ಸನ್‌ರೈಸರ್ಸ್ ಹೊರದಬ್ಬಿ ಪ್ಲೇ ಆಫ್‌ಗೇರುತ್ತಾ ಆರ್‌ಸಿಬಿ?

ಸನ್‌ರೈಸರ್ಸ್ ಹೊರದಬ್ಬಿ ಪ್ಲೇ ಆಫ್‌ಗೇರುತ್ತಾ ಆರ್‌ಸಿಬಿ?

Naveen Kodase   | Asianet News
Published : Oct 31, 2020, 03:44 PM IST

7.30ಕ್ಕೆ ಆರಂಭವಾಗಲಿರುವ ಎರಡನೇ ಪಂದ್ಯದಲ್ಲಿಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಶಾರ್ಜಾ ಮೈದಾನದಲ್ಲಿ ಎದುರಿಸಲಿದೆ.

ಬೆಂಗಳೂರು(ಅ.31): 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಸೂಪರ್ ಶನಿವಾರದಲ್ಲಿಂದು 2 ಹೈವೋಲ್ಟೇಜ್ ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಇನ್ನು 7.30ಕ್ಕೆ ಆರಂಭವಾಗಲಿರುವ ಎರಡನೇ ಪಂದ್ಯದಲ್ಲಿಂದು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವಿಂದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಶಾರ್ಜಾ ಮೈದಾನದಲ್ಲಿ ಎದುರಿಸಲಿದೆ.

ಈ ಎರಡು ಪಂದ್ಯಗಳು ಹೇಗಿರಲಿದೆ, ಸೋಲು-ಗೆಲುವುಗಳು ಪ್ಲೇ ಆಫ್‌ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ? 2 ಪಂದ್ಯಗಳ 4 ತಂಡಗಳ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ