Feb 20, 2020, 3:15 PM IST
ಪೊಲೀಸ್ ಪ್ರಾಪರ್ಟಿ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಪಾಲ್ಗೊಂಡಿದ್ದರು. ಆಗ, ಪೊಲೀಸರೇ ನೈಜ ಹೀರೋಗಳು, ನಾವು ರೀಲ್ ಹೀರೋಗಳಷ್ಟೇ ಎನ್ನುವ ಮೂಲಕ ಪೊಲೀಸರಿಗೆ ಸ್ಫೂರ್ತಿ ನೀಡುವಂಥ ಮಾತುಗಳನ್ನಾಡಿದ್ದಾರೆ.
ವಿಶೇಷ ಅಭಿಮಾನಿಯ ಆಸೆ ಈಡೇರಿಸಿದ ಪುವರ್ ಸ್ಟಾರ್!
ಅಷ್ಟೇ ಅಲ್ಲದೇ ಪೊಲೀಸರಿಗೆ ಫಿಟ್‌ನೆಸ್ ಮಂತ್ರ ಬೋಧಿಸಿದ್ದಾರೆ. ಯೋಗ ಮಾಡಿ, ಕಾಮ್ ಆಗಿರಿ ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂಬ ಕಿವಿಮಾತು ಹೇಳಿದ್ದಾರೆ. 'ಪೊಲೀಸ್ ಅಧಿಕಾರಿಗಳು ದೈನಂದಿನ ಒತ್ತಡದಲ್ಲಿ ಕೆಲಸ ಮಾಡುತ್ತಾರೆ, ನಾವು ಸೇಫ್ ಆಗಿರಲು ನೀವೇ ಕಾರಣ. ಅಧಿಕಾರಿಗಳ ಜೊತೆ ನಮ್ಮದು ಆವಿನಾಭಾವ ಸಂಬಂಧ. ಕಾರ್ಯಕ್ರಮ ಮುಗಿದೆ ಮೇಲೆ ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತೇವೆ, ಆದರೆ, ಪೊಲೀಸರನ್ನೇ ಮರೆಯುತ್ತೇವೆ, ಎಂದು ತಂದೆಯವರೂ ಸದಾ ಹೇಳುತ್ತಿದ್ದರೆಂದರು. ಮತ್ತೆ ಪುನೀತ್ ಪೊಲೀಸರಿಗೆ ಹೇಳಿದ್ದೇನು?
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment