Feb 24, 2022, 4:39 PM IST
ಬೆಂಗಳೂರು(ಫೆ.24): ನ್ಯಾಯಾಂಗ ನಿಂದನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚೇತನ್ ಅಹಿಂಸಾರನ್ನು (actor chetan ahimsa) ಪೊಲೀಸರು ವಶಕ್ಕೆ ಪಡೆದಿದ್ದರು ನ್ಯಾಯಮೂರ್ತಿಗಳಿಗೆ ಅಗೌರವ ತೋರುವಂತಹ ಟ್ವಿಟ್ ಮಾಡಿದ ಕಾರಣಕ್ಕಾಗಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಅಧಿಕಾರಿಗಳು ಚೇತನ್ ಅವರನ್ನು ಬಂಧಿಸಿದ್ದರು. ಚೇತನ್ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡಿಲ್ಲವಾದ್ದರಿಂದ ಅವರ ಪತ್ನಿ ಮೇಘಾ, ಫೇಸ್ ಬುಕ್ ಲೈವ್ ನಲ್ಲಿ ತಮ್ಮ ಪತಿ ಕಿಡ್ನ್ಯಾಪ್ ಆಗಿದ್ದಾರೆ ಎಂದು ಹೇಳಿದ್ದರು.
Meghana Raj shot ಮಗ ರಾಯನ್‌ನ ತುಂಬಾ ಮಿಸ್ ಮಾಡ್ಕೊಳ್ತೀನಿ, ವೀಡಿಯೋ ಕಾಲ್ ಮಾಡೋಕಾಗಲ್ಲ
ಇದೀಗ ಕೇಂದ್ರ ಜಾರಿ ಮಾಡಿರುವ ವಿದೇಶಿ ಕಾಯ್ದೆ ಉಲ್ಲಂಘನೆಯಡಿ (Violation of the Foreign Act) ಸಂಕಷ್ಟ ಎದುರಾತ್ತಾ ಎನ್ನುವ ಪ್ರಶ್ನೆಗಳು ಎದ್ದಿದೆ. ಹೀಗಾಗಿ ನಟನ ಪ್ರತೀ ನಡವಳಿಕೆ ಮೇಲೆ ಹಲವು ಇಲಾಖೆಗಳು ಕಣ್ಣಿಟ್ಟಿದೆ. ಮಾತ್ರವಲ್ಲ ನಟನ ತಪ್ಪುಗಳ ದೊಡ್ಡ ಪಟ್ಟಿಯನ್ನು ಅಧಿಕಾರಿಗಳು ಸಿದ್ದಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿದೇಶಿ ಕಾಯ್ದೆ ಸೆ.7(D)(E) ಅಡಿ ಸಾಕಷ್ಟು ಉಲ್ಲಂಘನೆಯಾಗಿದೆ ಎನ್ನಲಾಗಿದೆ.