IPL 2020: ಮುಂಬೈ ಎದುರು ಹೀನಾಯ ಸೋಲು ಕಂಡ ಪಂಜಾಬ್..!

IPL 2020: ಮುಂಬೈ ಎದುರು ಹೀನಾಯ ಸೋಲು ಕಂಡ ಪಂಜಾಬ್..!

Suvarna News   | Asianet News
Published : Oct 02, 2020, 01:37 PM IST

ಪ್ರೀತಿ ಝಿಂಟಾ ಪಡೆಯಲ್ಲಿ ಬಲಾಢ್ಯ ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳಿದ್ದರೂ ಮುಂಬೈ ಎದುರು ಪಂಜಾಬ್ ಆಟ ನಡೆಯಲಿಲ್ಲ. ಹಾಲಿ ಚಾಂಪಿಯನ್ಸ್ ರೀತಿಯಲ್ಲೇ ಸೆಣಸಾಟ ನಡೆಸಿದ ಮುಂಬೈ ಇಂಡಿಯನ್ಸ್ ಸುಲಭ ಗೆಲುವು ದಾಖಲಿಸಿತು.
 
ಅಬುಧಾಬಿ(ಅ.02): ತೀವ್ರ ಪೈಪೋಟಿ ನಿರೀಕ್ಷಿಸಲಾಗಿದ್ದ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ನಡುವಿನ ಪಂದ್ಯವನ್ನು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಅನಾಯಾಸವಾಗಿ ಗೆದ್ದುಕೊಂಡಿದೆ.

ಪ್ರೀತಿ ಝಿಂಟಾ ಪಡೆಯಲ್ಲಿ ಬಲಾಢ್ಯ ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ಗಳಿದ್ದರೂ ಮುಂಬೈ ಎದುರು ಪಂಜಾಬ್ ಆಟ ನಡೆಯಲಿಲ್ಲ. ಹಾಲಿ ಚಾಂಪಿಯನ್ಸ್ ರೀತಿಯಲ್ಲೇ ಸೆಣಸಾಟ ನಡೆಸಿದ ಮುಂಬೈ ಇಂಡಿಯನ್ಸ್ ಸುಲಭ ಗೆಲುವು ದಾಖಲಿಸಿತು.

ಮುಂಬೈ ಪರ ಬ್ಯಾಟಿಂಗ್‌ನಲ್ಲಿ ನಾಯಕ ರೋಹಿತ್ ಶರ್ಮಾ, ಕಿರಾನ್ ಪೊಲ್ಲಾರ್ಡ್ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರಿಸಿದರೆ, ಬೌಲರ್‌ಗಳು ಸಂಘಟಿತ ಪ್ರದರ್ಶನ ತೋರುವ ಮೂಲಕ ತಂಡ ಅನಾಯಾಸವಾಗಿ ಗೆಲುವಿನ ನಗೆ ಬೀರುವಂತೆ ಮಾಡಿದರು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.