ಉಡುಪಿ SI ಅಮಾನತು ವಿರೋಧ: ಬಿಜೆಪಿ, ಕಾಂಗ್ರೆಸ್ ಒಮ್ಮತ

By Kannadaprabha NewsFirst Published Nov 13, 2019, 12:17 PM IST
Highlights

ರಾಜಕೀಯ ವಿರೋಧಿಗಳಾದ ಬಿಜೆಪಿಯ ಶಾಸಕ ಕೆ.ರಘುಪತಿ ಭಟ್‌ ಮತ್ತು ಕಾಂಗ್ರೆಸ್‌ ನ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಬೇರೆಲ್ಲೂ ವಿಷಯಗಳಲ್ಲಿ ಹಾವು ಮುಂಗುಸಿಯಂತೆ ಪರಸ್ವರ ಆರೋಪಗಳನ್ನು ಮಾಡುತ್ತಾರೆ. ಆದರೆ ಅಚ್ಚರಿ ಎಂದರೆ ಉಡುಪಿ ನಗರ ಠಾಣೆಯ ಎಸೈ ಅಮಾನತಿನ ವಿಷಯದಲ್ಲಿ ಮಾತ್ರ ಇಬ್ಬರ ಅಭಿಪ್ರಾಯವೂ ಒಂದೇ ಆಗಿದೆ!.

ಉಡುಪಿ(ನ.13): ರಾಜಕೀಯ ವಿರೋಧಿಗಳಾದ ಬಿಜೆಪಿಯ ಶಾಸಕ ಕೆ.ರಘುಪತಿ ಭಟ್‌ ಮತ್ತು ಕಾಂಗ್ರೆಸ್‌ ನ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಬೇರೆಲ್ಲೂ ವಿಷಯಗಳಲ್ಲಿ ಹಾವು ಮುಂಗುಸಿಯಂತೆ ಪರಸ್ವರ ಆರೋಪಗಳನ್ನು ಮಾಡುತ್ತಾರೆ. ಆದರೆ ಅಚ್ಚರಿ ಎಂದರೆ ಉಡುಪಿ ನಗರ ಠಾಣೆಯ ಎಸೈ ಅಮಾನತಿನ ವಿಷಯದಲ್ಲಿ ಮಾತ್ರ ಇಬ್ಬರ ಅಭಿಪ್ರಾಯವೂ ಒಂದೇ ಆಗಿದೆ!.

ನಗರ ಠಾಣೆಯ ಎಸೈ ಅನಂತಪದ್ಮನಾಭ ಅವರನ್ನು ಕರ್ತವ್ಯಲೋಪದ ಆರೋಪ ಮೇಲೆ ಅಮಾನತು ಮಾಡಿರುವ ಎಸ್ಪಿ ಅವರ ಕ್ರಮ ಸರಿಯಲ್ಲ, ಈ ವಿಷ​ಯ​ವ​ನ್ನು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಯಿ ಅವರ ಗಮನಕ್ಕೆ ತಂದಿದ್ದು, ಅಮಾನತು ರದ್ದುಗೊಳಿಸಲು ಒತ್ತಾಯಿಸಿದ್ದೇನೆ ಎಂದು ಶಾಸಕ ರಘುಪತಿ ಭಟ್‌ ಅವರು ಟ್ವೀಟ್‌ ಮಾಡಿದ್ದಾರೆ.

I support ur stand . The town SI has been posted to Udupi during my tenure and I have spoken to the higher ups in home dept to revoke his suspension.He is quite a good police official. https://t.co/dmBcaPMhXN

— Pramod Madhwaraj (@PMadhwaraj)

ಇದಕ್ಕೆ ಪ್ರತಿ ಟ್ವೀಟ್‌ ಮಾಡಿರುವ ಮಾಜಿ ಸಚಿವ ಪ್ರಮೋದ್‌ ಅವರು ರಘುಪತಿ ಭಟ್‌ ನಿಲುವನ್ನು ಬೆಂಬಲಿಸಿದ್ದಾರೆ. ಮಾತ್ರವಲ್ಲ, ಎಸೈ ಅನಂತಪದ್ಮನಾಭ ಅವರನ್ನು ತನ್ನ ಶಾಸಕಾವಧಿಯಲ್ಲಿ ಉಡುಪಿಗೆ ನೇಮಿಸಿಕೊಂಡಿದ್ದೆ. ಅವರು ಬಹಳ ಒಳ್ಳೆಯ ಅಧಿಕಾರಿಯಾಗಿದ್ದಾರೆ. ತಾನು ಕೂಡಾ ಗೃಹ ಇಲಾಖೆಯ ಮೇಲಧಿಕಾರಿಗಳೊಂದಿಗೆ ಮಾತನಾಡಿ ಅಮಾನತನ್ನು ರದ್ದುಗೊಳಿಸಲು ಒತ್ತಾಯಿಸಿದ್ದೇನೆ ಎಂದಿದ್ದಾರೆ.

ಉಡುಪಿ ಟೌನ್ ಎಸ್‌ಐ ಅಮಾನತು: ತೀವ್ರ ವಿರೋಧ

click me!