IPL 2020: ಅಬ್ಬಾ ವೀಕೆಂಡ್ 2 ಮ್ಯಾಚ್ ಮರೆಯೋಕೆ ಆಗುತ್ತಾ..?

IPL 2020: ಅಬ್ಬಾ ವೀಕೆಂಡ್ 2 ಮ್ಯಾಚ್ ಮರೆಯೋಕೆ ಆಗುತ್ತಾ..?

Suvarna News   | Asianet News
Published : Oct 18, 2020, 01:17 PM IST

ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಭರ್ಜರಿ ಗೆಲುವನ್ನು ತಂದುಕೊಟ್ಟರು. ಇನ್ನೊಂದು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶಿಖರ್ ಧವನ್ ಹಾಗೂ ಅಕ್ಷರ್ ಪಟೇಲ್ ಡೆಲ್ಲಿಗೆ ರೋಚಕ ಗೆಲುವು ತಂದಿತ್ತರು.

ಬೆಂಗಳೂರು(ಅ.18): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಶನಿವಾರ ನಡೆದ 2 ಪಂದ್ಯಗಳು ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯನ್ನೇ ನೀಡಿವೆ. ಮೊದಲ ಪಂದ್ಯದಲ್ಲಿ ಎಬಿಡಿ ಶೋ ಆದರೆ, ಎರಡನೇ ಪಂದ್ಯದಲ್ಲಿ ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಹೀರೋ ಆಗಿ ಮೆರೆದಾಡಿದರು.

ಹೌದು, ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಭರ್ಜರಿ ಗೆಲುವನ್ನು ತಂದುಕೊಟ್ಟರು. ಇನ್ನೊಂದು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಶಿಖರ್ ಧವನ್ ಹಾಗೂ ಅಕ್ಷರ್ ಪಟೇಲ್ ಡೆಲ್ಲಿಗೆ ರೋಚಕ ಗೆಲುವು ತಂದಿತ್ತರು.

ರಾಜಸ್ಥಾನ ರಾಯಲ್ಸ್ ಕೈಯಲ್ಲಿದ್ದ ಪಂದ್ಯವನ್ನು ಎಬಿ ಡಿವಿಲಿಯರ್ಸ್ ಪಾಲಾಗುವಂತೆ ಆಡಿದ ರೀತಿಯೇ ಅಮೋಘ. ಇನ್ನು ಸಿಎಸ್‌ಕೆ ಎದುರು ಧವನ್ ಚೊಚ್ಚಲ ಶತಕ ಬಾರಿಸಿ ಡೆಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವೀಕೆಂಡ್‌ನ 2 ಪಂದ್ಯಗಳು ಹೇಗಿದ್ದವು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.