ಪಂಜಾಬ್ ವಿರುದ್ಧ ಫೀನಿಕ್ಸ್‌ನಂತೆ ಎದ್ದು ಬಂದ ಧೋನಿ ಪಡೆ..!

ಪಂಜಾಬ್ ವಿರುದ್ಧ ಫೀನಿಕ್ಸ್‌ನಂತೆ ಎದ್ದು ಬಂದ ಧೋನಿ ಪಡೆ..!

Suvarna News   | Asianet News
Published : Oct 05, 2020, 12:42 PM IST

ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ 10 ವಿಕೆಟ್‌ಗಳ ದಾಖಲೆಯ ಜಯ ಸಾಧಿಸುವ ಮೂಲಕ ಫೀನಿಕ್ಸ್‌ನಂತೆ ಕಮ್‌ಬ್ಯಾಕ್‌ ಮಾಡುವಲ್ಲಿ ಧೋನಿ ಪಡೆ ಯಶಸ್ವಿಯಾಗಿದೆ. ಇದರ ಜತೆಗೆ ತಾವಿನ್ನೂ ಹೋರಾಟವನ್ನು ಕೈಬಿಟ್ಟಿಲ್ಲ ಎನ್ನುವ ಎಚ್ಚರಿಕೆಯನ್ನು ಸಿಎಸ್‌ಕೆ ಉಳಿದ ತಂಡಗಳಿಗೆ ರವಾನಿಸಿದೆ.

ದುಬೈ(ಅ.05): ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡು ಮುಖಭಂಗ ಅನುಭವಿಸಿತ್ತು.

ಆದರೆ ಇದೀಗ ಕೆ.ಎಲ್. ರಾಹುಲ್ ನೇತೃತ್ವದ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ 10 ವಿಕೆಟ್‌ಗಳ ದಾಖಲೆಯ ಜಯ ಸಾಧಿಸುವ ಮೂಲಕ ಫೀನಿಕ್ಸ್‌ನಂತೆ ಕಮ್‌ಬ್ಯಾಕ್‌ ಮಾಡುವಲ್ಲಿ ಧೋನಿ ಪಡೆ ಯಶಸ್ವಿಯಾಗಿದೆ. ಇದರ ಜತೆಗೆ ತಾವಿನ್ನೂ ಹೋರಾಟವನ್ನು ಕೈಬಿಟ್ಟಿಲ್ಲ ಎನ್ನುವ ಎಚ್ಚರಿಕೆಯನ್ನು ಸಿಎಸ್‌ಕೆ ಉಳಿದ ತಂಡಗಳಿಗೆ ರವಾನಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ನಾಯಕ ಕೆ.ಎಲ್ ರಾಹುಲ್(63) ಆಕರ್ಷಕ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 178 ರನ್ ಬಾರಿಸಿತ್ತು. ಈ ಗುರಿಯನ್ನು ಸಿಎಸ್‌ಕೆ ಆರಂಭಿಕರಾದ ಫಾಫ್ ಡುಪ್ಲೆಸಿಸ್ ಹಾಗೂ ಶೇನ್ ವಾಟ್ಸನ್ ಆಕರ್ಷಕ ಜತೆಯಾಟದ ಮೂಲಕ ಅನಾಯಾಸವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

03:05ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ: ಹೇಗಿದೆ ಪಾರ್ಕಿಂಗ್ ವ್ಯವಸ್ಥೆ? ಏನೆಲ್ಲಾ ಸೌಲಭ್ಯ?
03:21ಐಪಿಎಲ್ ಕಪ್‌ ಗೆಲ್ಲಲೇ ಬೇಕು! ಆರ್‌ಸಿಬಿ ಜೆನ್‌ಝಿ, ಜೆನ್‌ ಆಲ್ಫಾಗೆ ಭಾರೀ ನಿರೀಕ್ಷೆ!
03:09ಆರ್‌ಸಿಬಿ ಈ ಬಾರಿಯೂ ಕಪ್‌ ಗೆಲ್ಲುತ್ತಾ? ಜೆನ್‌ಝಿ, ಜೆನ್‌ ಆಲ್ಫಾ ಫ್ಯಾನ್ಸ್ ಹೇಳೋದೇನು?
03:05ಟಾಪ್ -2 ಸ್ಥಾನಕ್ಕಾಗಿಂದು ಮುಂಬೈ vs ಪಂಜಾಬ್ ಬಿಗ್ ಫೈಟ್
10:21IPL 2021: ಮೆಗಾ ಹರಾಜು ನಡೆದರೆ ಆರ್‌ಸಿಬಿ ಯಾರನ್ನು ಉಳಿಸಿಕೊಳ್ಳುತ್ತೆ?
05:39ಹಳೆಯ ಸಂಪ್ರದಾಯಗಳಿಗೆ ಬ್ರೇಕ್ ಹಾಕಿದ ಮುಂಬೈ ಇಂಡಿಯನ್ಸ್‌..!
07:36ಯಾರಾಗ್ತಾರೆ ಈ ಬಾರಿಯ ಐಪಿಎಲ್ ಚಾಂಪಿಯನ್..?
04:15IPL 2020 ಫೈನಲ್; ಚೊಚ್ಚಲ ಪ್ರಶಸ್ತಿ ಮುಡಿಗೇರಿಸುತ್ತಾ ಡೆಲ್ಲಿ ಕ್ಯಾಪಿಟಲ್ಸ್!
07:51IPL 2020: ಹೈದರಾಬಾದ್ ಮಣಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸುತ್ತಾ ಡೆಲ್ಲಿ ಕ್ಯಾಪಿಟಲ್ಸ್?
03:04IPL 2020: 13ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಯಾರು?