ಐಪಿಎಲ್ 2020: CSK vs RR ಪಂದ್ಯದಲ್ಲಿ ಸಿಕ್ಸರ್‌ಗಳ ಸುರಿಮಳೆ; ರಾಯಲ್ಸ್ ಕೊರಳಿಗೆ ಜಯದ ಮಾಲೆ

ಐಪಿಎಲ್ 2020: CSK vs RR ಪಂದ್ಯದಲ್ಲಿ ಸಿಕ್ಸರ್‌ಗಳ ಸುರಿಮಳೆ; ರಾಯಲ್ಸ್ ಕೊರಳಿಗೆ ಜಯದ ಮಾಲೆ

Suvarna News   | Asianet News
Published : Sep 23, 2020, 03:00 PM ISTUpdated : Sep 23, 2020, 03:07 PM IST

ಸಂಜು ಸ್ಯಾಮ್ಸನ್‌, ಸ್ಟೀವ್ ಸ್ಮಿತ್ ಹಾಗೂ ಕೊನೆಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಸಿಡಿಸಿದ 4 ಅಮೋಘ ಸಿಕ್ಸರ್‌ಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ 216 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 200 ರನ್‌ ಗಳಿಸಲಷ್ಟೇ ಶಕ್ತವಾಯಿತು.
 
ಶಾರ್ಜಾ(ಸೆ.23): ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸಂಘಟಿತ ಪ್ರದರ್ಶನ ತೋರಿದ ರಾಜಸ್ಥಾನ ರಾಯಲ್ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ರಾಜಸ್ಥಾನ ತಂಡ 16 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಸಂಜು ಸ್ಯಾಮ್ಸನ್‌, ಸ್ಟೀವ್ ಸ್ಮಿತ್ ಹಾಗೂ ಕೊನೆಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಸಿಡಿಸಿದ 4 ಅಮೋಘ ಸಿಕ್ಸರ್‌ಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ 216 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 200 ರನ್‌ ಗಳಿಸಲಷ್ಟೇ ಶಕ್ತವಾಯಿತು.

ರಾಜಸ್ಥಾನ ಮೊದಲ ಪಂದ್ಯವನ್ನು ಗೆದ್ದಿದ್ದು ಹೇಗೆ? ಸೋಲು -ಗೆಲುವಿನ ಅಂತರಕ್ಕೆ ಯಾರು ಕಾರಣ? ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋತಿದ್ದೆಲ್ಲಿ ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.