ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾಯ್ತು ಬೈಕ್ : ಪಾರಾದ ಸವಾರ

Published : Oct 15, 2019, 03:22 PM IST
ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾಯ್ತು ಬೈಕ್ : ಪಾರಾದ ಸವಾರ

ಸಾರಾಂಶ

ನೋಡನೋಡುತ್ತಿದ್ದಂತೆಯೆ ಬೈಕ್ ಹೊತ್ತಿ ಉರಿದಿದ್ದು, ಸವಾರ ಅದೃಷ್ವವಶಾತ್ ಪಾರಾಗಿದ್ದಾರೆ. 

ಕಾರವಾರ [ಅ.15]: ಸಿದ್ದಾಪುರ-ಕುಮಟಾ ಮಾರ್ಗದ ದೊಡ್ಮನೆ ಘಾಟ್ ಬಳಿ ಸೋಮವಾರ ಬೈಕ್ ಸ್ಕಿಡ್ ಆಗಿ ಬಿದ್ದು ಜಿಪಂ ಎಂಜಿನಿಯರ್ ಬೈಕ್‌ಗೆ ಬೆಂಕಿ ತಲುಲಿ ಸಂಪೂರ್ಣ ಹೊತ್ತಿ ಉರಿದಿದೆ.

ಜಿಪಂ ಎಂಜಿನಿಯರ್ ಆಗಿ ಸಿದ್ದಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಣಿಕಂಠ ಪೂಜಾರಿ ಬೈಕ್ ಸುಟ್ಟು ಕರಕಲಾಗಿದೆ. ಹೊನ್ನಾವರ ತಾಲೂಕಿನ ಕಡತೋಕದಿಂದ ಸಿದ್ದಾಪುರಕ್ಕೆ ಬಜಾಜ್ ವಿಕ್ರಾಂತ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹುಲ್ದಾರ್‌ಗದ್ದೆ ಬಳಿ ಸ್ಕಿಡ್ ಆಗಿ ಬಿದ್ದಿದ್ದಾರೆ. ನೋಡ ನೋಡುತ್ತಿದ್ದಂತೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಷಯ ತಿಳಿದು ಹತ್ತಿರದಲ್ಲಿದವರು ಆಗಮಿಸಿದ್ದರಾದರೂ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಮಣಿಕಂಠ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಪೊಲೀಸ್ ದೂರು ದಾಖಲಾಗಿಲ್ಲ. ದೊಡ್ಮನೆ ಘಟ್ಟ ಅತಿ ಹೆಚ್ಚು ತಿರುವುಮುರುವಾಗಿದ್ದು, ರಸ್ತೆ ಕೂಡ ಸಂಪೂರ್ಣ ಹದಗೆಟ್ಟಿದೆ. ಈಗಾಗಲೇ ಹಲವು ಅಪಘಾತಗಳು ನಡೆದಿದ್ದರೂ ಸಂಬಂಧಿಸಿದ ಇಲಾಖೆ ರಸ್ತೆ ದುರಸ್ತಿಗೆ ಮಾತ್ರ ಮುಂದಾಗಿಲ್ಲ. ಈಗಲಾದರೂ ಎಚ್ಚೆತ್ತು ರಸ್ತೆ ದುರಸ್ತಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

PREV
click me!

Recommended Stories

ವೈಭವದ ಶಿರಸಿ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ದಿನಗಣನೆ, ಈ ಬಾರಿ ವಿಶೇಷ ಆಕರ್ಷಣೆಯಾಗಿ ಗದ್ದುಗೆ ಮಂಟಪ
ವೇಗವಾಗಿ ಬಂತು ಹೊಸ ಕಾರು, ಹೋಯ್ತು ಮಗುವಿನ ಪ್ರಾಣ: ತರಬೇತಿ ಇಲ್ಲದ ಚಾಲಕನ ಹುಚ್ಚಾಟಕ್ಕೆ 5 ವರ್ಷದ ಬಾಲಕ ಬಲಿ!