ತುಮಕೂರು: ಆರು ಜನ ದರೋಡೆಕೋರರು ಪೊಲೀಸರ ಬಲೆಗೆ

By Kannadaprabha NewsFirst Published Oct 23, 2019, 10:10 AM IST
Highlights

ಒಂದು ಕಾರು ಮತ್ತು ಮೋಟಾರ್‌ ವಾಹನಗಳನ್ನು ನಿಲ್ಲಿಸಿಕೊಂಡು ದಾರಿಯಲ್ಲಿ ಬರುವ ವಾಹನ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 6 ಆರೋಪಿಗಳನ್ನು ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ. ದಾರಿಯಲ್ಲಿ ಬರುತ್ತಿದ್ದ ವಾಹನಗಳನ್ನು ದೋಚುತ್ತಿದ್ದವರನ್ನು ಬಂಧಿಸಲಾಗಿದ್ದು, ವಸ್ತುಗಳನ್ನೂ ಜಪ್ತಿ ಮಾಡಲಾಗಿದೆ.

ತುಮಕೂರು(ಅ.23): ಇಲ್ಲಿಗೆ ಸಮೀಪ ನಾಮದ ಚಿಲುಮೆ ರಸ್ತೆ ಸಿದ್ಧಗಂಗಾ ಮಠದ ಕ್ರಾಸ್‌ ಬಳಿ ಒಂದು ಕಾರು ಮತ್ತು ಮೋಟಾರ್‌ ವಾಹನಗಳನ್ನು ನಿಲ್ಲಿಸಿಕೊಂಡು ದಾರಿಯಲ್ಲಿ ಬರುವ ವಾಹನ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 6 ಆರೋಪಿಗಳನ್ನು ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ.

ಯೋಗೀಶ್‌, ರಮಣ, ಬಸವರಾಜು, ವಿಜಯಕುಮಾರ್‌, ಚೇತನ್‌, ಸಿದ್ದು ಬಂಧಿತ ಆರೋಪಿಗಳು. ಇವರು ಕೈಯಲ್ಲಿ ಚಾಕು, ರಾಡು, ಮಚ್ಚನ್ನು ಇಟ್ಟುಕೊಂಡು ರಸ್ತೆಯಲ್ಲಿ ಬರುವ ವಾಹನ ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ನೀರಿಗಾಗಿ ಎರಡು ಜಿಲ್ಲೆಗಳ ನಡುವೆ ಗುದ್ದಾಟ, ಜಲಾಶಯಕ್ಕೆ ಬಂದೋಬಸ್ತ್‌

ಈ ಆರೋಪಿಗಳನ್ನು ವಿಚಾರಣೆ ಮಾಡಿದಾಗ ಇವರೆಲ್ಲಾ ಒಂದು ತಿಂಗಳ ಹಿಂದೆ ದೇವರಾಯನ ದುರ್ಗದಲ್ಲಿ ಸುಲಿಗೆ ಮಾಡಿರುವುದಾಗಿಯೂ, ಮಾಗಡಿ ತಾಲೂಕು ಕುದೂರು ಪೊಲೀಸ್‌ ಠಾಣೆ ಸರಹದ್ದಿನಲ್ಲಿ ಒಂದು ಸುಲಿಗೆ ಪ್ರಕರಣದಲ್ಲಿ ದೋಚಿರುವುದಾಗಿಯೂ, ಬೆಂಗಳೂರು ಜಿಲ್ಲೆ ಮಾದನಾಯಕನಹಳ್ಳಿ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ದಾಖಲಾಗಿದ್ದ 2 ಸುಲಿಗೆ ಪ್ರಕರಣಗಳು, ಬೆಂಗಳೂರು ಬನಶಂಕರಿ ಠಾಣಾ ಸರಹದ್ದಿನಲ್ಲಿ ಮತ್ತು ಡಾಬಸ್‌ಪೇಟೆ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಮೋರ್ಟಾ ಸೈಕಲ… ಕಳವು ಪ್ರಕರಣಗಳನ್ನು ತಾವು ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿರುತ್ತಾರೆ.

ಏನೇನು ಜಪ್ತಿ ಮಾಡಿದ್ದಾರೆ:

ಈ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2 ಚಿನ್ನದ ಸರಗಳು, 1 ಚಿನ್ನದ ಉಂಗುರ, ಒಂದು ಟಾಟಾ ಬೋಲ್ಡ್‌ ಕಾರು, 3 ಮೋಟಾರ್‌ ಸೈಕಲ್‌ಗಳು , 3 ಮೊಬೈಲ್ ಫೋನ್‌ ಗಳನ್ನು ವಶಪಡಿಸಿಕೊಂಡಿದ್ದು, ಈ ಆರೋಪಿಗಳಿಂದ ಒಟ್ಟು 1 ದರೋಡೆ ಪ್ರಕರಣ, 4 ಸುಲಿಗೆ ಪ್ರಕರಣಗಳು, 2 ಕಳವು ಪ್ರಕರಣಗಳನ್ನು ಭೇದಿಸುವಲ್ಲಿ ಕ್ಯಾತ್ಸಂದ್ರ ಪೊಲೀಸರು ಯಶಸ್ವಿಯಾಗಿದ್ದಾರೆ.

ತುಮಕೂರು: ಹೆಲ್ಮೆಟ್ ಜಾಗೃತಿಗಾಗಿ ಪೊಲೀಸರ ಬೈಕ್ ರ‍್ಯಾಲಿ

ಮೇಲ್ಕಂಡ ಆರೋಪಿಗಳನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಉದೇಶ್‌ ಮಾರ್ಗದರ್ಶನದಲ್ಲಿ ತುಮಕೂರು ನಗರ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಎಚ್‌.ಜೆ.ತಿಪ್ಪೇಸ್ವಾಮಿ ನೇತೃತ್ವದಲ್ಲಿ ಕ್ಯಾತ್ಸಂದ್ರ ಪೊಲೀಸ್‌ ವೃತ್ತ ನಿರೀಕ್ಷಕ ಶ್ರೀಧರ್‌, ಕ್ಯಾತ್ಸಂದ್ರ ಠಾಣೆಯ ಪಿಎಸ್‌ಐ ರಾಮಪ್ರಸಾದ ಮತ್ತು ಠಾಣೆಯ ಸಿಬ್ಬಂದಿ ಗುರುಮಲ್ಲಾರಾಧ್ಯ, ಕೃಷ್ಣಮೂರ್ತಿ, ಎಚ್‌.ಸಿ.ಮೋಹನ್‌ ಕುಮಾರ್‌, ಎಚ್‌.ಸಿ.ದೇವರಾಜು, ಎಚ್‌.ಸಿ.ಮಂಜುನಾಥ್‌, ಪೇದೆಗಳಾದ ರಮೇಶ, ಮನು, ಸೈಯದ್‌ ರಿಫತ್‌ ಅಲಿ, ಮಂಜುನಾಥ ಗಣಕಯಂತ್ರ ವಿಭಾಗದ ಎಚ್‌.ಸಿ. ರಮೇಶ್‌ ಪತ್ತೆಗೆ ಶ್ರಮಿಸಿದ್ದಾರೆ.

click me!