Swadeshi Melaಕ್ಕೆ ಸಿಲಿಕಾನ್ ಸಿಟಿ ಮಂದಿ ಫಿದಾ, ಯುವಕರಿಗೆ ಸಾವಯವ ಉದ್ಯೋಗ ತರಬೇತಿ

Apr 8, 2022, 12:54 PM IST

ಬೆಂಗಳೂರು(ಎ.8): ಬೆಂಗಳೂರಿನ ಜಯನಗರದಲ್ಲಿ ಏಪ್ರಿಲ್ 6 ರಿಂದ 10 ರವರೆಗೆ ನಡೆಯುತ್ತಿರುವ ಸ್ವದೇಶಿ ಮೇಳಕ್ಕೆ (Swadeshi Mela) ಸಿಲಿಕಾನ್ ಸಿಟಿ ಮಂದಿಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ವತಿಯಿಂದ ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನ (ಶಾಲಿನಿ ಗ್ರೌಂಡ್ಸ್)ದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದು, ತಮಗಿಷ್ಟದ ವಸ್ತುಗಳನ್ನು ಜನ ಖರೀದಿ ಮಾಡಿದ್ದಾರೆ. ಜೊತೆಗೆ ಮೇಳದಲ್ಲಿ  ಯವಕರಿಗೆ ಸ್ವ ಉದ್ಯೋಗ ಮತ್ತು ಸಾವಯುವ ಕೃಷಿ ಬಗ್ಗೆ ಕೂಡ ತರಬೇತಿ ನೀಡಲಾಗುತ್ತಿದೆ.

DELHI UNIVERSITY JOB FAIR: ಉದ್ಯೋಗಕ್ಕಾಗಿ ವಿದ್ಯಾರ್ಥಿಗಳಿಂದ 30 ಸಾವಿರಕ್ಕೂ ಅಧಿಕ ನೋಂದಣಿ!

ನಾಲ್ಕು ದಿನಗಳ ಸ್ವದೇಶಿ ಮೇಳಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿಂದ (basavaraj bommai)ಚಾಲನೆ ಸಿಕ್ಕಿತ್ತು. ಸ್ವದೇಶಿ ವಸ್ತುಗಳಿಗೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಎರಡು ವರ್ಷದ ಬಳಿಕ ಮತ್ತೆ ಸ್ವದೇಶಿ ಮೇಳವನ್ನು ಆಯೋಜಿಸಲಾಗಿದೆ. ಕೋವಿಡ್ ಕರಿನೆರಳಿನ ಹಿನ್ನೆಲೆ ಮೊಟಕುಗೊಂಡಿದ್ದ ಸ್ವದೇಶಿ ಮೇಳವನ್ನು ಮತ್ತೆ ಸ್ವದೇಶಿ ಜಾಗರಣ ಮಂಚ್ (Swadeshi Jagran Manch) ಆಯೋಜಿಸ್ತಿದೆ.