ಗಾಂಜಾ ಸೇವಿಸಿದ್ದ ಮಣಿಪಾಲದ 9 ವಿದ್ಯಾರ್ಥಿಗಳ ಬಂಧನ

Published : Oct 22, 2019, 09:56 AM IST
ಗಾಂಜಾ ಸೇವಿಸಿದ್ದ ಮಣಿಪಾಲದ 9 ವಿದ್ಯಾರ್ಥಿಗಳ ಬಂಧನ

ಸಾರಾಂಶ

ವಿದ್ಯಾರ್ಥಿಗಳು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಉಡುಪಿ ಪೊಲೀಸರು ಗಾಂಜಾ ಸೇವಿಸಿದ್ದ 9 ಜನ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಮಣಿಪಾಲದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಉಡುಪಿ(ಅ.22): ಉಡುಪಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಗಾಂಜಾ ಸೇವಿಸಿದ 9 ಮಂದಿ ಮಣಿಪಾಲದ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಅವರಲ್ಲಿ ಇಬ್ಬರು ಮಂಗಳೂರಿನ ನಿವಾಸಿಗಳಾಗಿದ್ದರೆ, ಉಳಿದ 7 ಮಂದಿ ಕೇರಳದವರಾಗಿದ್ದಾರೆ.

ಅ.19ರಂದು ಹೆರ್ಗದ ರೋಯಲ್‌ ರೆಸಿಡೆನ್ಸಿ ಬಳಿಯ ಮಂಗಳೂರಿನ ಕದ್ರಿ ನಿವಾಸಿ, ನಿವಾಸಿ ಪ್ರಣವ್‌ ವೈ.ಶೇರಿಗಾರ್‌ (20), ಹೆರ್ಗದ ಐಡಿಯಲ್‌ ರೆಸಿಡೆನ್ಸಿ ಬಳಿ ಮಂಗಳೂರಿನ ಮಣ್ಣಗುಡ್ಡ ನಿವಾಸಿ ಸಂಕೇತ್‌ ಪೈ (20), ಮಂಗಳೂರಿನ ಬಲ್ಮಠದ ನಿವಾಸಿ ರಯಾನ್‌ ಹ್ಯಾರೀಸ್‌ (20), ಕೇರಳದ ತಿರುವಂಬಾಡಿ ಎಂಬಲ್ಲಿನ ನಿವಾಸಿ ಆಲ್ವಿನ್‌ ಎಕ್ಸ್ಲಿ (19), ಕೇರಳದ ಕುಂಝಿಕ್ಕೊಡೆ ಎಂಬಲ್ಲಿ ನಿವಾಸಿ ಅಮೀನ್‌ ಅಬ್ದುಲ್‌ ಜಲೀಲ್‌ (20), ಕೇರಳದ ಎರ್ನಾಕುಲಂ ನಿವಾಸಿ ಅಭಿಷೇಕ್‌ ಅನಿಲ್‌ ಕುಮಾರ್‌ ಪಿಳೈ (19), ಕೇರಳದ ತ್ರಿಶೂರಿನ ನಿವಾಸಿ ಅಶ್ವಿನ್‌ ಎ.ಆರ್‌. (21), ಕೋಜಿಕೋಡ್‌ ನಿವಾಸಿ ಮೊಹಮ್ಮದ್‌ ಇಶಾನ್‌ ಎಂ. (20), ಕೋಜಿಕೋಡೆ ನಿವಾಸಿ ಆಶಾಸ್‌ ಎಕ್ಸ್ಲಿ (21) ಬಂಧಿತರು.

ಸಿದ್ದರಾಮಯ್ಯಗೆ ತಲೆ ಸರಿಯಿಲ್ಲ: ಅಶೋಕ್‌

ಖಚಿತ ಮಾಹಿತಿಯ ಮೇರೆಗೆ ಉಡುಪಿ ಸೆನ್‌ ಠಾಣಾಧಿಕಾರಿ ಸೀತಾರಾಮ್‌ ಮತ್ತು ಸಿಬ್ಬಂದಿ ವಶಕ್ಕೆ ತೆಗೆದುಕೊಂಡು ಕೆಎಂಸಿಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದಾಗ ಅವರು ಗಾಂಜಾ ಸೇವಿಸಿರುವುದು ಪತ್ತೆಯಾಗಿದೆ. ನಂತರ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಂಟ್ವಾಳದ ಹರೀಶ್‌ ಪೂಜಾರಿ ಕೊಲೆ ಸಾಕ್ಷಿಗೆ ಜೀವ ಬೆದರಿಕೆ..

PREV
click me!

Recommended Stories

ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!
ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ