ಟೋಕಿಯೋ 2020: ಗೋಲು ಪೆಟ್ಟಿಗೆಯೇ ನನ್ನ ದೇಗುಲ: ಶ್ರೀಜೇಶ್‌!

Kannadaprabha News   | Asianet News
Published : Aug 06, 2021, 12:14 PM IST
ಟೋಕಿಯೋ 2020: ಗೋಲು ಪೆಟ್ಟಿಗೆಯೇ ನನ್ನ ದೇಗುಲ: ಶ್ರೀಜೇಶ್‌!

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ ಹಾಕಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಗೋಲ್ ಕೀಪರ್ ಶ್ರೀಜೇಶ್ * ಗೆಲುವಿನ ಬೆನ್ನಲ್ಲೇ ಗೋಲು ಪೆಟ್ಟಿಗೆಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಶ್ರೀಜೇಶ್‌ * 41 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತ ಹಾಕಿ ತಂಡ

ಟೋಕಿಯೋ(ಆ.06): ಭಾರತದ ಯಶಸ್ಸಿಗೆ ತನ್ನ ಶಕ್ತಿ ಮೀರಿ ಶ್ರಮಿಸಿದ ಶ್ರೀಜೇಶ್‌, ಪಂದ್ಯ ಮುಗಿದ ಬಳಿಕ ಗೋಲು ಪೆಟ್ಟಿಗೆಗೆ ನಮಸ್ಕರಿಸಿ ಕ್ರೀಡೆಯ ಮೇಲೆ ತಮಗಿರುವ ಭಕ್ತಿಯನ್ನು ತೋರಿದರು. ‘ಗೋಲು ಪೆಟ್ಟಿಗೆಯೇ ನನ್ನ ದೇಗುಲ. ಅದಕ್ಕೆ ನಮಸ್ಕರಿಸಬೇಕಾದದ್ದು ನನ್ನ ಕರ್ತವ್ಯ. ನಾನು ಹಾಕಿ ಆಡಲು ಶುರು ಮಾಡಿ 21 ವರ್ಷಗಳಾಗಿವೆ. ನನ್ನ ಈ ಸುದೀರ್ಘ ವೃತ್ತಿಬದುಕಿನಲ್ಲಿ ಅತಿದೊಡ್ಡ ಕ್ಷಣವಿದು’ ಎಂದು ಭಾವುಕರಾದರು.

ಭಾರತದ ಯಶಸ್ಸಿನ ಹಿಂದಿದ್ದಾರೆ ಶ್ರೀಜೇಶ್‌ ಎಂಬ ‘ಮಹಾಗೋಡೆ’!

ಭಾರತ ಒಲಿಂಪಿಕ್ಸ್‌ ಕಂಚು ಗೆಲ್ಲಲು ಮಾಜಿ ನಾಯಕ, ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಪ್ರಮುಖ ಕಾರಣ. ಟೂರ್ನಿಯಲ್ಲಿ ಏನಿಲ್ಲವೆಂದರೂ ಕನಿಷ್ಠ 25ಕ್ಕೂ ಹೆಚ್ಚು ಪೆನಾಲ್ಟಿಕಾರ್ನರ್‌ಗಳನ್ನು ಏಕಾಂಗಿಯಾಗಿ ತಡೆದು ಭಾರತದ ಪಾಲಿನ ಅತಿದೊಡ್ಡ ಹೀರೋ ಆಗಿ ಹೊರಹೊಮ್ಮಿದ್ದಾರೆ.

ಟೋಕಿಯೋ 2020: ಕಂಚಿನ ಪದಕ ಭಾರತೀಯ ಹಾಕಿಗೇಕಿಷ್ಟು ಮಹತ್ವ?

3ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿದಿದ್ದ ಶ್ರೀಜೇಶ್‌ ಮೇಲೆ ತಂಡ ಅತಿಯಾಗಿ ಅವಲಂಬಿತಗೊಂಡಿತ್ತು. ತಂಡದ ಡಿಫೆಂಡರ್‌ಗಳು ಪದೇ ಪದೇ ಮಾಡುತ್ತಿದ್ದ ತಪ್ಪುಗಳು ಶ್ರೀಜೇಶ್‌ರನ್ನು ಒತ್ತಡಕ್ಕೆ ಸಿಲುಕಿಸುತ್ತಿತ್ತು. ಒತ್ತಡಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಶ್ರೀಜೇಶ್‌, ಭಾರತದ ಯಶಸ್ಸಿನಲ್ಲಿ ಅತಿದೊಡ್ಡ ಪಾತ್ರ ವಹಿಸಿದ್ದಾರೆ.
 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ