IPL 2020: ಪ್ರಾಕ್ಟೀಸ್‌ ಜತೆ ಮಸ್ತ್ ಮಜಾ ಮಾಡ್ತಿದೆ RCB ಪಡೆ

IPL 2020: ಪ್ರಾಕ್ಟೀಸ್‌ ಜತೆ ಮಸ್ತ್ ಮಜಾ ಮಾಡ್ತಿದೆ RCB ಪಡೆ

Suvarna News   | Asianet News
Published : Sep 14, 2020, 03:27 PM IST

ಕಪ್ ಗೆಲ್ಲದಿದ್ದರೂ ಅತಿಹೆಚ್ಚು ಎಂಟರ್‌ಟೈನ್‌ಮೆಂಟ್ ನೀಡಿದ ತಂಡವೆಂದರೆ ಅದು ನಮ್ಮ RCB ತಂಡ. ಇದೀಗ ಬೌಲರ್‌ಗಳ ತಮ್ಮ ಯಡವಟ್ಟನ್ನು ತಿದ್ದಿಕೊಳ್ಳಲು ಕೋಚ್‌ಗಳ ಸಹಾಯದಿಂದ ಹೊಸ ಹೊಸ ಪ್ರಯೋಗ ನಡೆಸುತ್ತಿದ್ದಾರೆ.

ಬೆಂಗಳೂರು(ಸೆ.14): ಕಳೆದ 12 ಆವೃತ್ತಿಗಳಲ್ಲಿ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಇದೀಗ ವಿಭಿನ್ನ ರಣತಂತ್ರದೊಂದಿಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದೆ. 

ಕಪ್ ಗೆಲ್ಲದಿದ್ದರೂ ಅತಿಹೆಚ್ಚು ಎಂಟರ್‌ಟೈನ್‌ಮೆಂಟ್ ನೀಡಿದ ತಂಡವೆಂದರೆ ಅದು ನಮ್ಮ RCB ತಂಡ. ಇದೀಗ ಬೌಲರ್‌ಗಳ ತಮ್ಮ ಯಡವಟ್ಟನ್ನು ತಿದ್ದಿಕೊಳ್ಳಲು ಕೋಚ್‌ಗಳ ಸಹಾಯದಿಂದ ಹೊಸ ಹೊಸ ಪ್ರಯೋಗ ನಡೆಸುತ್ತಿದ್ದಾರೆ.

ಇದೀಗ ಬೆಂಗಳೂರು ತಂಡದ ಸ್ಪಿನ್ ಹಾಗೂ ವೇಗದ ಬೌಲರ್‌ಗಳಿಗೆ ಕೋಚ್‌ ಯಾರ್ಕರ್ ಚಾಲೆಂಜ್ ನೀಡಿದ್ದರು. ವೇಗದ ಬೌಲರ್‌ಗಳು ಸರಿಯಾಗಿ ಯಾರ್ಕರ್ ಹಾಕಿದಾಗಲೆಲ್ಲ ನಾಯಕ ವಿರಾಟ್ ಕೊಹ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ