ಸುರಕ್ಷಿತ ಜಾಗದಲ್ಲಿ ಶಾಶ್ವತ ಮನೆಗಳ ನಿರ್ಮಾಣ: ಸಚಿವ ಸೋಮಣ್ಣ

By Kannadaprabha NewsFirst Published Oct 25, 2019, 8:11 AM IST
Highlights

ಪ್ರವಾಹದಿಂದ ತಗ್ಗು ಪ್ರದೇಶ ಮುಳುಗಡೆಯಾಗಿ ಸಂತ್ರಸ್ತರಾಗಿರುವ ಜನರಿಗೆ ಶಾಶ್ವತ ಸೂರು ಕಲ್ಪಿಸುವುದಾಗಿ ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಮತ್ತೊಮ್ಮೆ ಮುಳುಗಡೆಯಾಗದಂತಹ ಪ್ರದೇಶದಲ್ಲಿ ಸುರಕ್ಷಿತ ಜಾಗದಲ್ಲಿ ಶಾಶ್ವತ ಮನೆ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.

ಮೈಸೂರು(ಅ.25): ರಾಜ್ಯದಲ್ಲಿ ಮಳೆಯಿಂದ ಮನೆಗಳು ಮುಳಗಡೆಯಾಗುತ್ತಿವೆ. ಇನ್ನೂ ಮುಂದೆ ಮುಳಗಡೆಯಾದ ಜಾಗದಲ್ಲಿ ಮತ್ತೆ ಮನೆ ಕಟ್ಟುವುದಿಲ್ಲ. ಅದರ ಬದಲಿಗೆ ಸುರಕ್ಷಿತ ಜಾಗದಲ್ಲಿ ಶಾಶ್ವತ ಮನೆ ನಿರ್ಮಾಣ ಮಾಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಾಣ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 10 ದಿನ ಉತ್ತರ ಕರ್ನಾಟಕ ಪ್ರವಾಸ ಮಾಡಿ ಜಾಗ ಗುರುತಿಸುತ್ತೇನೆ. ಮತ್ತೆ ಈ ರೀತಿ ಪುನರಾವರ್ತನೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.

ಬಾಲಕಿ ವಿಡಿಯೋಗೆ ಅಸಮಾಧಾನ:

ಮಕ್ಕಳ ಕೈಯಲ್ಲಿ ಬರೆಸಿಕೊಟ್ಟು ಮಾತನಾಡಿಸಿದ್ದು ಸರಿಯಲ್ಲ. ಮಕ್ಕಳು ದೇವರ ಸಮಾನ. ಈ ರೀತಿ ಮಕ್ಕಳ ಕೈಯಲ್ಲಿ ಮಾತನಾಡಿಸಿದ್ದು ತಪ್ಪು ಎನ್ನುವ ಮೂಲಕ ರಾಜ್ಯದಲ್ಲಿ ನೆರೆ ಸಂಬಂಧ ಬಾಲಕಿ ವಿಡಿಯೋ ವೈರಲ್‌ ವಿಚಾರಕ್ಕೆ ಸಚಿವ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ಗೆ ಬಿಗ್ ಶಾಕ್ : ಸಿದ್ದರಾಮಯ್ಯ ಆಪ್ತ ಬಿಜೆಪಿಗೆ

ವಿರೋಧ ಪಕ್ಷಗಳು ಜನರನ್ನು ತಪ್ಪು ದಾರಿಗೆ ಎಳೆಯಬಾರದು. ಪದೇ ಪದೇ ಸುಳ್ಳು ಹೇಳಿ, ಅದನ್ನು ಸತ್ಯ ಮಾಡುತ್ತೇವೆ ಅಂದುಕೊಂಡರೆ ಅದು ನಡೆಯುವುದಿಲ್ಲ. ಮಳೆ ನಿಂತ ನಂತರ ನಮಗೆ ಎರಡು ತಿಂಗಳು ಅವಕಾಶ ಕೊಡಿ. ಯಡಿಯೂರಪ್ಪ ಸರ್ಕಾರ ನಿಂತ ನೀರೋ ಹರಿಯುವ ನೀರೋ ತಿಳಿಯುತ್ತದೆ ಎಂದಿದ್ದಾರೆ.

ವಿರೋಧ ಪಕ್ಷಗಳು ಜನರನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು. ಕುಮಾರಸ್ವಾಮಿ, ಸಿದ್ದರಾಮಯ್ಯ ಇಬ್ಬರು ಮುಖ್ಯಮಂತ್ರಿ ಆಗಿದ್ದವರು. ವಾಸ್ತವ ಅರ್ಥ ಮಾಡಿಕೊಳ್ಳಲಿ ಎಂದು ಅವರು ತಿಳಿಸಿದ್ದಾರೆ.

ವ್ಯೂವ್‌ ಪಾಯಿಂಟ್‌- ನಂದಿ ರಸ್ತೆ ಸಂಚಾರ ಬಂದ್‌

click me!