Feb 3, 2020, 1:06 PM IST
'ಆ ದಿನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚೇತನ್ ಕುಮಾರ್ ಜನವರಿ 2ರಂದು ಗೆಳತಿ ಮೇಘ ಜೊತೆ ಬೆಂಗಳೂರಿನ ವಿನೋಬಾ ಭಾವೆ ಆಶ್ರಮದಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಜನವರಿ 1ರಂದು ರಿಜಿಸ್ಟರ್ಡ್ ಮದುವೆಯಾದರು. ಕನ್ನಡ ಚಿತ್ರರಂಗದ ಗಣ್ಯರು ಹಾಗೂ ರಾಜಕಾರಣಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೊಸ ಬಾಳಿನ ಹೊಸಿಲಲ್ಲಿ ನಿಂತ ಜೋಡಿಗೆ ಶುಭ ಹಾರೈಸಿದರು.
ಸರಳವಾಗಿ ರಿಜಿಸ್ಟರ್ ಮದುವೆಯಾದ ಚೇತನ್, ಹೊಸ ಸಂಪ್ರದಾಯಕ್ಕೆ ನಾಂದಿ
ಮೇಘ ಮೂಲತಃ ಉತ್ತರ ಪ್ರದೇಶದ ಗ್ವಾಲಿಯರ್ ಹುಡುಗಿ. ವೃತ್ತಿಯಲ್ಲಿ ಐಟಿ ಉದ್ಯೋಗಿಯಾದ ಕಾರಣ ಬೆಂಗಳೂರಿನಲ್ಲೇ 8 ವರ್ಷಗಳಿಂದಲೂ ನೆಲೆಸಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿದೆ ಕ್ಲಿಕಿಸಿ: Suvarna Entertainment