ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಕ್ಯಾರ್ ಚಂಡಮಾರುತ ಉಡುಪಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಾನಿಗೆ ಕಾರಣವಾಗಿದೆ. ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ, ಸಾಕಷ್ಟುಮರಗಳು ಬುಡಮೇಲಾಗಿವೆ, ವಿದ್ಯುತ್ ಕಂಬಗಳೂ ಉರಳಿವೆ. ದೀಪಾವಳಿಯ ಪ್ರಯುಕ್ತ ಕೃಷ್ಣಮಠದ ರಥಬೀದಿಯಲ್ಲಿ ನೂರಾರು ಮಂದಿ ಹೂ- ಹಣ್ಣು ವ್ಯಾಪಾರಿಗಳಿಗೆ, ಮಣ್ಣಿನ ಹಣತೆ ಮಾರುವವರಿಗೆ ಮಳೆಯಿಂದ ತೊಂದರೆಯಾಯಿತು.
ಉಡುಪಿ(ಅ.27): ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಕ್ಯಾರ್ ಚಂಡಮಾರುತ ಉಡುಪಿ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಾನಿಗೆ ಕಾರಣವಾಗಿದೆ. ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ, ಸಾಕಷ್ಟುಮರಗಳು ಬುಡಮೇಲಾಗಿವೆ, ವಿದ್ಯುತ್ ಕಂಬಗಳೂ ಉರಳಿವೆ.
ಶುಕ್ರವಾರ ಹಗಲು ಮತ್ತು ರಾತ್ರಿಯಿಡೀ ಸುರಿದ ಮಳೆ, ಶನಿವಾರ ಬೆಳಗ್ಗೆ ಕೊಂಚ ಕಡಿಮೆಯಾಗಿತ್ತು, ಆದರೆ ಮಧ್ಯಾಹ್ನ ನಂತರ ಮತ್ತೆ ಧಾರಾಕಾರ ಮಳೆಯಾಗಿದೆ. ದೀಪಾವಳಿಯ ಪ್ರಯುಕ್ತ ಕೃಷ್ಣಮಠದ ರಥಬೀದಿಯಲ್ಲಿ ನೂರಾರು ಮಂದಿ ಹೂ- ಹಣ್ಣು ವ್ಯಾಪಾರಿಗಳಿಗೆ, ಮಣ್ಣಿನ ಹಣತೆ ಮಾರುವವರಿಗೆ ಮಳೆಯಿಂದ ತೊಂದರೆಯಾಯಿತು.
undefined
ಒಮಾನ್ ನತ್ತ ತಿರುಗಿದ ಕ್ಯಾರ್; ಮೀನುಗಾರರಿಗೆ ಐಎಂಡಿ ಸೂಚನೆ..
ಮಳೆಯಿಂದ ರಥಬೀದಿಯಲ್ಲಿ ಗೇಣೆತ್ತರಕ್ಕೆ ನೀರು ನಿಲ್ಲುತ್ತಿದ್ದು, ಗ್ರಾಹಕರು ಅಲ್ಲಿಗೆ ಬಾರದ ಕಾರಣ ವ್ಯಾಪಾರಿಗಳಿಗೆ ನಿರಾಸೆಯಾಗಿದೆ. ಮಲ್ಪೆ ಸಮುದ್ರ ತೀರದಲ್ಲಿ ಅಲೆಗಳ ಅರ್ಭಟ ಮುಂದುವರಿದಿದೆ, ಸಮುದ್ರ ತೀರದಲ್ಲಿ ವೀಪರೀತ ಗಾಳಿ ಬೀಸುತ್ತಿದ್ದು, ಮಲ್ಪೆ, ಪಡುಬಿದ್ರಿ, ಮರವಂತೆ ಬೀಚುಗಳಲ್ಲಿ ಕೊರೆತದ ಭೀತಿ ಎದುರಾಗಿದೆ. ಪಡುಬಿದ್ರಿಯವಲ್ಲಿ ಬ್ಲೂಫ್ಲಾಗ್ ಯೋಜನೆಯಡಿ ನಡೆಯುತ್ತಿರುವ ರಸ್ತೆ ಇತ್ಯಾದಿ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯಾಗಿದೆ.
27ರ ವರೆಗೆ ರೆಡ್ ಅಲರ್ಟ್:
ಕರಾವಳಿಯಲ್ಲಿ ಇನ್ನೂ ಒಂದೆರೆಡು ದಿನ ಮಳೆಗಾಳಿಯಾಗುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಅವರು ಅ.27ರ ವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದಾರೆ. ವಿಪರೀತ ಮಳೆಯ ಹಿನ್ನೆಲೆಯಲ್ಲಿ ಶಕ್ರವಾರ ಮತ್ತು ಶನಿವಾರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಶನಿವಾರ ಮುಂಜಾನೆವರೆಗೆ 24 ಗಂಟೆಗಳಲ್ಲಿ ಸರಾಸರಿ 74.90 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 78.70 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 79.80 ಮಿ.ಮೀ.,
ಮಳೆಯಿಂದ ಸಪ್ಪೆಯಾದ ದೀಪಾವಳಿ
ಇಂದಿನಿಂದ ಆರಂಭವಾಗುವ ಈ ಬಾರಿಯ ದೀಪಾವಳಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಪ್ಪೆಯಾಗಿಬಿಟ್ಟಿದೆ. ದೀಪಾವಳಿಯ ಹಿನ್ನೆಲೆಯಲ್ಲಿ ಹೊರ ಜಿಲ್ಲೆಯಿಂದ ಉಡುಪಿಗೆ ಬಂದಿರುವ ಚೆಂಡು, ಸೇವಂತಿಗೆ ಹೂವಿನ ವ್ಯಾಪಾರಿಗಳಿಗೆ ಒಂದೆಡೆ ವ್ಯಾಪಾರ ಇಲ್ಲ, ಇನ್ನೊಂದೆಡೆ ಮಳೆಯಿಂದ ಹೂವು ಹಾಳಾಗಿ ಭಾರಿ ನಷ್ಟವಾಗುತ್ತಿದೆ.
ಉಡುಪಿ: 5 ಸಾವಿರ ಹಣತೆಗಳ ಉಚಿತ ವಿತರಣೆ...
ಮಳೆಯಿಂದಾಗಿ ಜನರು ಹಬ್ಬದ ಖರೀದಿಗೂ ಪೇಟೆಗೆ ಬರುತ್ತಿಲ್ಲ, ಇದರಿಂದ ಬಟ್ಟೆ, ಸಿಹಿತಿನಿಸು, ಗೂಡುದೀಪ ವ್ಯಾಪಾರ ಕಡಿಮೆ ಇದೆ ಎನ್ನುತ್ತಿದ್ದಾರೆ ವರ್ತಕರು. ಪಟಾಕಿ ಅಂಗಡಿಯವರು ಮಳೆಗೆ ಕಂಗಾಲಾಗಿದ್ದಾರೆ. ನಗರದ ಕೆಲವು ತಾತ್ಕಾಲಿಕ ಪಟಾಕಿ ಅಂಗಡಿಗಳು ತಲೆ ಎತ್ತಿವೆ. ಆದರೆ ಮಳೆಯಿಂದ ಪಟಾಕಿಗಳು ಹಾಳಾಗುತ್ತಿದ್ದು, ಪ್ರತಿವರ್ಷಕ್ಕಿಂತ ಗ್ರಾಹಕರು ಕಡಿಮೆ ಇದ್ದಾರೆ ಎನ್ನುತ್ತಿದ್ದಾರೆ.