ಪ್ಯಾರಾಲಿಂಪಿಕ್ಸ್‌: ರಾಜ್ಯದ ಪವರ್ ಲಿಫ್ಟರ್ ಸಕಿನಾಗೆ 5ನೇ ಸ್ಥಾನ

By Kannadaprabha News  |  First Published Aug 28, 2021, 9:28 AM IST

* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಶುಕ್ರವಾರ ಭಾರತಕ್ಕೆ ಮಿಶ್ರಫಲ

* 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ರಾಜ್ಯದ ಪವರ್‌ಲಿಫ್ಟರ್ ಸಕಿನಾ ಖಾತುನ್‌

* ವೇಟ್‌ಲಿಫ್ಟಿಂಗ್, ಆರ್ಚರಿ, ಶಾಟ್‌ಫುಟ್‌ನಲ್ಲಿ ಭಾರತಕ್ಕೆ ನಿರಾಸೆ


ಟೋಕಿಯೋ(ಆ.28): ಪ್ಯಾರಾಲಿಂಪಿಕ್ಸ್‌ನ ಪವರ್‌ಲಿಫ್ಟಿಂಗ್‌ನಲ್ಲಿ 2014ರ ಕಾಮನ್‌ವೆಲ್ತ್‌ ಗೇಮ್ಸ್‌ನ ಕಂಚಿನ ಪದಕ ವಿಜೇತೆ ಭಾರತ ಸಕಿನಾ ಖಾತುನ್‌ 5ನೇ ಸ್ಥಾನಕ್ಕೆ ತೃಪ್ತರಾದರು.

50 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಗಿಳಿದ ಬೆಂಗಳೂರಿನ 32 ವರ್ಷದ ಸಕಿನಾ ಮೊದಲ ಪ್ರಯತ್ನದಲ್ಲಿ 90 ಕೆ.ಜಿ. ಭಾರತ ಎತ್ತಿದರು. ಆದರೆ, 2ನೇ ಪ್ರಯತ್ನದಲ್ಲಿ 93 ಕೆ.ಜಿ. ಭಾರ ಎತ್ತಲು ವಿಫಲರಾದ ಅವರು, 3ನೇ ಸುತ್ತಿನಲ್ಲಿ 93 ಕೆ.ಜಿ. ಭಾರ ಎತ್ತುವಲ್ಲಿ ಸಫಲರಾದರು.

🇮🇳’s Sakina Khatun finishes 5th in Women’s 50kg at

She lifted 93kg as her highest bench press. pic.twitter.com/7G8NaJdpsI

— Sportistan.in (@sportistan_in)

Latest Videos

undefined

ಆದರೆ, 120 ಕೆ.ಜಿ. ತೂಕ ಎತ್ತಿದ ಚೀನಾದ ದಂಡನ್‌ ಹೂ ಚಿನ್ನದ ಜಯಿಸಿದರೆ, ಇಷ್ಟೇ ತೂಕ ಎತ್ತಿದ ಈಜಿಪ್ಟ್‌ನ ರೆಹಾಬ್‌ ಅಹ್ಮದ್‌ ಬೆಳ್ಳಿಗೆ ತೃಪ್ತರಾದರು. ಗ್ರೇಟ್‌ ಬ್ರಿಟನ್‌ನ ಒಲಿವಿಯಾ ಬ್ರೂಮ್‌ (107 ಕೆ.ಜಿ.) ಕಂಚಿನ ಪದಕ ಕೊರಳಿಗೇರಿಸಿಕೊಂಡರು.

ವೇಟ್‌ಲಿಫ್ಟಿಂಗ್, ಆರ್ಚರಿ, ಶಾಟ್‌ಫುಟ್‌ನಲ್ಲಿ ನಿರಾಸೆ

ಟೋಕಿಯೋ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಶುಕ್ರವಾರ ಭಾರತ ಮಿಶ್ರಫಲ ಅನುಭವಿಸಿತು. ಒಂದೆಡೆ ಟಿಟಿಯಲ್ಲಿ ಭವಿನಾ ಪಟೇಲ್‌ ಪದಕ ಖಚಿತ ಪಡಿಸಿದರೆ, ಫವರ್‌ ಲಿಫ್ಟಿಂಗ್‌, ಶಾಟ್‌ಪುಟ್‌ನಲ್ಲಿ ಭಾರತದ ಕ್ರೀಡಾಪಟುಗಳು ನಿರಾಸೆ ಅನುಭವಿಸಿದರು.

ಟೋಕಿಯೋ ಪ್ಯಾರಾಲಿಂಪಿಕ್ಸ್‌: ಟಿಟಿಯಲ್ಲಿ ಫೈನಲ್‌ ಪ್ರವೇಶಿಸಿ ಭವಿನಾ ಪಟೇಲ್‌, ಚಿನ್ನಕ್ಕೆ ಇನ್ನೊಂದೇ ಹೆಜ್ಜೆ

ಪುರುಷರ 65 ಕೆ.ಜಿ. ಪವರ್‌ಲಿಫ್ಟಿಂಗ್‌ನಲ್ಲಿ ಕಣಕ್ಕಿಳಿದ ಜೈದೀಪ್‌ ಜೇಸ್ವಾಲ್‌ ಮೊದಲ 2 ಪ್ರಯತ್ನದಲ್ಲೂ 160 ಕೆ.ಜಿ. ಭಾರ ಎತ್ತಲು ವಿಫಲರಾದರು. ಕೊನೆಯ ಸುತ್ತಿನಲ್ಲಿ 167 ಕೆ.ಜಿ. ಎತ್ತುವ ಪ್ರಯತ್ನದಲ್ಲೂ ಜೈದೀಪ್‌ ಸಫಲರಾಗಲಿಲ್ಲ. ಪುರುಷರ ಶಾಟ್‌ಪುಟ್‌ ವಿಭಾಗದಲ್ಲಿ ಟೆಕ್‌ಚಂದ್‌ ವೈಯಕ್ತಿಯ ಗರಿಷ್ಠ ದೂರಕ್ಕೆ(9.04 ಮೀ.) ಶಾಟ್‌ಪುಟ್‌ ಎಸೆದರೂ 8ನೇ ಸ್ಥಾನಕ್ಕೆ ತೃಪ್ತರಾದರು.

ಇನ್ನು ಆರ್ಚರಿಯಲ್ಲಿ ಪುರುಷರ ವೈಯಕ್ತಿಕ ರಿಕರ್ವ್ ಓಪನ್‌ನಲ್ಲಿ ವಿವೇಕ್‌ ಚಿಕಾರ 10ನೇ ಹಾಗೂ ಹರ್ವಿಂದರ್‌ ಸಿಂಗ್‌ 21ನೇ ಸ್ಥಾನ ಪಡೆದರು. ಪುರುಷರ ವೈಯಕ್ತಿಕ ಕಾಂಪೌಂಡ್‌ ಓಪನ್‌ನಲ್ಲಿ ರಾಕೇಶ್‌ ಕುಮಾರ್‌ 3 ಹಾಗೂ ಶ್ಯಾಮ್‌ ಸುಂದರ್‌ ಸ್ವಾಮಿ 21ನೇ ಸ್ಥಾನ ಪಡೆದರು. ಮಹಿಳೆಯರ ವೈಯಕ್ತಿಕ ಕಾಂಪೌಂಡ್‌ ಓಪನ್‌ನಲ್ಲಿ ಜ್ಯೋತಿ ಬಲ್ಯಾನ್‌ 15ನೇ ಸ್ಥಾನಕ್ಕೆ ತೃಪ್ತರಾದರು.
 

click me!