ಹೃದಯ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಾದ ಪದವಿ ವಿದ್ಯಾರ್ಥಿನಿಗೆ ಬೇಕಿದೆ ದಾನಿಗಳ ನೆರವು!

By Suvarna News  |  First Published Jul 29, 2022, 10:57 PM IST

ಪೋಷಕರು ವಿಚ್ಚೇದನ ಪಡೆದು ತಮ್ಮ ದಾರಿ ಹಿಡಿದ್ದಾರೆ. ಆದರೆ ಕುಟುಂಬಸ್ಥರ ನೆರವಿನಿಂದ ಪದವಿ ವ್ಯಾಸಾಂಗ ಮಾಡುತ್ತಿರುವ ಹೊನ್ನಾವರದ ಗೌರಿ ಶ್ರೀಧರ ಹೆಗಡೆ ವಿದ್ಯಾರ್ಥಿನಿಗೆ ತೀವ್ರ ಹೃದಯ ಸಮಸ್ಯೆ ಎದುರಾಗಿದೆ. ಶಸ್ತ್ರಚಿಕಿತ್ಸೆಗೆ 7 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇದಕ್ಕಾಗಿ ದಾನಿಗಳ ನೆರವು ಕೋರಿದ್ದಾರೆ.


ಬೆಂಗಳೂರು(ಜು.29):  ಮಧ್ಯಮ ವರ್ಗದ ಕುಟುಂಬ, ಪೋಷಕರು ದೂರ ದೂರ, ಕುಟಂಬಸ್ಥರ ನೆರವಿನಲ್ಲಿ ಪದವಿ ವ್ಯಾಸಾಂಗ ಮಾಡುತ್ತಿರುವ ಹೊನ್ನವಾರದ ಗೌರಿ ಶ್ರೀಧರ ಹೆಗಡೆ ಅನ್ನೋ ವಿದ್ಯಾರ್ಥಿನಿ ಇದೀಗ ತೀವ್ರ ಹೃದಯ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಹೃದಯ ಕ್ಯಾನ್ಸರ್‌ನಿಂದ ಬಳಲುತ್ತಿರುವ ಗೌರಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದಾರೆ. ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ. ಆದರೆ ಈ ಚಿಕಿತ್ಸೆಗೆ 7 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಹೀಗಾಗಿ ದಾನಿಗಳು ನೆರವಿನ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿನಿ, ಇದೀಗ ವಿಶೇಷ ಮನವಿ ಮಾಡಿದ್ದಾರೆ.

ಕಳೆದ 18 ವರ್ಷದಿಂದ ಗೌರಿಯನ್ನು ಆಕೆಯ ಮಾವ ನಾಗೇಂದ್ರ ಗಣಪತಿ ಹೆಗಡೆ ನೋಡಿಕೊಳ್ಳುತ್ತಿದ್ದಾರೆ. ಇಲ್ಲೀವರೆಗೆ ವಿದ್ಯಾಭ್ಯಾಸ ಮಾಡಲು ಆರ್ಥಿಕ ನೆರವಿನಿಂದ ಹಿಡಿದು ಎಲ್ಲಾ ನೆರವು ನೀಡಿದ್ದಾರೆ. ಆದರೆ ಹೃದಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ತಗಲು 7 ಲಕ್ಷ ರೂಪಾಯಿ ಹೊಂದಿಸಲು ನಾಗೇಂದ್ರ ಗಣಪತಿ ಹೆಗಡೆ ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅತೀ ದೊಡ್ಡ ಮೊತ್ತವಾಗಿರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಗೌರಿ ಚಿಕಿತ್ಸೆಗೆ ದಾನಿಗಳು ನೆರವು ಕೋರಿದ್ದಾರೆ. 

Tap to resize

Latest Videos

ಎಲ್ಲಾ ಕಾಲಕ್ಕೂ ಮೂಸಂಬಿ ಬೆಸ್ಟ್! ಆನಾರೋಗ್ಯವಿದ್ದರೂ ಈ ಹಣ್ಣು ಓಕೆ

ಗೌರಿ ಚಿಕ್ಕಂದಿನಿಂದಲೇ ಹೆತ್ತರ ಪ್ರೀತಿ ವಾತ್ಸಲ್ಯಗಳಿಂದ ವಂಚಿತರಾಗಿದ್ದಾರೆ. ಈಕೆಯ ಆರೋಗ್ಯ ಸಮಸ್ಯೆಗೆ ನಮ್ಮ ಮಟ್ಟದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಸುಧಾರಿಸಿಲ್ಲ. ಹೀಗಾಗಿ ನಾರಾಯಣ ಹೃದಯಾಲದಲ್ಲಿ ದಾಖಲಿಸಿದ್ದೇವೆ. ಜೀವನ್ಮರಣ ಹೋರಾಟ ಮಾಡುತ್ತಿರುವ ಗೌರಿಗೆ 8 ರಿಂದ 10 ದಿನದೊಳಗೆ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಆದರೆ ಇಷ್ಟು ಹಣ ಹೊಂದಿಸಲು ನಮಗೆ ಅಸಾಧ್ಯವಾಗಿದೆ. ನಮ್ಮದು ಬಡ ಕುಟುಂಬವಾಗಿದೆ. ಗೌರಿಯನ್ನು ಬದುಕಿಸಲು ನಾವು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ. ಬದುಕಿ ಬಾಳಬೇಕಾದ ವಿದ್ಯಾರ್ಥಿನಿಗೆ ದಾನಿಗಳ ನೆರವು ಬೇಕಿದೆ. ಸುಂದರ ನಾಳೆಯ ಕನಸು ಕಾಣುತ್ತಿರುವ ಗೌರಿಗೆ ನಿಮ್ಮ ಕೈಲಾದ ಸಹಾಯ ಮಾಡಬೇಕು ಎಂದು ನಾಗೇಂದ್ರ ಗಣಪತಿ ಹೆಗಡೆ ಮನವಿ ಮಾಡಿದ್ದಾರೆ.

ದಾನಿಗಳು ನೆರವು ನೀಡಬೇಕಾದ ಬ್ಯಾಂಕ್ ಖಾತೆ ಸೇರಿದಂತೆ ಇತರ ದಾಖಲೆ ಇಲ್ಲಿದೆ
ಬ್ಯಾಂಕ್ ಖಾತೆ: 3541265530
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
IFSC: CBIN0282543
MICR Code: 581016602


 

click me!