IPL 2020: ಪಂಜಾಬ್‌ನಿಂದ ಗೆಲುವು ಡೆಲ್ಲಿ ಪಾಲಾಗಿದ್ದು ಹೇಗೆ..?

IPL 2020: ಪಂಜಾಬ್‌ನಿಂದ ಗೆಲುವು ಡೆಲ್ಲಿ ಪಾಲಾಗಿದ್ದು ಹೇಗೆ..?

Suvarna News   | Asianet News
Published : Sep 21, 2020, 02:33 PM IST

ಮೊದಲು ಬ್ಯಾಟ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ಕಳೆದುಕೊಂಡು 157 ರನ್‌ ಬಾರಿಸಿತ್ತು. ಇದಕ್ಕುತ್ತರವಾಗಿ ಕಿಂಗ್ಸ್ ಇಲೆವನ್ ಪಂಜಾಬ್‌ ಕೂಡಾ 8 ವಿಕೆಟ್‌ ಕಳೆದುಕೊಂಡ 157 ರನ್ ಬಾರಿಸಿತು. ಡೆಲ್ಲಿ ಪರ ಸ್ಟೋನಿಸ್ ಆಲ್ರೌಂಡ್ ಪ್ರದರ್ಶನ ತೋರಿದರೆ, ಪಂಜಾಬ್ ಪರ ಮಯಾಂಕ್ ಅಗರ್‌ವಾಲ್ ಏಕಾಂಗಿ ಹೋರಾಟ ನೀಡಿದರು.

ದುಬೈ(ಸೆ.21): ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ನಡುವಿನ ಪಂದ್ಯ ರೋಚಕವಾಗಿ ಅಂತ್ಯಗೊಂಡಿದ್ದು, ಸೂಪರ್ ಓವರ್ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಯಿತು.

ಮೊದಲು ಬ್ಯಾಟ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ಕಳೆದುಕೊಂಡು 157 ರನ್‌ ಬಾರಿಸಿತ್ತು. ಇದಕ್ಕುತ್ತರವಾಗಿ ಕಿಂಗ್ಸ್ ಇಲೆವನ್ ಪಂಜಾಬ್‌ ಕೂಡಾ 8 ವಿಕೆಟ್‌ ಕಳೆದುಕೊಂಡ 157 ರನ್ ಬಾರಿಸಿತು. ಡೆಲ್ಲಿ ಪರ ಸ್ಟೋನಿಸ್ ಆಲ್ರೌಂಡ್ ಪ್ರದರ್ಶನ ತೋರಿದರೆ, ಪಂಜಾಬ್ ಪರ ಮಯಾಂಕ್ ಅಗರ್‌ವಾಲ್ ಏಕಾಂಗಿ ಹೋರಾಟ ನೀಡಿದರು.

ಆರಂಭದಿಂದಲೂ ಪಂಜಾಬ್ ಹಿಡಿತದಲ್ಲಿದ್ದ ಪಂದ್ಯವನ್ನು ಸ್ಟೋನಿಸ್ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾದರು. ಪಂಜಾಬ್ ತಂಡದ ಕ್ರಿಸ್ ಜೋರ್ಡನ್ ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಫೇಲ್ ಆದರು. ಐಪಿಎಲ್‌ನ ಎರಡನೇ ಪಂದ್ಯ ಹೇಗಿತ್ತು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.