ಪ್ರಾರ್ಥನೆ ಸಲ್ಲಿಸಿ, ಹರಕೆ ಕಟ್ಟಿಕೊಂಡಿದ್ರು. ಅನೇಕರು ಮುಡಿಕೊಟ್ಟು, ಉರುಳು ಸೇವೆ ಮಾಡಿ ಶಿವಣ್ಣನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ರು.

ಅಭಿಮಾನಿಗಳ ಈ ಹರಕೆ ಹಾರೈಕೆ ಫಲಿಸಿದೆ. ಮಿಯಾಮಿ ಕ್ಯಾನ್ಸರ್ ಇನ್​ಸ್ಟಿಟ್ಯೂಟ್ ವೈದ್ಯರು ಶಿವಣ್ಣನಿಗಂಟಿದ ಕ್ಯಾನ್ಸರ್ ಮಾರಿಯನ್ನ ಸರ್ಜರಿ ಮೂಲಕ ನಿವಾರಿಸಿದ್ದಾರೆ. ಸರ್ಜರಿ ಬಗ್ಗೆ ಖುದ್ದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..