ಗಾಳಿಪಟ ತರಲು ಹೋಗಿ ಮಗನ ಕಣ್ಮುಂದೆಯೇ ತಂದೆ ಸಜೀವ ದಹನ

Published : Oct 20, 2019, 12:26 PM IST
ಗಾಳಿಪಟ ತರಲು ಹೋಗಿ ಮಗನ ಕಣ್ಮುಂದೆಯೇ  ತಂದೆ ಸಜೀವ ದಹನ

ಸಾರಾಂಶ

ಮನೆ ಮೇಲೆಯೇ ತಂದೆಯೊಬ್ಬರು ವಿದ್ಯುತ್ ವಯರ್ ತಗುಲಿ ಹೊತ್ತಿ ಉರಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಸಿಕ್ಕಿಹಾಕಿಕೊಂಡಿದ್ದ ಮಗನ ಗಾಳಿಪಟ ತರಲು ಹೋದ ತಂದೆ ತಾನೇ ಸಾವಿನ ದವಡೆಗೆ ಸಿಕ್ಕಿಹಾಕಿಕೊಂಡ ದಾರುಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

ತುಮಕೂರು(ಅ.20): ಮನೆ ಮೇಲೆಯೇ ವಿದ್ಯುತ್ ವಯರ್ ತಗುಲಿ ವ್ಯಕ್ತಿ ಹೊತ್ತಿ ಉರಿದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಸದಾಶಿವನಗರ 6ನೇ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ವಿದ್ಯುತ್ ತಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಟೆರೇಸ್ ಮೇಲೆ ಬಾಲಕ ಗಾಳಿಪಟ ಹಾರಿಸುತ್ತಿದ್ದ. ಈ ಸಂದರ್ಭ ಗಾಳಿಪಟ ಮನೆ ಮೇಲೆ ಹಾಯ್ದು ಹೋಗಿದ್ದ ಹೈಟೆನ್ಷನ್ ವಯರ್‌ಗೆ ಸಿಕ್ಕಿ ಹಾಕಿಕೊಂಡಿದೆ. ಇದನ್ನು ಬಿಡಿಸಲು ಹೋದ ತಂದೆ ವಿದ್ಯುತ್ ತಂತಿ ತಗಲಿ ಹೊತ್ತಿ ಉರಿದಿದ್ದಾರೆ.

ಮಕ್ಕಳಿಬ್ಬರಿಗೆ ನೇಣು ಹಾಕಿ ಬಳಿಕ ಒಂದೇ ಕುಣಿಕೆಗೆ ಕೊರಳೊಡ್ಡಿದ ಗಂಡ-ಹೆಂಡ್ತಿ

ಹೈಟೆನ್ಶನ್ ವಯರ್ ತಗುಲಿ ಅಬ್ಸಲ್(50) ಅವರಿಗೆ ಸ್ಥಳದಲ್ಲಿಯೇ ಬೆಂಕಿ ತಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ಕಾರಣ ಅಬ್ಸಲ್ ಸ್ಥಳದಲ್ಲಿಯೇ ಹೊತ್ತಿ ಉರಿದಿದ್ದು, ಸುಟ್ಟು ಕರಕಲಾಗಿದ್ದಾರೆ.

ಗಾಳಿಪಟ ಬಿಡಿಸಲು ಹೋಗಿ ಪ್ರಾಣ ಬಿಟ್ಟ ತಂದೆ:

ಮಗನನ್ನು ಖುಷಿ ಪಡಿಸಲು ಹೋದ ತಂದೆ ದಾರುಣವಾಗಿ ಅಂತ್ಯ ಕಂಡಿದ್ದಾರೆ. ಮಗನನ್ನು ಖುಷಿಪಡಿಸಲು ವಯರ್‌ಗೆ ಸಿಕ್ಕಿಹಾಕಿಕೊಂಡ ಗಾಳಿಪಟ ಬಿಡಿಸಲು ಹೋಗಿ ಅಬ್ಸಲ್ ಪ್ರಾಣ ಬಿಟ್ಟಿದ್ದಾರೆ. ಘಟನೆಯ ದೃಶ್ಯಾವಳಿಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಎಡಗೈಗೆ ಕರೆಂಟ್ ತಾಗಿ ಗಾಯಗೊಂಡ ಮಗನನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶನೇಶ್ವರ ದೇವರ ಗುಡಿಗೆ ನುಗ್ಗಿ ಮೂರ್ತಿಗೆ ಪ್ರದಕ್ಷಿಣೆ ಹಾಕಿದ ಕಾಗೆ..!

PREV
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು