ದಿನೇಶ್ ಕಾರ್ತಿಕ್ ಏಕಾಏಕಿ ಕೆಕೆಆರ್ ನಾಯಕತ್ವ ತ್ಯಜಿಸಿದ್ದೇಕೆ?

ದಿನೇಶ್ ಕಾರ್ತಿಕ್ ಏಕಾಏಕಿ ಕೆಕೆಆರ್ ನಾಯಕತ್ವ ತ್ಯಜಿಸಿದ್ದೇಕೆ?

Suvarna News   | Asianet News
Published : Oct 18, 2020, 06:41 PM IST

ದಿನೇಶ್ ಕಾರ್ತಿಕ್ ತಾವು ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಕೇಂದ್ರಿಕರಿಸುವುದಕ್ಕಾಗಿ, ಈ ಮೂಲಕ ತಂಡಕ್ಕೆ ನೆರವಾಗಲು ಕೆಕೆಆರ್ ನಾಯಕತ್ವ ತ್ಯಜಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.

ದುಬೈ(ಅ.18): ಮಿಲಿಯನ್ ಡಾಲರ್ ಟೂರ್ನಿಯಾದ ಐಪಿಎಲ್‌ನಲ್ಲಿ ದಿನಬೆಳಕಾದರೆ ಹಲವಾರು ಅಚ್ಚರಿಯ ಸಂಗತಿಗಳು ಘಟಿಸುತ್ತಲೇ ಇರುತ್ತವೆ. ಎರಡು ದಿನಗಳ ಹಿಂದಷ್ಟೇ ದಿನೇಶ್ ಕಾರ್ತಿಕ್ ಕೋಲ್ಕತ ನೈಟ್‌ ರೈಡರ್ಸ್ ನಾಯಕತ್ವದಿಂದ ದಿಢೀರ್ ಎನ್ನುವಂತೆ ಕೆಳಕ್ಕಿಳಿದು ಅಚ್ಚರಿ ಮೂಡಿಸಿದ್ದರು.

ದಿನೇಶ್ ಕಾರ್ತಿಕ್ ತಾವು ಬ್ಯಾಟಿಂಗ್‌ನತ್ತ ಹೆಚ್ಚು ಗಮನ ಕೇಂದ್ರಿಕರಿಸುವುದಕ್ಕಾಗಿ, ಈ ಮೂಲಕ ತಂಡಕ್ಕೆ ನೆರವಾಗಲು ಕೆಕೆಆರ್ ನಾಯಕತ್ವ ತ್ಯಜಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.

ಆದರೆ ದಿನೇಶ್ ಕಾರ್ತಿಕ್ ಸ್ವಯಂ ನಿರ್ಧಾರದಿಂದ ನಾಯಕತ್ವ ತ್ಯಜಿಸಿದ್ರಾ ಅಥವಾ ಡಿಕೆಯನ್ನು ಕೆಕೆಆರ್ ಫ್ರಾಂಚೈಸಿ ನಾಯಕತ್ವ ಹುದ್ದೆಯಿಂದ ಕೆಳಕ್ಕಿಳಿಸಿತಾ ಎನ್ನುವ ಅನುಮಾನ ಜೋರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.