ಅಮೆರಿಕಾಗೆ ಹೊರಟ ಶಿವಣ್ಣ: ಈ ಸರ್ಜರಿ ಅದೆಷ್ಟು ಡೇಂಜರ್? ಹೇಗಿರುತ್ತೆ ಶಸ್ತ್ರಚಿಕಿತ್ಸೆ?

Dec 19, 2024, 12:22 PM IST

ಶಸ್ತ್ರಚಿಕಿತ್ಸೆಗೆ ವಿದೇಶಕ್ಕೆ ಹೊರಟ ಕರುನಾಡ ಚಕ್ರವರ್ತಿ.. ಶಿವಣ್ಣನನ್ನ ಭೇಟಿ ಮಾಡಿ ಧೈರ್ಯ ತುಂಬಿದ ಕಿಚ್ಚ.. ಕ್ಯಾನ್ಸರ್'ಗೆ ಶಸ್ತ್ರಚಿಕಿತ್ಸೆ, ಈ ಸರ್ಜರಿ ಎಷ್ಟು ಡೇಂಜರ್..? ಹೇಗಿರುತ್ತೆ ಆಪರೇಷನ್..? ಶಿವಣ್ಣ ಚೇತರಿಸಿಕೊಳ್ಳಲು ಎಷ್ಟು ದಿನ ಬೇಕು..? ಒಂದೂವರೇ ತಿಂಗಳು ಜೊತೆಗಿರಲ್ಲ.. ಕಣ್ಣೀರಿಟ್ಟ ದೊಡ್ಮನೆ ದೊಡ್ಮಗ.. 

ಕನ್ನಡ ಸಿನಿಅಭಿಮಾನಿಗಳ ಪ್ರೀತಿಯ ದೊರೆ, ದೊಡ್ಮನೆ ದೊಡ್ಮಗ, ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಸದ್ಯ ಅನಾರೋಗ್ಯಕ್ಕೆ ಒಳಗಾಗಿರೋ ವಿಷ್ಯ ನಿಮಗೆ ಗೊತ್ತೇ ಇದೆ. ಇವತ್ತು ಸರ್ಜರಿಗಾಗಿ ಅಮೇರಿಕಕ್ಕೆ ಹೊರಟ ಶಿವಣ್ಣನನ್ನ ಕನ್ನಡ ಚಿತ್ರರಂಗದ ತಾರೆಯರು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಡಿಸೆಂಬರ್ 24ರಂದು ಅಮೇರಿಕದ ಮಿಯಾಮಿಯಲ್ಲಿ ಶಿವಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅಷ್ಟಕ್ಕೂ ಈ ಸರ್ಜರಿ ಹೇಗಿರುತ್ತೆ..? ಅದ್ರಲ್ಲಿ ಏನಾದ್ರೂ ಡೇಂಜರ್ ಇದೆಯಾ..? ಎಷ್ಟು ದಿನಗಳಲ್ಲಿ ಶಿವಣ್ಣ ಗುಣಮುಖರಾಗ್ತಾರೆ..? ಅದೆಲ್ಲದರ ಕುರಿತ ಎಕ್ಸ್​ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಇವತ್ತು ಶಿವಣ್ಣ ಅಮೇರಿಕಕ್ಕೆ ಹೊರಟಿದ್ದಾರೆ. ಡಿಸೆಂಬರ್ 24ನೇ ತಾರೀಖು ಅಮೇರಿಕದ ಫ್ಲೋರಿಡಾ ರಾಜ್ಯದಲ್ಲಿರೋ ಮಿಯಾಮಿಯಲ್ಲಿ ಶಿವಣ್ಣನ ಸರ್ಜರಿ ನಡೆಯಲಿದೆ. ಶಸ್ತ್ರಚಿಕಿತ್ಸೆ ಬಳಕ ಕನಿಷ್ಟ ಒಂದು ತಿಂಗಳ ಕಾಲ ಶಿವಣ್ಣ ವಿಶ್ರಾಂತಿ ಪಡೆಯಲಿದ್ದಾರೆ. ಇವತ್ತು ಶಿವಣ್ಣ  ವಿದೇಶಕ್ಕೆ ತೆರಳುವ ಮುನ್ನ ಅನೇಕ ಸ್ಟಾರ್ಸ್ ಶಿವಣ್ಣನ ಮನೆಗೆ ಬಂದು ಗುಣಮುಖರಾಗಿ ಬನ್ನಿ ಅಂತ ಹಾರೈಸಿದ್ದಾರೆ. ಹೆಚ್ಚಿನ ವಿವರಗಳಿಗೆ ವಿಡಿಯೋ ನೋಡಿ..