
ರಕ್ಷಿತ್ ಶೆಟ್ಟಿ ಉಡುಪಿಯ ಧಾರ್ಮಿಕ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ದೈವ ಸಂಭ್ರಮದಲ್ಲಿ ಪಾಲ್ಗೊಂಡರು. ರಕ್ಷಿತ್ ಅವರ ಮುಂದಿನ ಯೋಜನೆಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ..? ಅಂತಾ ಫ್ಯಾನ್ಸ್ ಕಾಳಜಿಯಿಂದ ಹುಡುಕುತ್ತಿದ್ದಾಗ, ಅವರು ಉಡುಪಿಯಲ್ಲಿ ಧಾರ್ಮಿಕ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ, ಅವರು ತಮ್ಮ ತಂದೆ-ತಾಯಿಯೊಂದಿಗೆ ಅಲೆವೂರು ದೊಡ್ಡಮನೆ ಕುಟುಂಬದ ನೇಮೋತ್ಸವದಲ್ಲಿ ಭಾಗವಹಿಸಿದರು. ನಟ್ಟನಡುರಾತ್ರಿ ನಡೆದ ಈ ದೈವ ಸಂಭ್ರಮದಲ್ಲಿ ಪಂಜುರ್ಲಿ ದೈವದ ಆಶೀರ್ವಾದ ಪಡೆದ ರಕ್ಷಿತ್, ಯಾವತ್ತೂ ಕೂಡ ಕುಟುಂಬದ ಧಾರ್ಮಿಕ ಆಚರಣೆಗಳನ್ನು ಕೈ ಬಿಡದೆ ಪಾಲ್ಗೊಳ್ಳುವವರು. ಇಲ್ಲಿ ಇನ್ನೊಂದು ಪ್ರಶ್ನೆ ಎಲ್ಲರ ಮನದಲ್ಲಿದೆ – ರಕ್ಷಿತ್ ಮದುವೆಯಾಗೋದು ಯಾವಾಗ? ಈಗ ಅವರು 42ರ ಹರೆಯದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್. ತಂದೆ-ತಾಯಿ ಕೂಡ ಮಗು ಸೆಟಲ್ ಆಗಲಿ ಎಂದು ಆಶಿಸುತ್ತಿದ್ದಾರೆ.
2016ರ ‘ಕಿರಿಕ್ ಪಾರ್ಟಿ’ ನಂತರ ರಕ್ಷಿತ್ ನಿರ್ದೇಶಕನ ಹಾದಿಯತ್ತ ಕೂಡ ಹೆಜ್ಜೆ ಇಟ್ಟರು. "ರಿಚರ್ಡ್ ಆಂಟನಿ" ಎಂಬ ಚಿತ್ರವನ್ನು ಘೋಷಿಸಿದರೂ, ಅದು ಈವರೆಗೆ ಸೆಟ್ಟೇರಿಲ್ಲ. ಈ ಚಿತ್ರ ಹೊಂಬಾಳೆ ಫಿಲ್ಮ್ಸ್‌ನಿಂದ ಬರಬೇಕಿತ್ತು, ಆದರೆ ಇನ್ನೂ ಯಾವುದೇ ಅಪ್‌ಡೇಟ್ ಇಲ್ಲ. ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ನಂತರ ರಕ್ಷಿತ್ ಸಿನೆಮಾ ತೆರೆಗೆ ಬಂದಿಲ್ಲ. ರಕ್ಷಿತ್ ಶೆಟ್ಟಿ ಜೀವನ ಸಿಂಪಲ್ ಎನ್ನುವುದು ಹೌದಾದರೂ, ಅದರೊಳಗೆ ಹಲವಾರು ಗೊಂದಲಗಳು, ನಿರ್ಣಯಗಳು, ನಿರೀಕ್ಷೆಗಳಿವೆ. ಹೀಗಿರುವಾಗ ದೈವದ ಆಶೀರ್ವಾದಕ್ಕೆ ಮರುಳಾಗುವುದು ಸಹಜ. ಪಂಜುರ್ಲಿ ದೈವ ನಡು ರಾತ್ರಿ ರಕ್ಷಿತ್‌ಗೆ ಏನು ಹೇಳಿತು..? ಅವರ ಮುಂದಿನ ಬದುಕು ಯಾವ ದಿಸೆಯತ್ತ ಸಾಗಲಿದೆ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಭವಿಷ್ಯದಲ್ಲಿ ಸಿಗಲಿದೆ.