ಐಪಿಎಲ್ 2020: ಮೂರನೇ ವಾರದಲ್ಲಿ RCB ಪ್ರದರ್ಶನ ಹೇಗಿತ್ತು?

ಐಪಿಎಲ್ 2020: ಮೂರನೇ ವಾರದಲ್ಲಿ RCB ಪ್ರದರ್ಶನ ಹೇಗಿತ್ತು?

Naveen Kodase   | Asianet News
Published : Oct 12, 2020, 12:37 PM IST

ಮೂರನೇ ವಾರದ ಮುಕ್ತಾಯದ ವೇಳೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟಾರೆ 6 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 2 ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಬೆಂಗಳೂರು(ಅ.12): 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ ಮೂರು ವಾರಗಳು ಕಳೆದಿವೆ. ಮೂರನೇ ವಾರದಲ್ಲಿ ವಿರಾಟ್ ಕೊಹ್ಲಿ ಪಡೆ ಎರಡು ಪಂದ್ಯಗಳನ್ನಾಡಿ ಒಂದು ಸೋಲು ಹಾಗೂ ಒಂದು ಗೆಲುವು ಕಾಣುವ ಮೂಲಕ ಸಮಾನ ಗೌರವ ಪಡೆದಿದೆ.

ಮೂರನೇ ವಾರದ ಮುಕ್ತಾಯದ ವೇಳೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟಾರೆ 6 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 2 ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಮೂರನೇ ವಾರದ ಆರ್‌ಸಿಬಿ ಪಾಲಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಎದುರು ಶರಣಾಗಿದ್ದ ವಿರಾಟ್ ಪಡೆ, ಆ ಬಳಿಕ ಸಿಎಸ್‌ಕೆ ಎದುರು ಭರ್ಜರಿ ಗೆಲುವು ದಾಖಲಿಸುವ ಮೂಲಕ ಗೆಲುವಿನ ಲಯಕ್ಕೆ ಮರಳಿತ್ತು. ಮೂರನೇ ವಾರದಲ್ಲಿ ಆರ್‌ಸಿಬಿ ಪ್ರದರ್ಶನ ಹೇಗಿತ್ತು? ತಂಡಕ್ಕೆ ಸಿಕ್ಕಿದ್ದೇನು? ತಂಡ ಸುಧಾರಿಸಿಕೊಳ್ಳಬೇಕಿದ್ದು ಎಲ್ಲಿ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.