ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಸನ್ನಿಧಾನ ವೃದ್ಧಿಗಾಗಿ ವ್ಯವಸ್ಥಾಪನಾ ಮಂಡಳಿಯವರು ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲು ತೀರ್ಮಾನಿಸಿದ್ದಾರೆ. ವ್ಯವಸ್ಥಾಪನ ಸಮಿತಿಯ ಈ ತೀರ್ಮಾನಕ್ಕೆ ಅರ್ಚಕ ವರ್ಗ ವಿರೋಧ ವ್ಯಕ್ತಪಡಿಸಿದೆ.
ಉಡುಪಿ (ನ.18) : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಸಲು ಉದ್ದೇಶಿಸಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಇದೀಗ ವಿವಾದ ಹುಟ್ಟು ಹಾಕಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯರು ಫೆಬ್ರವರಿ ತಿಂಗಳಲ್ಲಿ ಮಾಡಲು ನಿರ್ಧರಿಸಿರುವ ಬ್ರಹ್ಮಕಲಶೋತ್ಸವಕ್ಕೆ ಅರ್ಚಕ ವರ್ಗ ವಿರೋಧ ವ್ಯಕ್ತಪಡಿಸಿದೆ.
ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಉಡುಪಿ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ (Kolluru Mukambika Temple) ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಕ್ಷೇತ್ರದಲ್ಲಿ ಸನ್ನಿಧಾನ ವೃದ್ಧಿಗಾಗಿ ವ್ಯವಸ್ಥಾಪನಾ ಮಂಡಳಿಯವರು ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಸಲು ತೀರ್ಮಾನಿಸಿದ್ದಾರೆ. ಪ್ರತಿ 12 ವರ್ಷಕ್ಕೊಮ್ಮೆ ಬ್ರಹ್ಮಕಲಶೋತ್ಸವ ನಡೆಸುವುದು ಸಂಪ್ರದಾಯ. ಕೊಲ್ಲೂರು ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ಮುಗಿದು 20 ವರ್ಷಗಳಾಯಿತು. ಹಾಗಾಗಿ 2023ರ ಫೆಬ್ರವರಿ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ಶಾಸ್ತ್ರ ನಡೆಸಲು ಆಡಳಿತ ಮಂಡಳಿ ತೀರ್ಮಾನಿಸಿದೆ.
undefined
ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ವಿದ್ಯಾದಶಮಿ!
ಅರ್ಚಕರ ವರ್ಗದಿಂದ ಆಯುಕ್ತರಿಗೆ ಪತ್ರ: ವ್ಯವಸ್ಥಾಪನ ಸಮಿತಿಯ ಈ ತೀರ್ಮಾನಕ್ಕೆ ಅರ್ಚಕ ವರ್ಗ ವಿರೋಧ (opposition) ವ್ಯಕ್ತಪಡಿಸಿದೆ. ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಇದು ಆಗಮ ವಿರೋಧಿ ನಿರ್ಧಾರ ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ದೇವಸ್ಥಾನದ ಎಲ್ಲ ಐವರು ಅರ್ಚಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಅಷ್ಟಬಂಧ ಹಾಕಿದ ನಂತರ 48 ದಿನಗಳ ಕಾಲ ಯಾವುದೇ ಧಾರ್ಮಿಕ (Religious) ಪ್ರಕ್ರಿಯೆಗಳನ್ನು ಮಾಡುವಂತಿಲ್ಲ. ಅಷ್ಟಬಂಧವನ್ನು ಇಷ್ಟ ಬಂದ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಅರ್ಚಕರಾದ ಶ್ರೀಧರ ಅಡಿಗ (Sridhar Adiga) ಹಾಗೂ ನರಸಿಂಹ ಅಡಿಗ (Narasimha adiga) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಲಶಾಭಿಷೇಕ ಮಾಡಲು ಸಮಸ್ಯೆ: ಮಾರ್ಚ್ ತಿಂಗಳಲ್ಲಿ ದೇವಸ್ಥಾನದ ವಾರ್ಷಿಕ ಮಹೋತ್ಸವ ನಡೆಯಲಿದೆ. ಒಂದು ವೇಳೆ ಫೆಬ್ರವರಿ (February) ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆದರೆ ವಾರ್ಷಿಕೋತ್ಸವ ನಡೆಸಲು ಸಾಧ್ಯವಿಲ್ಲ. ಅಷ್ಟಬಂಧ ಗಟ್ಟಿಯಾಗದೆ ಲಿಂಗಕ್ಕೆ ಕಲಶಾಭಿಷೇಕ ಮಾಡುವಂತಿಲ್ಲ. ಹಾಗಾಗಿ ಒಂದು ಮಂಡಲ ಕಾಲ ಅಂದರೆ 48 ದಿನ ಕಾಯಲೇಬೇಕು. ಈ ಅವಧಿಯಲ್ಲಿ ದೇವರು ಬಾಲ್ಯಾವಸ್ಥೆಯಲ್ಲಿ ಇರುತ್ತಾರೆ. ಅದರ ಪರಿಣಾಮ ಉತ್ಸವಾದಿಗಳನ್ನು ಮಾಡಲು ಸಾಧ್ಯವಿಲ್ಲ. ದೃಢ ಸಂಪ್ರೋಕ್ಷಣ್ಯದ ಮೊದಲು ವಾರ್ಷಿಕೋತ್ಸವ ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ. ಕೊಲ್ಲೂರು ದೇವಾಲಯದ ಈ ಎಲ್ಲಾ ಆಚರಣೆಗಳಿಗೆ ವಿಜಯ ಆಗಮ ಪದ್ಧತಿಯೇ ಆಧಾರ. ಆದರೆ ವ್ಯವಸ್ಥಾಪನ ಸಮಿತಿಯವರು ಬೇರೆ ಆಗಮ ಪದ್ದತಿಯ ಪಂಡಿತರಿಂದ ಸಲಹೆ ಪಡೆದು ಈ ನಿರ್ಧಾರ ಕೈಗೊಂಡಿದ್ದಾರೆ. ವ್ಯವಸ್ಥಾಪನಾ ಸಮಿತಿಯ (Management Committee) ನಿರ್ಧಾರಕ್ಕೆ ನಮ್ಮ ಸಮ್ಮತಿ (consent) ಇಲ್ಲ ಎಂದು ತಿಳಿಸಿದ್ದಾರೆ.
Udupi; ಕೊಲ್ಲೂರು ಕ್ಷೇತ್ರದ ಸುತ್ತಲೂ ಕೊಳಚೆ, ಭಕ್ತರಿಗೆ ಬೇಸರ
ಬ್ರಹ್ಮಕಲಶೋತ್ಸವಕ್ಕೆ ರಾಜಕೀಯ ನಂಟು: ಈ ಜಟಾಪಟಿಯ ಹಿಂದೆ ರಾಜಕೀಯ ಲೆಕ್ಕಾಚಾರಗಳು ಇಣುಕುತ್ತಿವೆ. ಚುನಾವಣಾ ವರ್ಷದಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ಮೂಲಕ ಮುನ್ನಲೆಗೆ ಬರಲು ಸ್ಥಳೀಯ ಶಾಸಕ ಕೆ. ಸುಕುಮಾರ ಶೆಟ್ಟಿ (Sukumara shetty) ಮತ್ತು ಬಿಜೆಪಿ (BJP) ಪ್ರಾಬಲ್ಯದ ವ್ಯವಸ್ಥಾಪನಾ ಸಮಿತಿ ಉತ್ಸುಕವಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಕೊಲ್ಲೂರಿನಲ್ಲಿ ಮತ್ತೊಂದು ಸುತ್ತಿನ ಗೊಂದಲ ಆರಂಭವಾಗಿದ್ದು, ಧಾರ್ಮಿಕ ದತ್ತಿ ಇಲಾಖೆ ಯಾವ ತೀರ್ಮಾನ ಕೈಗೊಳ್ಳುತ್ತೆ ಕಾದು ನೋಡಬೇಕು.