ಆಗುಂಬೆ ಘಾಟ್‌ ಎಲ್ಲ ವಾಹನಗಳಿಗೆ ಸಂಚಾರ ಮುಕ್ತ

Published : Oct 20, 2019, 07:37 AM ISTUpdated : Oct 20, 2019, 08:52 AM IST
ಆಗುಂಬೆ ಘಾಟ್‌ ಎಲ್ಲ ವಾಹನಗಳಿಗೆ ಸಂಚಾರ ಮುಕ್ತ

ಸಾರಾಂಶ

ದುರಸ್ತಿ ಕಾಮಗಾರಿಯಿಂದಾಗಿ ಬಂದ್‌ ಆಗಿದ್ದ ಆಗುಂಬೆ ಘಾಟಿಯನ್ನು ಇದೀಗ ಲಘು ಮತ್ತು ಭಾರಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಪ್ರಸ್ತುತ ಈ ರಸ್ತೆಯಲ್ಲಿ ಯಾವುದೇ ಗುಡ್ಡ ಕುಸಿತವಾಗಲಿ, ಮರಗಳು ಉರುಳಿ ಸಂಚಾರಕ್ಕೆ ಅಡ್ಡಿಯಾಗುವ ಸಂಭವ ಇರುವುದಿಲ್ಲವಾದ್ದರಿಂದ ಈಗ ಭಾರಿ ವಾಹನಗಳ ಸಂಚಾರಕ್ಕೂ ಮುಕ್ತಗೊಳಿಸಲಾಗಿದೆ.

ಉಡುಪಿ(ಅ.20): ಕಳೆದ ಕೆಲವು ದಿನಗಳಿಂದ ದುರಸ್ತಿ ಕಾಮಗಾರಿಯಿಂದಾಗಿ ಬಂದ್‌ ಆಗಿದ್ದ ಆಗುಂಬೆ ಘಾಟಿಯನ್ನು ಇದೀಗ ಲಘು ಮತ್ತು ಭಾರಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಭಾರೀ ಮಳೆಯಿಂದಾಗಿ ಘಾಟಿಯ ಕೆಲವು ತಿರುವಿನಲ್ಲಿ ಗುಡ್ಡ ಕುಸಿದಿದ್ದು, ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಈ ರಸ್ತೆಯಲ್ಲಿ ನಿಷೇಧಿಸಲಾಗಿತ್ತು.

ದುರಸ್ತಿ ನಂತರ ಮತ್ತೆ ಮಳೆಯಾದ ಹಿನ್ನೆಲೆಯಲ್ಲಿ ಲಘು ವಾಹನಗಳಾದ ಮಿನಿ ಬಸ್‌ಗಳು, ಜೀಪು, ವ್ಯಾನ್‌, ಕಾರ್‌ಗಳು ಮತ್ತು ದ್ವಿಚಕ್ರ ವಾಹನಗಳೊಂದಿಗೆ ವಾಹನಗಳ ಸಂಚಾರಕ್ಕೆ ಮಾತ್ರ ಮುಕ್ತಗೊಳಿಸಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶಿಸಲಾಗಿತ್ತು.

ಉಡುಪಿ ಜಿಲ್ಲೆಗೆ ಮತ್ತೊಂದು ತಾಲೂಕು : ಸ್ಥಳ ಪರಿಶೀಲನೆ...

ಪ್ರಸ್ತುತ ಈ ರಸ್ತೆಯಲ್ಲಿ ಯಾವುದೇ ಗುಡ್ಡ ಕುಸಿತವಾಗಲಿ, ಮರಗಳು ಉರುಳಿ ಸಂಚಾರಕ್ಕೆ ಅಡ್ಡಿಯಾಗುವ ಸಂಭವ ಇರುವುದಿಲ್ಲವಾದ್ದರಿಂದ ಈಗ ಭಾರಿ ವಾಹನಗಳ ಸಂಚಾರಕ್ಕೂ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

ಮೂರು ದಿನದ ಮಳೆಗೆ 4 ಲಕ್ಷಕ್ಕೂ ಹೆಚ್ಚಿನ ಹಾನಿ: ಇಬ್ಬರುಸಾವು...

PREV
click me!

Recommended Stories

ಬಿಜೆಪಿ ದೇಶದ ಬದಲು ಧರ್ಮ ಕಟ್ಟುತ್ತಿದೆ, ಇದರಿಂದ ದೇಶಕ್ಕೆ ಉಪಯೋಗವಿಲ್ಲ: ಕಿಮ್ಮನೆ ರತ್ನಾಕರ್‌
ಉಡುಪಿ: ಬಿಜೆಪಿ ದೇಶ ಕಟ್ಟುವ ಬದಲು ಧರ್ಮ ಕಟ್ಟುತ್ತಿದ್ದಾರೆ: ಕಿಮ್ಮಾನೆ ರತ್ನಾಕರ್