ಮಾರ್ಟಿನ್ ಪ್ರಮೋಷನ್​ಗೆ ಮೀನಾವೇಷ ಎಣಿಸುತ್ತಿರೋದೇಕೆ?: ಚಿತ್ರತಂಡದ ಮೇಲೆ ಧ್ರುವ ಸರ್ಜಾ ಫ್ಯಾನ್ಸ್​ಗೆ ಬೇಸರ!

ಮಾರ್ಟಿನ್ ಪ್ರಮೋಷನ್​ಗೆ ಮೀನಾವೇಷ ಎಣಿಸುತ್ತಿರೋದೇಕೆ?: ಚಿತ್ರತಂಡದ ಮೇಲೆ ಧ್ರುವ ಸರ್ಜಾ ಫ್ಯಾನ್ಸ್​ಗೆ ಬೇಸರ!

Published : Sep 23, 2024, 04:51 PM IST

ಒಂದು ತಿಂಗಳಿಗೂ ಮುನ್ನ ಟ್ರೈಲರ್ ರಿಲೀಸ್ ಮಾಡಿ ಪ್ಯಾನ್ ಇಂಡಿಯಾ ಸಿನಿಮಾಗಳ ಪ್ರಚಾರ ಮಾಡಲಾಗುತ್ತೆ. ಆದ್ರೆ 'ಮಾರ್ಟಿನ್' ವಿಚಾರದಲ್ಲಿ ಅದು ಕಾಣುತ್ತಿಲ್ಲ. ಮತ್ತೊಂದು ಟ್ರೈಲರ್ ರಿಲೀಸ್ ಮಾಡದೇ ಇರಲು ಚಿತ್ರತಂಡ ತೀರ್ಮಾನಿಸಿದೆಯಂತೆ. 

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗ್ತಿದೆ. ಅಕ್ಟೋಬರ್ 11ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಮಾರ್ಟಿನ್ ಒಂದು ಸಾಂಗ್, ಒಂದು ಟೀಸರ್​​​, ಹಾಗು ಒಂದು ಟ್ರೈಲರ್​​ ರಿಲೀಸ್ ಆಗಿದೆ. ಇಷ್ಟಾದ್ರು ಮಾರ್ಟಿನ್​​ ವಿಷಯದಲ್ಲಿ ಧ್ರುವ ಸರ್ಜಾ ಫ್ಯಾನ್ಸ್​​ ಬೇಸರವೊಂದಿದೆ. ಮಾರ್ಟಿನ್, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೆ ಬಾಕ್ಸಾಫೀಸ್​ ಅಖಾಡಲ್ಲಿ ತೊಡೆ ತಟ್ಟಿರೋ ಸಿನಿಮಾ. ಈ ಪ್ಯಾನ್​ ಇಂಡಿಯಾ ಸಿನಿಮಾ ಮೇಲೆ ಈಗ ಎಲ್ಲ ಸಿನಿ ಪ್ರೇಕ್ಷಕರ ಕಣ್ಣಿದೆ. ಅದಕ್ಕೆ ಕಾರಣ ಮಾರ್ಟಿನ್​ ಟ್ರೈಲರ್​ನಲ್ಲಿರೋ ಯುದ್ಧಕಾಂಡ. ಮಾರ್ಟಿನ್ ಟ್ರೈಲರ್​​​ ಅಕ್ಷರಶಃಹ ಥ್ರಿಲ್ ಕೊಟ್ಟಿದೆ. ಭಾರತ ಪಾಕಿಸ್ತಾನದ ಕಥೆ ಮಾರ್ಟಿನ್​ನಲ್ಲಿದ್ದು, ಧ್ರುವ ಆಕ್ಷನ ಧಮಾಕ ಕಾಣ್ತಿದೆ. ಧ್ರುವ ಈ ಭಾರಿ ಮೈ ಕೊಡವಿ ನಿಂತಿದ್ದಾರೆ. ಗೆದ್ದೇ ಗೆಲ್ತಾರೆ ಅಂತ ಟ್ರೈಲರ್ ಸಾರಿ ಹೇಳಿತ್ತು. ಆ ನಂಬಿಕೆಯನ್ನ ಮತ್ತಷ್ಟು ಹೆಚ್ಚಿಸಿದ್ದು ಮಾರ್ಟಿನ್ ರೊಮ್ಯಾಂಟಿಕ್ ಸಾಂಗ್. 

ಮಾರ್ಟಿನ್ ಬರೀ ಆಕ್ಷನ್ ಮೂವಿ ಅಲ್ಲ ಕ್ಯೂಟ್ ಲವ್ ಸ್ಟೋರಿಯೂ ಇಲ್ಲಿದೆ ಅನ್ನೋದಕ್ಕೆ ಈ ಹಾಡೇ ಸಾಕ್ಷಿ. ವೈಷ್ಣವಿ ಶಾಂಡಿಲ್ಯಾ ಜೊತೆ ಧ್ರುವ ಸಂಗೀತ ಪ್ರೀಯರ ಎದೆಗೆ ಇಳಿದಿದ್ದಾರೆ. ಈ ಹಾಡು ಮಾರ್ಟಿನ್​​ ಮೇಲೆ ಹೊಸ ನಿರೀಕ್ಷೆ ಹುಟ್ಟಿಸಿದ್ರೆ, ಟೀಸರ್​ ಕೂಡ ಅದೇ ಪ್ರಾಮಿಸ್​ ಮಾಡಿತ್ತು. ಮಾರ್ಟಿನ್ ಟೀಸರ್​ ಟ್ರೈಲರ್​, ಸಾಂಗ್ ಬಂದಾಗಿದೆ. ಆದ್ರೆ ಆಕ್ಷನ್ ಪ್ರಿನ್ಸ್​ ಫ್ಯಾನ್ಸ್​ಗೆ ಮಾತ್ರ ಇನ್ನು ಒಂದು ಬೇಸರವೂ ಇದೆ. ಸಿನಿಮಾ ಬಿಡುಗಡೆಗೆ 20 ದಿನ ಬಾಕಿಯಿದೆ. ಆದರೆ ಸರಿಯಾಗಿ ಪ್ರಮೋಷನ್ ಮಾಡ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಂದು ತಿಂಗಳಿಗೂ ಮುನ್ನ ಟ್ರೈಲರ್ ರಿಲೀಸ್ ಮಾಡಿ ಪ್ಯಾನ್ ಇಂಡಿಯಾ ಸಿನಿಮಾಗಳ ಪ್ರಚಾರ ಮಾಡಲಾಗುತ್ತೆ. ಆದ್ರೆ 'ಮಾರ್ಟಿನ್' ವಿಚಾರದಲ್ಲಿ ಅದು ಕಾಣುತ್ತಿಲ್ಲ. ಮತ್ತೊಂದು ಟ್ರೈಲರ್ ರಿಲೀಸ್ ಮಾಡದೇ ಇರಲು ಚಿತ್ರತಂಡ ತೀರ್ಮಾನಿಸಿದೆಯಂತೆ. 

ಅಕ್ಟೋಬರ್ ಮೊದಲ ವಾರ ಮತ್ತೊಂದು ಸಾಂಗ್ ಮಾತ್ರ ರಿಲೀಸ್ ಮಾಡಿ ಬಳಿಕ ಸಿನಿಮಾ ತೆರೆಗೆ ತರಲು ಚಿತ್ರತಂಡ ಮುಂದಾಗಿದೆ. ಇಷ್ಟು ದೊಡ್ಡ ಕ್ಯಾನ್ವಸ್ ಸಿನಿಮಾಗೆ ಪ್ರಾಚರ ಮಾಡದೇ ಇದ್ರೆ ಹೇಗೆ ಅನ್ನೋದು ಫ್ಯಾನ್ಸ್​ ಪ್ರಶ್ನೆ. ಮಾರ್ಟಿನ್ ಚಿತ್ರತಂಡದ ಮಧ್ಯೆ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಸಿನಿಮಾ ಅನೌನ್ಸ್ ಆಗಿ ಆರಂಭದಲ್ಲಿ ನಿರ್ದೇಶಕ ಎಪಿ ಅರ್ಜುನ್, ಧ್ರುವ ಸರ್ಜಾ, ಹಾಗು ನಿರ್ಮಾಪಕ ಉದಯ್ ಕೆ ಮೆಹ್ತಾ ಮಧ್ಯೆ ಎಲ್ಲವೂ ಸರಿ ಇತ್ತು. ಆದ್ರೆ ಚಿತ್ರದ ಬಜೆಟ್ ಹೆಚ್ಚಾಗಿದ್ದಕ್ಕೆ ಒಂದಿಷ್ಟು ವೈಮಸ್ಸು ಕಾಣಿಸಿಕೊಳ್ತು. ಆದ್ರೆ ನಿರ್ದೇಶಕ ಎ.ಪಿ ಅರ್ಜುನ್ ಅದ್ಯಾವುದಕ್ಕು ತಲೆ ಕೆಡಿಸಿಕೊಳ್ಳದೇ ಸಿನಿಮಾವನ್ನ ಕಂಪ್ಲೀಟ್ ಮಾಡಿ ಕೊಟ್ಟಿದ್ದಾರೆ. 

ಸಿನಿಮಾದ ಪ್ರಚಾರ ಮಾಡೋ ಕೆಲಸ ಈಗ ನಿರ್ಮಾಪಕ ಉದಯ್ ಕೆ ಮೆಹ್ತಾ ಹೆಗಲಮೇಲಿದೆ. 'ಪೊಗರು' ಬಳಿಕ ಧ್ರುವ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ 'ಮಾರ್ಟಿನ್' ರಿಲೀಸ್ ತಡವಾಗುತ್ತಲೇ ಬಂದಿತ್ತು. ಅಂತೂ ಇಂತೂ ಅಕ್ಟೋಬರ್​ 11ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದೆ. ಈಗಾಗಲೇ ಧ್ರುವ ಸರ್ಜಾ ಸಾಕಷ್ಟು ಸಂದರ್ಶನದಲ್ಲಿ ಭಾಗಿ ಆಗಿ 'ಮಾರ್ಟಿನ್' ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಅನ್ವೇಷಿ ಜೈನ್, ಸಾಧು ಕೋಕಿಲ, ಚಿಕ್ಕಣ್ಣ, ಸುಕೃತಾ ವಾಗ್ಲೆ, ಮಾಳವಿಕಾ ಅವಿನಾಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರಕ್ಕೆ ಮಣಿಶರ್ಮ ಟ್ಯೂನ್ ಹಾಕಿದ್ದಾರೆ. ರವಿ ಬಸ್ರೂರು ರೀರೆಕಾರ್ಡಿಂಗ್ ಮಾಡಿದ್ದಾರೆ. ಸತ್ಯಾ ಹೆಗಡೆ ಛಾಯಾಗ್ರಹಣ ಮಾರ್ಟಿನ್​​ಗಿದೆ.

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more