
ಧನತೇರಸ್ ಎಂದರೆ ಚಿನ್ನ, ಬೆಳ್ಳಿ ಮತ್ತು ಹೊಸ ಪಾತ್ರೆಗಳನ್ನು ಖರೀದಿಸುವ ಸಂಭ್ರಮ. ಈ ದಿನ ಶುಭ ವಸ್ತುಗಳನ್ನು ಮನೆಗೆ ತಂದರೆ ಸುಖ-ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆಯಿದೆ. ಆದರೆ ಕೆಲವು ವಸ್ತುಗಳನ್ನು ಧನತೇರಸ್ ದಿನ ಖರೀದಿಸುವುದು ಒಳ್ಳೆಯದಲ್ಲ ಎಂದೂ ಹೇಳಲಾಗುತ್ತದೆ. ಇಂತಹ ವಸ್ತುಗಳನ್ನು ಮನೆಗೆ ತರುವುದರಿಂದ ನಕಾರಾತ್ಮಕತೆ ಮತ್ತು ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು ಎಂಬ ಅಭಿಪ್ರಾಯವಿದೆ. ಹೀಗಾಗಿ ಧನತೇರಸ್ ಶಾಪಿಂಗ್‌ಗೆ ಮಾರುಕಟ್ಟೆಗೆ ತೆರಳುವ ಮುನ್ನ ಯಾವ ವಸ್ತುಗಳನ್ನು ಖರೀಸಿದಬಾರದು ಅನ್ನೋದನ್ನು ನೋಡೋಣ.
ಧನತೇರಸ್‌ನೊಂದಿಗೆ ಐದು ದಿನಗಳ ದೀಪಾವಳಿ ಆರಂಭವಾಗುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. 2026ರಲ್ಲಿ ನವೆಂಬರ್ 6ರಂದು ಧನತೇರಸ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮಿ ದೇವಿ ಮತ್ತು ಭಗವಾನ್ ಧನ್ವಂತರಿಯನ್ನು ಪೂಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಯಾವ ವಸ್ತುಗಳನ್ನು ಖರೀದಿಸಬಾರದು ನೋಡೋಣ.
1. ಕಬ್ಬಿಣದ ವಸ್ತುಗಳು
ಧನತೇರಸ್ ದಿನ ಕಬ್ಬಿಣದಿಂದ ತಯಾರಿಸಿದ ವಸ್ತುಗಳನ್ನು ಖರೀದಿಸುವುದು ಶುಭವಲ್ಲ. ಶಾಸ್ತ್ರಗಳ ಪ್ರಕಾರ, ಕಬ್ಬಿಣ ಶನಿದೇವನಿಗೆ ಸಂಬಂಧಿಸಿದ ಲೋಹ. ಈ ದಿನ ಕಬ್ಬಿಣದ ವಸ್ತುಗಳನ್ನು ಮನೆಗೆ ತಂದರೆ ಜೀವನದಲ್ಲಿ ತೊಂದರೆಗಳು ಹೆಚ್ಚಾಗಬಹುದು ಎಂಬ ನಂಬಿಕೆಯಿದೆ. ಹೀಗಾಗಿ ಧನತೇರಸ್ ಶಾಪಿಂಗ್ ಮಾಡುವಾಗ ಕಬ್ಬಿಣದ ವಸ್ತುಗಳನ್ನು ಖರೀದಿಸಬೇಡಿ.
2. ಗಾಜಿನಿಂದ ತಯಾರಿಸಿದ ವಸ್ತುಗಳು
ಗಾಜಿನ ಪಾತ್ರೆಗಳು, ಅಲಂಕಾರಿಕ ವಸ್ತುಗಳು ಅಥವಾ ಗಾಜಿನಿಂದ ತಯಾರಿಸಿದ ಇತರ ವಸ್ತುಗಳನ್ನು ಖರೀದಿಸಬಾರದು. ಯಾಕಂದ್ರೆ ಗಾಜಿಗೂ ರಾಹು ಗ್ರಹಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಧನತೇರಸ್ ದಿನ ಗಾಜಿನ ವಸ್ತುಗಳನ್ನು ಮನೆಗೆ ತಂದರೆ ನಕಾರಾತ್ಮಕತೆ ಹೆಚ್ಚಾಗಬಹುದು ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಈ ದಿನ ಗಾಜಿನ ವಸ್ತುಗಳ ಖರೀದಿಯನ್ನು ಶುಭವೆಂದು ಪರಿಗಣಿಸುವುದಿಲ್ಲ.
3. ಚಾಕು ಮತ್ತು ಕತ್ತರಿ
ಧನತೇರಸ್ ದಿನ ಚಾಕು, ಕತ್ತರಿ, ಸೂಜಿ, ಮೊಳೆ ಮತ್ತು ಪಿನ್‌ನಂತಹ ಚೂಪಾದ ವಸ್ತುಗಳನ್ನು ಖರೀದಿಸುವುದರಿಂದ ದೂರವಿರಬೇಕು. ಇಂತಹ ವಸ್ತುಗಳನ್ನು ಈ ದಿನ ಮನೆಗೆ ತರುವುದರಿಂದ ಕುಟುಂಬದಲ್ಲಿ ಒತ್ತಡ ಮತ್ತು ಮನಸ್ತಾಪ ಉಂಟಾಗಬಹುದು ಎಂದು ಶಾಸ್ತ್ರ ಹೇಳುತ್ತದೆ.
4. ಕಪ್ಪು ಬಣ್ಣದ ವಸ್ತುಗಳು
ಸನಾತನ ಧರ್ಮದಲ್ಲಿ ಶುಭ ಸಮಾರಂಭ ಮತ್ತು ಪೂಜೆಗಳ ಸಮಯದಲ್ಲಿ ಕಪ್ಪು ಬಣ್ಣವನ್ನು ಬಳಸುವುದಿಲ್ಲ. ಇದೇ ನಂಬಿಕೆಯ ಹಿನ್ನೆಲೆಯಲ್ಲಿ ಧನತೇರಸ್ ದಿನ ಕಪ್ಪು ಬಣ್ಣದ ಬಟ್ಟೆಗಳು ಅಥವಾ ಈ ಬಣ್ಣದ ಇತರ ವಸ್ತುಗಳನ್ನು ಖರೀದಿಸಬಾರದು ಎನ್ನಲಾಗುತ್ತದೆ. ಇದನ್ನ ನಕಾರಾತ್ಮಕ ವಸ್ತು ಎನ್ನಲಾಗುವುದು.