ಪಂದ್ಯಕ್ಕೂ ಮುನ್ನ ನಿದ್ರೆ ಮಾಡಿದ್ದ ಯಾರೋಸ್ಲಾವಾ, ತುಳಸಿದಾಸ್ ಜೂನಿಯರ್‌ ಸಿನಿಮಾ ಪ್ರೇರಣೆಯಾ?

By Roopa Hegde  |  First Published Aug 7, 2024, 11:23 AM IST

ಉಕ್ರೇನ್ ಖುಷಿಯಲ್ಲಿದೆ. ಒಲಂಪಿಕ್ಸ್ ನಲ್ಲಿ ನಿರೀಕ್ಷೆಯಂತೆ ಯಾರೋಸ್ಲಾವಾ ಚಿನ್ನ ತಂದಿದ್ದಾರೆ. ಆದ್ರೆ ಆಟಗಾರ್ತಿ ಮೈದಾನದಲ್ಲಿ ಮಾಡಿದ ಕೆಲಸ ಚರ್ಚೆಯಲ್ಲಿದೆ. ಟೆನ್ಷನ್ ದೂರ ಮಾಡಲು ಅವರು ಅನುಸರಿಸಿದ ವಿಧಾನ ಎಲ್ಲರ ಗಮನ ಸೆಳೆದಿದೆ. 
 


ಒಲಂಪಿಕ್ಸ್ ಫೈನಲ್‌ಗೆ (Paris Olympics) ಬಂದ ಆಟಗಾರರಿಗೆ ಟೆನ್ಷನ್ ಇದ್ದೇ ಇರುತ್ತೆ. ಆದ್ರೆ ಯಾವ್ದೆ ಚಿಂತೆ ಇಲ್ದೆ ಬ್ಯಾಗನ್ನು ದಿಂಬು ಮಾಡ್ಕೊಂಡು ಮಲಗಿದ್ದ ಸ್ಪರ್ಧಿಯೊಬ್ಬರು, ತಮ್ಮ ಸರದಿ ಬರ್ತಿದ್ದಂತೆ ಎದ್ದು ಹೋಗಿ ಚಿನ್ನ ತರ್ತಾರೆ ಅಂದ್ರೆ ಅದು ಸಾಮಾನ್ಯವಲ್ಲ. ಫೈನಲ್ ಟೈಂನಲ್ಲಿ ಆರಾಮಾಗಿ ನಿದ್ರೆ ಮಾಡಿದ್ದವರು ಬೇರಾರೂ ಅಲ್ಲ, ಉಕ್ರೇನಿಯನ್ ವಿಶ್ವ ದಾಖಲೆಯ ಒಡತಿ, ಎತ್ತರ ಜಿಗಿತಗಾರ್ತಿ ಯಾರೋಸ್ಲಾವಾ ಮಹುಚಿಖ್.  

ಯಾರೋಸ್ಲಾವಾ ಮಹುಚಿಖ್ (Yaroslava Mahuchikh) ಮೈದಾನದಲ್ಲಿ ಮಾಡಿದ ಕೆಲಸ ಎಲ್ಲರ ಗಮನ ಸೆಳೆದಿದೆ. ಯಾರೋಸ್ಲಾವಾ ಮಹುಚಿಖ್ ಕೆಲಸ, ಹಿಂದಿ ಚಿತ್ರ ತುಳಸಿದಾಸ್ (Tulsidas) ಜ್ಯೂನಿಯರ್ ನೆನಪಿಸುತ್ತೆ. ಈ ಚಿತ್ರದಲ್ಲಿ ಕೂಡ ಸ್ನೂಕರ್ (Snooker) ಗೇಮ್ ಫೈನಲ್ ಹಂತಕ್ಕೆ ಬರ್ತಿರುವಾಗ ಇದ್ದಕ್ಕಿದ್ದಂತೆ ನನಗೆ ರೆಸ್ಟ್ ಬೇಕು ಅಂತ ಬ್ರೇಕ್ ತಗೊಂಡು, ಮುಖಕ್ಕೆ ಕರ್ಚಿಪ್ ಹಾಕೊಂಡು ಹುಡುಗ ನಿದ್ರೆ ಮಾಡ್ತಾನೆ. ಎಲ್ಲ ಮುಗಿತು ಅಂತ ಎದ್ದು ಹೊರಟಿದ್ದ ಪ್ರೇಕ್ಷಕರು, ನಿದ್ದೆಯಿಂದ ಎದ್ದು ಬಂದ ಜೂನಿಯರ್ ತುಳಿಸಿದಾಸ್ ಆಟ ನೋಡಿ ದಂಗಾಗ್ತಾರೆ. ಫೈನಲ್ ನಲ್ಲಿ ಹಿರಿಯ ವ್ಯಕ್ತಿಯನ್ನು ಸೋಲಿಸುವ ಈ ಕಥೆ ನಿರ್ದೇಶಕ ಮೃದುಲ್ ಮಹೇಂದ್ರ ಅವರ ಬಾಲ್ಯದ ಕಥೆ. ಈ ಚಿತ್ರದಲ್ಲಿ ನಿದ್ರೆ ಮಾಡಿ ಎದ್ದ ನಂತ್ರ ಆಟವಾಡಿದ್ರೆ ಹೇಗೆ ಮೈಂಡ್ ಫ್ರೆಶ್ ಇರುತ್ತೆ ಎಂಬುದನ್ನು ತೋರಿಸಲಾಗಿದೆ. ಸಂಜಯ್ ದತ್ ಬಾಲಕನ ತರಬೇತುದಾರರಾಗಿ ಕಾಣಿಸಿಕೊಂಡಿದ್ದು, ನಿದ್ರೆ ಮಾಡೋದನ್ನು ಕೂಡ ಅವರೇ ಕಲಿಸ್ತಾರೆ.   

Latest Videos

undefined

ವಿಶ್ವಚಾಂಪಿಯನ್ ಮಣಿಸಿ ಸೆಮೀಸ್‌ಗೆ ಲಗ್ಗೆ ಇಟ್ಟ ವಿನೇಶ್ ಒಟ್ಟು ಆಸ್ತಿ ಎಷ್ಟಿದೆ?

ಈಗ ಯಾರೋಸ್ಲಾವಾ ಮಹುಚಿಖ್ ಕೂಡ ಇದನ್ನೇ ಮಾಡಿದ್ದಾರೆ. ಗೇಮ್ ಗಿಂತ ಮೊದಲು ತಾನೇನು ಮಾಡ್ತೇನೆ ಎಂಬುದನ್ನು ಕೂಡ ಯಾರೋಸ್ಲಾವಾ ಮಹುಚಿಖ್ ಹೇಳಿದ್ದಾರೆ.  

ಯಾರೋಸ್ಲಾವಾ ಮಹುಚಿಖ್ ಮಾಡಿದ ಈ ಕೆಲಸವನ್ನು ನಿದ್ರೆ ಅಥವಾ ಧ್ಯಾನ ಎಂದು ಕರೆಯಲಾಗುತ್ತದೆ. ಯಾರೋಸ್ಲಾವಾ ಮಹುಚಿಖ್, ಮಲಗಿ ನಂಬರ್ ಎಣಿಸಲು ಶುರು ಮಾಡ್ತಾರೆ. ಇಲ್ಲವೆ ಮೋಡಗಳನ್ನು ನೋಡಲು ಶುರು ಮಾಡ್ತಾರೆ. ಇದು ನನ್ನನ್ನು ರಿಲ್ಯಾಕ್ಸ್ ಮಾಡುತ್ತೆ ಅಂತಾರೆ ಯಾರೋಸ್ಲಾವಾ ಮಹುಚಿಖ್. 

ಒಲಿಂಪಿಕ್ಸ್ ನಲ್ಲಿ ಕೂಡ ತನ್ನ ಬ್ಯಾಗ್ ತೆಗೆದುಕೊಂಡು, ಅದ್ರ ಮೇಲೆ ತಲೆಯಿಟ್ಟು ಮಲಗಿದ್ದ ಯಾರೋಸ್ಲಾವಾ ಮಹುಚಿಖ್, ನಂತ್ರ ಯುಕ್ರೇನ್ ಗೆ ಮೊದಲ ಗೋಲ್ಡ್ ತಂದ್ಕೊಟ್ಟಿದ್ದಾರೆ. 22 ವರ್ಷದ ಯಾರೋಸ್ಲಾವಾ ಮಹುಚಿಖ್, 2018ರಿಂದ ಈ ನಿಯಮ ಪಾಲನೆ ಮಾಡ್ತಿದ್ದಾರೆ. ಹೀಗೆ ಮಲಗಿದ್ರೆ ನನಗೆ ವಿಶ್ರಾಂತಿ ಸಿಗುತ್ತದೆ. ಕೆಲವೊಮ್ಮೆ ನಾನು 1,2,3,4, ಎಂದು ಸಂಖ್ಯೆಗಳನ್ನು ಎಣಿಸುತ್ತೇನೆ, ಇಲ್ಲವೇ ಉಸಿರಾಟ ಕ್ರಿಯೆ ಮೇಲೆ ನನ್ನ ಗಮನ ಹರಿಸುತ್ತೇನೆ. ದೀಘ್ರವಾಗಿ ಉಸಿರು ತೆಗೆದುಕೊಂಡು ಉಸಿರು ಬಿಡ್ತೇನೆ. ನಾನು ಈ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತೇನೆ. ಸ್ಟೇಡಿಯಂನಲ್ಲಿದ್ದೇನೆ ಎಂಬುದನ್ನು ಮರೆಯುತ್ತೇನೆ. ಇದು ಮುಂದಿನ ಕೆಲಸ ಮಾಡಲು ನೆರವಾಗುತ್ತದೆ ಎಂದು ಮಾಧ್ಯಮಗಳಿಗೆ ಯಾರೋಸ್ಲಾವಾ ಮಹುಚಿಖ್ ತಿಳಿಸಿದ್ದಾರೆ. 

ಸೆಮೀಸ್‌ಗೆ ಲಗ್ಗೆಯಿಟ್ಟ ವಿನೇಶ್ ಫೋಗಟ್: ಪದಕಕ್ಕೆ ಇನ್ನೊಂದೇ ಹೆಜ್ಜೆ ಬಾಕಿ

ಇನ್ನು ಯಾರೋಸ್ಲಾವಾ ಮಹುಚಿಖ್ ಕೋಚ್ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಾಲುಗಳಲ್ಲಿ ರಕ್ತ ಸಂಗ್ರಹವಾಗೋದನ್ನು ತಡೆಯಲು ಯಾರೋಸ್ಲಾವಾ ಮಹುಚಿಖ್ ಹೀಗೆ ಮಾಡ್ತಾರೆ ಎಂದು ಕೋಚ್ ಸೆರ್ಹಿ ಸ್ಟೆಪನೋವ್ ಹೇಳಿದ್ದಾರೆ. 

ಯಾರೋಸ್ಲಾವಾ ಮಹುಚಿಖ್ ಪ್ರತಿ ಬಾರಿ ತಮ್ಮ ಜೊತೆ ಯೋಗಾ ಮ್ಯಾಟ್, ಸ್ಲೀಪಿಂಗ್ ಬ್ಯಾಗ್, ಹೂಡಿಸ್ ಮತ್ತು ಸಾಕ್ಸ್ ತೆಗೆದುಕೊಂಡು ಹೋಗ್ತಾರೆ. ಪ್ತತಿ ಋತುವಿನಲ್ಲೂ ಅವರು ಸ್ಲೋಪಿಂ ಬ್ಯಾಗ್ ಬದಲಿಸುತ್ತಿರುತ್ತಾರೆ.  2022 ರಲ್ಲಿ ಡ್ನಿಪ್ರೊದಲ್ಲಿ ನಡೆದ ರಷ್ಯಾದ ಬಾಂಬ್ ದಾಳಿಯಿಂದ ತಪ್ಪಿಸಿಕೊಂಡ  ಯಾರೋಸ್ಲಾವಾ ಮಹುಚಿಖ್, ಯುಜೀನ್‌ನಲ್ಲಿ ಬೆಳ್ಳಿ ಗೆದ್ದ ನಂತರ ಕಳೆದ ವರ್ಷ ಬುಡಾಪೆಸ್ಟ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.  
 

click me!