ನೋಟಿಸ್ ಕೊಡ್ಬೇಡಿ, ಬೇಕಾದಾಗ ನಾನೇ ಬರ್ತೀನಿ: ಇಡಿಗೆ ಮಾಜಿ ಶಾಸಕನ ರಿಕ್ವೆಸ್ಟ್

By Kannadaprabha NewsFirst Published Oct 15, 2019, 8:07 AM IST
Highlights

ನೋಟಿಸ್ ಕೊಡ್ಬೇಡಿ, ಬೇಕಾದಾಗ ನಾನೇ ಬರ್ತೀನಿ ಎಂದು ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಜಾರಿ ನಿರ್ದೇಶನಾಲಯಕ್ಕೆ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ(ಇ.ಡಿ.)ದ ವಿಚಾರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ತುಮಕೂರು(ಅ.15): ನೋಟಿಸ್ ಕೊಡ್ಬೇಡಿ, ಬೇಕಾದಾಗ ನಾನೇ ಬರ್ತೀನಿ ಎಂದು ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ(ಇ.ಡಿ.)ದ ವಿಚಾರಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ತುಮಕೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೂ ಎಲ್ಲಾ ಕಡೆ ಇಂಟೆಲಿಜೆನ್ಸ್‌(ಗುಪ್ತಚರ) ಮಾಹಿತಿ ಇದೆ. ಐಟಿ ದಾಳಿ ಮಾಡುವುದು ಮಾಡಲಿ. ನಮಗೇನೂ ತೊಂದರೆ ಇಲ್ಲ. ಅದಕ್ಕೆ ತಯಾರಿಯಲ್ಲೂ ಇದ್ದೇನೆ ಎಂದು ಹೇಳಿದ್ದಾರೆ.

ಇಡಿಗೆ ಮಾಹಿತಿ ನೀಡಿದ್ದೇನೆ:

ಜಾರಿ ನಿರ್ದೇಶನಾಲಯ(ಇ.ಡಿ.)ದ ವಿಚಾರಣೆಗೆ ಸಂಬಂಧಿಸಿದಂತೆ, ‘ನನಗೂ ಇ.ಡಿ. ವಿಚಾರಣೆಗೂ ಸಂಬಂಧವೇ ಇಲ್ಲ. ಕೆಲವು ಮಾಹಿತಿಗಳನ್ನು ಅವರು ಕೇಳಿದ್ದಾರೆ. ಅದನೆಲ್ಲಾ ತಗೊಂಡು ಹೋಗಿ ನಾಳೆ ಕೊಟ್ಟು ಬರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

'ನನ್ನ ಮೇಲೆ ಐಟಿ ದಾಳಿಯಾದ್ರೆ ಅದಕ್ಕೆ ಹೆಚ್. ಡಿ.ದೇವೇಗೌಡ್ರೆ ಕಾರಣ'

ಈ ಹಿಂದೆ ಹೋಗಿದ್ದಾಗ ಇನ್ನೊಂದು ಸಲ ನೋಟಿಸ್‌ ನೀಡಬೇಡಿ, ಯಾವಾಗ ಬೇಕೋ ಅವಾಗ ನಾನೇ ಬರುವುದಾಗಿ ಹೇಳಿ ಬಂದಿದ್ದೇನೆ’ ಎಂದರು. ಲಕ್ಷ್ಮೀ ಹೆಬಾಳ್ಕರ್‌ ಮಾಲಿಕತ್ವದ ಹರ್ಷ ಶುಗರ್ಸ್‌ಗೆ ಸಾಲ ಕೊಟ್ಟಿರುವ ಬಗ್ಗೆ ಮಾಹಿತಿ ಕೇಳಿದರು. ಅದರ ಜೊತೆಗೆ ನನ್ನ ವರಮಾನದ ಬಗ್ಗೆಯೂ ಕೇಳಿದರು. ಎಲ್ಲವನ್ನೂ ಹೇಳಿ ಬಂದೆ ಎಂದಿದ್ದಾರೆ.

ಮತ್ತೊಮ್ಮೆ ಪರಂ ಕಾರು ಚಾಲಕನ ವಿಚಾರಣೆ

click me!