ಹೊಡಿಬಡಿಯಾಟದಲ್ಲಿ ಡೆತ್ ಓವರ್ ಬ್ಯಾಟಿಂಗ್ ನೋಡುವುದೇ ಕಣ್ಣಿಗೆ ಹಬ್ಬ. ಈ ಬಾರಿಯ ಡೆತ್ ಓವರ್ ಸ್ಟ್ರೈಕ್‌ರೇಟ್‌ಗಾಗಿ ಮೂವರು ಬ್ಯಾಟ್ಸ್‌ಮನ್‌ಗಳು ಸ್ಪರ್ಧೆಗಿಳಿದಿದ್ದಾರೆ. ಅದರಲ್ಲೂ ವಿಶೇಷವೆಂದರೆ ಈ ಸ್ಪರ್ಧೆಯಲ್ಲಿರುವ ಮೂವರು ಭಾರತೀಯರೇ ಎನ್ನುವುದು ಮತ್ತೊಂದು ವಿಶೇಷ.
ಬೆಂಗಳೂರು(ಸೆ.15): ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಜಗತ್ತಿನಾದ್ಯಂತ ಪ್ರಖ್ಯಾತಿ ಗಳಿಸಿರುವ ಐಪಿಎಲ್ ಟೂರ್ನಿ ರೋಚಕತೆ ಹೇಗಿರುತ್ತದೆ ಎಂದರೆ ಯಾವ ಥ್ರಿಲ್ಲರ್ ಮೂವಿಗಳಿಗೂ ಕಡಿಮೆಯಿಲ್ಲ ಎನ್ನುವಂತಿರುತ್ತದೆ.
ಅದರಲ್ಲೂ ಹೊಡಿಬಡಿಯಾಟದಲ್ಲಿ ಡೆತ್ ಓವರ್ ಬ್ಯಾಟಿಂಗ್ ನೋಡುವುದೇ ಕಣ್ಣಿಗೆ ಹಬ್ಬ. ಈ ಬಾರಿಯ ಡೆತ್ ಓವರ್ ಸ್ಟ್ರೈಕ್‌ರೇಟ್‌ಗಾಗಿ ಮೂವರು ಬ್ಯಾಟ್ಸ್‌ಮನ್‌ಗಳು ಸ್ಪರ್ಧೆಗಿಳಿದಿದ್ದಾರೆ. ಅದರಲ್ಲೂ ವಿಶೇಷವೆಂದರೆ ಈ ಸ್ಪರ್ಧೆಯಲ್ಲಿರುವ ಮೂವರು ಭಾರತೀಯರೇ ಎನ್ನುವುದು ಮತ್ತೊಂದು ವಿಶೇಷ.
13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಲಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಆತಿಥ್ಯ ವಹಿಸಿದೆ. ದುಬೈ, ಅಬುಧಾಬಿ ಹಾಗೂ ಶಾರ್ಜಾದಲ್ಲಿ ಪಂದ್ಯಾವಳಿಗಳು ಜರುಗಲಿವೆ.