
ತುಮಕೂರು(ಅ.15): ಎಲ್ಲಾ ಮೆಡಿಕಲ್ ಕಾಲೇಜಿನವರದ್ದೂ ಹೀಗೇನೇ, ಈತನ ಗ್ರಹಚಾರ ಸರಿ ಇಲ್ಲ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಒಡೆತನದ ಕಾಲೇಜಿನಲ್ಲಿ ನಡೆದ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನೋಟಿಸ್ ಕೊಡ್ಬೇಡಿ, ಬೇಕಾದಾಗ ನಾನೇ ಬರ್ತೀನಿ: ಇಡಿಗೆ ಮಾಜಿ ಶಾಸಕನ ರಿಕ್ವೆಸ್ಟ್..
ಎಲ್ಲಾ ಮೆಡಿಕಲ್ ಕಾಲೇಜಿನವರದ್ದೂ ಇದೇ ಕಥೆ, ಇವನೊಬ್ಬನೇ ಅಲ್ಲ, ಈತ ಮಾಡಬಾರದ್ದೇನೂ ಮಾಡಿಲ್ಲ. ಈತನ ಗ್ರಹಚಾರ ಸರಿಯಿಲ್ಲಾ, ಹಾಗಾಗಿ ಸಿಕ್ಕಿ ಹಾಕಿಕೊಂಡಿದ್ದಾನೆ ಎಂದಿದ್ದಾರೆ.
ಮಹಾರಾಷ್ಟ್ರ ಚುನಾವಣೆಗೆ ಹಣ ರವಾನೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅದರ ಬಗ್ಗೆ ನಾನೇನು ಹೇಳುವುದಿಲ್ಲ. ಇದ್ದರೂ ಇರಬಹುದು, ಇಲ್ಲದೆಯೂ ಇರಬಹುದು. ಕೆಲ ನೀಟ್ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ ಅನ್ನೋ ಮಾಹಿತಿಯಿದೆ. ಈ ಹಿನ್ನೆಲೆಯಲ್ಲೂ ದಾಳಿ ಆಗಿರಬಹುದು ಎಂದಿದ್ದಾರೆ.
'ನನ್ನ ಮೇಲೆ ಐಟಿ ದಾಳಿಯಾದ್ರೆ ಅದಕ್ಕೆ ಹೆಚ್. ಡಿ.ದೇವೇಗೌಡ್ರೆ ಕಾರಣ'