ಪ್ಯಾರಾಲಿಂಪಿಕ್ಸ್‌ ಟಿಟಿ: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟ ಭವಿನಾ ಪಟೇಲ್‌

By Suvarna News  |  First Published Aug 27, 2021, 9:11 AM IST

* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭವಿನಾ ಪಟೇಲ್‌

* ಭವಿನಾ ಪಟೇಲ್‌ ಮಹಿಳೆಯರ ವೈಯಕ್ತಿಕ ಸಿ4 ವಿಭಾಗದಲ್ಲಿ ಸ್ಪರ್ಧಿಸಿರುವ ಟೇಬಲ್ ಟೆನಿಸ್ ಆಟಗಾರ್ತಿ

* ಭವಿನಾ ಪಟೇಲ್‌ ಬ್ರೆಜಿಲ್ ಆಟಗಾರ್ತಿ ಎದುರು 3-0 ಅಂತರದಲ್ಲಿ ಗೆಲುವು


ಟೋಕಿಯೋ(ಆ.27): ಪ್ಯಾರಾಲಿಂಪಿಕ್ಸ್‌ನ ಟೇಬಲ್‌ ಟೆನಿಸ್‌ನಲ್ಲಿ ಭಾರತದ ಭವಿನಾ ಪಟೇಲ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಇನ್ನೊಂದೆಡೆ ಸೋನಲ್‌ ಪಟೇಲ್‌ ಸೋತು ನಿರ್ಗಮಿಸಿದ್ದಾರೆ.

ಮಹಿಳೆಯರ ವೈಯಕ್ತಿಕ ಸಿ4 ವಿಭಾಗದಲ್ಲಿ ಭವಿನಾ, 16ನೇ ಸುತ್ತಿನಲ್ಲಿ ಬ್ರೆಜಿಲ್‌ನ ಜೋಯ್ಸ್ ಡಿ ಒಲಿವಿರಿಯಾ ಎದುರು 3-0 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂತಿಮ ಎಂಟರಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ. ಶುಕ್ರವಾರ(ಆ.27) ಮುಂಜಾನೆ ನಡೆದ ಪಂದ್ಯದಲ್ಲಿ ಭವಿನಾ 12-10, 13-11, 11-6 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿ ಮಿಂಚಿದರು.

Great news for 🇮🇳 sports fans wins Class 4 Round of 16 match 3-0 against Joyce De Oliveira and advances to Quarterfinal

She will play next at 3:50 PM (IST) today. Many congratulations to our champ! pic.twitter.com/V2HLlJ8wuj

— SAI Media (@Media_SAI)

Tap to resize

Latest Videos

undefined

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಮೊದಲ ದಿನ: ಟಿಟಿಯಲ್ಲಿ ಭಾರತಕ್ಕೆ ನಿರಾಸೆ

ಇದಕ್ಕೂ ಮೊದಲು ಗುರುವಾರ ನಡೆದ ಪಂದ್ಯದಲ್ಲಿ ಮಹಿಳೆಯರ ವೈಯಕ್ತಿಕ ಸಿ4 ವಿಭಾಗದಲ್ಲಿ ಭವಿನಾ, ಗ್ರೇಟ್‌ ಬ್ರಿಟನ್‌ನ ಮೆಘನ್‌ ಶಾಕ್ಲೆಟನ್‌ ವಿರುದ್ಧ 3-1ರಿಂದ ಗೆಲುವು ಸಾಧಿಸಿದರು. ಭವಿನಾ ತಮ್ಮ ಮೊದಲ ಪಂದ್ಯದಲ್ಲಿ ಸೋತಿದ್ದರು. ಇನ್ನು ಸೋನಲ್‌ ವೈಯಕ್ತಿಕ ಸಿ3 ವಿಭಾಗದಲ್ಲಿ ಕೊರಿಯಾದ ಎಮ್‌ಜಿ ಲೀ ವಿರುದ್ಧ 1-3 ಸೆಟ್‌ಗಳಿಂದ ಸೋತು ನಿರ್ಗಮಿಸಿದರು. ಸೋನಲ್‌ ಮೊದಲ ಪಂದ್ಯದಲ್ಲೂ ಸೋಲುಂಡಿದ್ದರು. ಶುಕ್ರವಾರ ಭಾರತ ಪವರ್‌-ಲಿಫ್ಟಿಂಗ್‌ ಹಾಗೂ ಆರ್ಚರಿಯಲ್ಲಿ ಸ್ಪರ್ಧಿಸಲಿದೆ.

click me!