ಐಪಿಎಲ್ 2020: ಧೋನಿ ಪಡೆಗೆ ಹ್ಯಾಟ್ರಿಕ್  ಸೋಲು; ಹೈದರಾಬಾದ್ ಗೆದ್ದಿದ್ದು ಹೇಗೆ?

ಐಪಿಎಲ್ 2020: ಧೋನಿ ಪಡೆಗೆ ಹ್ಯಾಟ್ರಿಕ್ ಸೋಲು; ಹೈದರಾಬಾದ್ ಗೆದ್ದಿದ್ದು ಹೇಗೆ?

Suvarna News   | Asianet News
Published : Oct 03, 2020, 01:12 PM IST

ಟಾಸ್ ಗೆದ್ದ ಹೈದರಾಬಾದ್ ತಂಡ ನಿರೀಕ್ಷೆಯಂತೆಯೇ ಬ್ಯಾಟಿಂಗ್ ತೆಗೆದುಕೊಂಡರು. ಇದರ ಜತೆಗೆ ಡೇವಿಡ್ ವಾರ್ನರ್ ಪಡೆ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. 165 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಮತ್ತೊಮ್ಮೆ ಯಶಸ್ವಿಯಾಗಿ ಗುರಿ ಬೆನ್ನತ್ತುವಲ್ಲಿ ವಿಫಲವಾಯಿತು.

ದುಬೈ(ಅ.03): ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಸೋಲಿನ ಸರಪಳಿ ಮತ್ತೆ ಮುಂದುವರೆದಿದ್ದು, 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ಪಡೆ ಹ್ಯಾಟ್ರಿಕ್ ಸೋಲು ಕಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಹೈದರಾಬಾದ್ ತಂಡ ಗೆಲುವಿನ ನಗೆ ಬೀರಿದೆ.

ಹೌದು, ಟಾಸ್ ಗೆದ್ದ ಹೈದರಾಬಾದ್ ತಂಡ ನಿರೀಕ್ಷೆಯಂತೆಯೇ ಬ್ಯಾಟಿಂಗ್ ತೆಗೆದುಕೊಂಡರು. ಇದರ ಜತೆಗೆ ಡೇವಿಡ್ ವಾರ್ನರ್ ಪಡೆ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. 165 ರನ್‌ಗಳ ಗುರಿ ಬೆನ್ನತ್ತಿದ ಚೆನ್ನೈ ಮತ್ತೊಮ್ಮೆ ಯಶಸ್ವಿಯಾಗಿ ಗುರಿ ಬೆನ್ನತ್ತುವಲ್ಲಿ ವಿಫಲವಾಯಿತು.

ಧೋನಿ ಕೊನೆಯವರೆಗೂ ಬ್ಯಾಟಿಂಗ್ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಚೆನ್ನೈ ಸೋಲಿಗೆ ಕಾರಣವೇನು? ಹೈದರಾಬಾದ್ ತಂಡ ಪಂದ್ಯವನ್ನು ಗೆದ್ದಿದ್ದು ಹೇಗೆ ಎನ್ನುವುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ ನೋಡಿ.