ಯಡಿಯೂರು ದೇಗುಲ ಪೂಜೆ ಮುಗಿಸಿ ಬರುವಾಗ ಅಪಘಾತ, ತುಮಕೂರು ದಂಪತಿ ಸ್ಥಳದಲ್ಲೇ ಸಾವು

Published : Nov 05, 2025, 06:48 PM IST
Ambulance

ಸಾರಾಂಶ

ಯಡಿಯೂರು ದೇಗುಲ ಪೂಜೆ ಮುಗಿಸಿ ಬರುವಾಗ ಅಪಘಾತ, ತುಮಕೂರು ದಂಪತಿ ಸ್ಥಳದಲ್ಲೇ ಸಾವು, ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ದಂಪತಿ ಬೈಕ್‌ಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತುಮಕೂರು (ನ.05) ಯಡಿಯೂರು ದೇವಸ್ಥಾನದಲ್ಲಿ ಪೂಜೆಯಲ್ಲಿ ಪಾಲ್ಗೊಂಡ ದಂಪತಿ ಬೈಕ್ ಮೂಲಕ ಮರಳಿ ಬರುತ್ತಿರುವಾಗ ಭೀಕರ ಅಪಘಾತ ಸಂಭವಿಸಿದೆ. ಕುಣಿಗಲ್ ತಾಲ್ಲೂಕಿನ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಸಿದ್ದಪುರ ಗೇಟ್ ಬಳಿಕ ದಂಪತಿ ಬೈಕ್‌ಗೆ ಕಾರು ಡಿಕ್ಕಿಯಾಗಿದೆ. ಅತೀ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ದಂಪತಿಗಳು ಮೃತಪಟ್ಟಿದ್ದಾರೆ. ಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯೂ ಟರ್ನ್ ವೇಳೆ ಅಪಘಾತ

61 ವರ್ಷದ ಶಿವಶಂಕರ್ ಹಾಗೂ 55 ವರ್ಷದ ಸುನಂದಮ್ಮ ಇಬ್ಬರು ಬೈಕ್ ಮೂಲಕ ಪ್ರಸಿದ್ಧ ಯಡಿಯೂರು ದೇವಸ್ಥಾನದ ಪೂಜೆಗೆ ತೆರಳಿದ್ದರು. ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಂಡ ದಂಪತಿ, ಪ್ರಸಾದ ಸ್ವೀಕರಿಸಿದ್ದಾರೆ. ಬಳಿ ಬೈಕ್ ಮೂಲಕ ಮನೆಗೆ ಮರಳುತ್ತಿದ್ದಾ ಅಪಘಾತ ಸಂಭವಿಸಿದೆ. ಹೆದ್ದಾರಿಯ ಸಿದ್ದಪುರ ಗೇಟ್ ಬಳಿಕ ದಂಪತಿಗಳು ಯೂಟರ್ನ್ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿಯಾಗಿದೆ. ಅಪಾಘಾತದ ತೀವ್ರತೆಗೆ ದಂಪತಿಗಳಿಬ್ಬರು ಮಾರುದದ್ದ ದೂರ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಅಮೃತೂರು ಪೊಲೀಸರು ಭೇಟಿ

ಮಾಹಿತಿ ತಿಳಿಯುತ್ತಿದ್ದಂತೆ ಅಮೃತೂರು ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀದರ್ ಅಪಘಾದಲ್ಲಿ ಸ್ಥಳದಲ್ಲೇ ಮೂವರ ಸಾವು

ಬೀದರ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳಧಲ್ಲೆ ಮೂವರು ಮೃತಪಟ್ಟ ಘಟನೆ ನಡೆದಿದೆ. ಭಾಲ್ಕಿ ತಾಲೂಕಿನ ನೀಲಮ್ಮನಳ್ಳಿ ತಾಂಡಾ ಬಳಿ ಕಾರು ಹಾಗು ಡಿಟಿಡಿಸಿ ಕೋರಿಯರ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ದೇವರ ದರ್ಶನಕ್ಕೆ ತೆರಳಿದ್ದ ತೆಲಂಗಾಣದ ಇಬ್ಬರು ಸ್ನೇಹಿತರು ದುರ್ಮರಣ ಹೊಂದಿದ್ದಾರೆ. ಕಲಬುರಗಿಯ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನ ಮಾಡಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರ್‌ನಲ್ಲಿದ್ದ ಇಬ್ಬರು ಹಾಗೂ ಡಿಟಿಡಿಸಿ ವಾಹನದಲ್ಲಿ ಚಾಲಕ ಸಾವನ್ನಪ್ಪಿದ್ದಾರೆ. ಗಾಣಗಾಪುರದಿಂದ ಬೀದರ್ ಮಾರ್ಗವಾಗಿ ನಾರಾಯಣಖೇಡ್‌ಗೆ ಹೊರಟಿದ್ದ ಕಾರುಗಿ ಎದುರಿನಿಂದ ಬಂದ ವಾಹನ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

PREV
Read more Articles on
click me!

Recommended Stories

ಪರಮೇಶ್ವರ್ ಮುಂದಿನ ಸಿಎಂಗೆ ಆಗ್ರಹಿಸಿ ರಕ್ತದಲ್ಲಿ ನೂರಾರು ಜನರಿಂದ ಸಹಿ ಸಂಗ್ರಹ
ಮನ್‌ ಕೀ ಬಾತ್: ಕರ್ನಾಟಕದ ಜೇನು ಕೃಷಿಗೆ ಪ್ರಧಾನಿ ಮೋದಿ ಶ್ಲಾಘನೆ, ಪುತ್ತೂರು ಮತ್ತು ತುಮಕೂರು ಉಲ್ಲೇಖ