ಡಿಕೆಶಿ ಸಂಕಷ್ಟ ಪರಿಹಾರಕ್ಕೆ ಕೊಲ್ಲೂರಿನಲ್ಲಿ ವಿಶೇಷ ಪ್ರಾರ್ಥನೆ

Published : Oct 22, 2019, 08:33 AM IST
ಡಿಕೆಶಿ ಸಂಕಷ್ಟ ಪರಿಹಾರಕ್ಕೆ ಕೊಲ್ಲೂರಿನಲ್ಲಿ ವಿಶೇಷ ಪ್ರಾರ್ಥನೆ

ಸಾರಾಂಶ

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ಸಂಕಷ್ಟ ನಿವಾರಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸಂಕಷ್ಟದಿಂದ ಪಾರಾಗುವಂತೆ ಅವರ ಆಪ್ತರೊಬ್ಬರು ಸೋಮವಾರ ತಮ್ಮ ವೈಯಕ್ತಿಕ ಶತಚಂಡಿಕಾಯಾಗದ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.

ಉಡುಪಿ(ಅ.22): ಪ್ರಸ್ತುತ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸಂಕಷ್ಟದಿಂದ ಪಾರಾಗುವಂತೆ ಅವರ ಆಪ್ತರೊಬ್ಬರು ಸೋಮವಾರ ತಮ್ಮ ವೈಯಕ್ತಿಕ ಶತಚಂಡಿಕಾಯಾಗದ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರ ಧಾರ್ಮಿಕ ಮಾರ್ಗದರ್ಶಕರೆನ್ನಲಾದ, ಬೆಂಗಳೂರಿನ ವಾಸ್ತುತಜ್ಞ - ಜ್ಯೋತಿಷಿ ಆರಾಧ್ಯ ಎಂಬವರು ಪ್ರತಿ ತಿಂಗಳು ಕುಂದಾಪುರದಕೊಲ್ಲೂರಿನಲ್ಲಿ ಚಂಡಿಕಾಯಾಗ ನಡೆಸುತ್ತಾರೆ.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ಅಂತೆಯೇ ಸೋಮವಾರ ಶತಚಂಡಿಕಾಯಾಗ ನಡೆಸಿದ್ದು, ಈ ಸಂದರ್ಭದಲ್ಲಿ ತಮ್ಮ ಕುಟುಂಬಸ್ಥರ ಹೆಸರುಗಳ ಜೊತೆ ಡಿ.ಕೆ.ಶಿವಕುಮಾರ್‌ ಅವರ ಹೆಸರನ್ನೂ ಹೇಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಹಿರಿಯ ಅರ್ಚಕ ನರಸಿಂಹ ಅಡಿಗ ನೇತೃತ್ವದಲ್ಲಿ ಬಿ.ಎಂ. ಮಂಜುನಾಥ ಅಡಿಗ ಅವರು ಈ ಯಾಗವನ್ನು ನಡೆಸಿದ್ದಾರೆ.

'ಓಟ್ ಬೇಕಾ, ರಸ್ತೆ ಸರಿ ಮಾಡಿ ಬನ್ನಿ', ಕೆಲ್ಸ ಮಾಡ್ಸೋಕೆ ಬ್ಯಾನರ್ ಹಾಕಿದ್ರು ಜನ..!

PREV
click me!

Recommended Stories

ರಿಷಬ್‌ ಶೆಟ್ಟಿ, ವಿಜಯ್ ಕಿರಗಂದೂರು ವ್ಯಾಪಾರಿಗಳು, ದೈವಾರಾಧನೆಯನ್ನ ವ್ಯಾಪಾರಕ್ಕೆ ಹಾಕಿದ್ದಾರೆ: ದೈವಾರಾಧಕ ಬೇಸರ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!