Aug 25, 2021, 5:23 PM IST
ಕಾರವಾರ, (ಆ.25): ಕೊರೋನಾ ಕಾರಣದಿಂದಾಗಿ ಕೆಲಸ ಕಳೆದುಕೊಂಡವರೇ ಹೆಚ್ಚು. ವ್ಯವಹಾರ, ಮಾರುಕಟ್ಟೆ ಕೂಡಾ ಡಲ್ ಇರೋದ್ರಿಂದ ಹಲವು ಕಂಪೆನಿಗಳು, ಸಂಸ್ಥೆಗಳು ಉದ್ಯೋಗವಕಾಶವನ್ನು ಕೂಡಾ ತೆರೆಯುತ್ತಿಲ್ಲ. ಇದರಿಂದ ಈಗಾಗಲೇ ಶಿಕ್ಷಣ ಪಡೆದಿರುವ ಹಾಗೂ ಅಂತಿಮ ವರ್ಷ ಪದವಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಭವಿಷ್ಯ ಮುಂದೇನು ಅನ್ನೋ ಚಿಂತೆಯೂ ಕಾಡಿದೆ. ಈ ಕಾರಣದಿಂದಾಗಿ ಉತ್ತರಕನ್ನಡ ಜಿಲ್ಲಾಡಳಿತ ಯುವಕರ ಭವಿಷ್ಯಕ್ಕಾಗಿ ಹೊಸ ಯೋಜನೆಯನ್ನು ಕೈಗೊಂಡಿದೆ.
ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೌದು, ಕೊರೊನಾ ಕಾಟ ಕಾಣಿಸಿಕೊಂಡ ಸಮಯದಿಂದ ಉತ್ತರಕನ್ನಡ ಜಿಲ್ಲೆಗೆ ಯಾವುದೇ ಕಂಪೆನಿಗಳು ಉದ್ಯೋಗ ಮೇಳದ ಹೆಸರಿನಲ್ಲಿ ಕಾಲಿಟ್ಟಿಲ್ಲ. ಈಗಾಗಲೇ ಕೆಲಸ ಕಳೆದುಕೊಂಡ ಕೆಲವರು ಊರಿನಲ್ಲಿ ವ್ಯವಸಾಯ, ಕೂಲಿ ಕೆಲಸಕ್ಕೆ ಒಗ್ಗಿಕೊಂಡರೆ, ಮತ್ತಷ್ಟು ಯುವಕರು ಇನ್ನೂ ಕೆಲಸವಿಲ್ಲದೇ ಅಲೆದಾಡುತ್ತಿದ್ದಾರೆ. ಈ ನಡುವೆ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭವಿಷ್ಯ ಮುಂದೇನು ಅನ್ನೋ ಚಿಂತೆಯಲ್ಲಿದ್ದಾರೆ. ಈ ಕಾರಣದಿಂದಾಗಿ ಶಿಕ್ಷಣ ಪಡೆದಿರುವ ಯುವಕರಿಗೆ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ಉದ್ಯೋಗ ಮೇಳದೊಂದಿಗೆ ಅಗತ್ಯ ತರಬೇತಿ ನೀಡಿ ಉದ್ಯೋಗ ಒದಗಿಸಿಕೊಡಲು ಯೋಜನೆ ರೂಪಿಸಿದೆ.