Jan 16, 2025, 1:09 PM IST
ಬಹುಭಾಷಾ ನಟ ಸೋನು ಸೂದ್ ಪ್ರಿನ್ಸ್ ಧ್ರುವ ಸರ್ಜಾ ಬಾಕ್ಸಿಂಗ್ ಆಡಿದ್ದಾರೆ. ಹಾಗಂತ ಇವರು ಯಾವುದೋ ಸಿನಿಮಾದಲ್ಲಿ ಹೀರೋ ವಿಲನ್ ಆಗಿ ಬಾಕ್ಸಿಂಗ್ ಮಾಡ್ತಾ ಇಲ್ಲ. ಇತ್ತೀಚಿಗೆ ಜಿಮ್ ವೊಂದರ ಉದ್ಘಾಟನೆಗೆ ಬಂದಿದ್ದ ಸೋನು ಸೂದ್ ಧ್ರುವ ಫ್ರೆಂಡ್ಲಿ ಆಗಿ ಬಾಕ್ಸಿಂಗ್ ಆಡಿದ್ದಾರೆ. . ಜೊತೆಗೆ ಸೋನು ಸೂದ್ ಧ್ರುವ ಫಿಟ್ನೆಸ್ ಬಗ್ಗೆ, ಮತ್ತು ಬರಲಿರೋ ಕೆಡಿ ಸಿನಿಮಾ ಬಗ್ಗೆ ಪ್ರಶಂಸೆಯ ಮಾತನಾಡಿದ್ದಾರೆ.
ಸಂಕ್ರಾಂತಿಗೆ ತೆಲುಗಿನ ಮೂರು ಸ್ಟಾರ್ ಹೀರೋಗಳ ಸಿನಿಮಾಗಳು ಒಟ್ಟಿಗೆ ಬಿಡುಗಡೆ ಆದವು. ಮೂರರಲ್ಲಿ ಗೆಲುವು ಸಾಧಿಸಿದ್ದು ನಂದಮೂರಿ ಬಾಲಕೃಷ್ಣ ನಟನೆಯ ‘ಢಾಕೂ ಮಹಾರಾಜ್’ ಸಿನಿಮಾ ಎನ್ನಲಾಗ್ತಾ ಇದೆ. ಢಾಕೂ ಮಹಾರಾಜ್’ ಸಿನಿಮಾ ಮೊದಲ ಮೂರು ದಿನಗಳಲ್ಲಿ 50 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಮೊದಲ ದಿನ 25 ಕೋಟಿ ಗಳಿಸಿದ್ದ ಸಿನಿಮಾ ಆ ನಂತರದ ಎರಡು ದಿನಗಳಲ್ಲಿ ಕ್ರಮವಾಗಿ 12 ಕೋಟಿಗೂ ಹೆಚ್ಚು ಮೊತ್ತ ಗಳಿಸುವ ಮೂಲಕ 50 ಕೋಟಿಯ ಮಾರ್ಕ್ ದಾಟಿದೆ.