* ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಪೈಲ್ವಾನ್ ಭಜರಂಗ್ ಪೂನಿಯಾ
* ಇನ್ನೊಂದು ಪಂದ್ಯ ಗೆದ್ದರೆ ಒಲಿಂಪಿಕ್ಸ್ ಪದಕ ಖಚಿತ
* ಮಧ್ಯಾಹ್ನ 2.55ಕ್ಕೆ ಆರಂಭವಾಗಲಿದೆ ಸೆಮಿಫೈನಲ್ ಪಂದ್ಯ
ಟೋಕಿಯೋ(ಆ.06): ವಿಶ್ವದ ನಂ.2 ಕುಸ್ತಿಪಟು ಭಜರಂಗ್ ಪೂನಿಯಾ ನಿರೀಕ್ಷೆಯಂತೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪುರುಷರ 65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ವಿಭಾಗದಲ್ಲಿ ಇರಾನಿನ ಮೊರ್ತೆಜಾ ಘಿಯಾಸಿ ಚೆಕಾ ಎದುರು 2-1 ಅಂಕಗಳ ರೋಚಕ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಒಲಿಂಪಿಕ್ಸ್ ಪದಕಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಕ್ವಾರ್ಟರ್ ಫೈನಲ್ ಇರಾನಿನ ಮೊರ್ತೆಜಾ ಘಿಯಾಸಿ ಚೆಕಾ ಮೊದಲಿಗೆ ಒಂದು ಅಂಕ ಗಳಿಸಿದರು. ಇದರೊಂದಿಗೆ ಮೊದಲ ಸುತ್ತಿನಲ್ಲಿ ಇರಾನಿನ ಕುಸ್ತಿಪಟು 1-0 ಮುನ್ನಡೆ ಸಾಧಿಸಿದ್ದರು. ಇನ್ನು ಎರಡನೇ ಸುತ್ತಿನಲ್ಲಿ ತನ್ನ ಅನುಭವವನ್ನು ಬಳಸಿಕೊಂಡ ಭಜರಂಗ್ ಪೂನಿಯಾ 2 ಅಂಕಗಳನ್ನು ಗಳಿಸುವ ಮೂಲಕ ಮೇಲುಗೈ ಸಾಧಿಸಿದರು. ಇರಾನಿನ ಅಟಗಾರನನ್ನು ಬೆನ್ನು ಮುಟ್ಟಿಸುವ ಮೂಲಕ ಇನ್ನೂ ಒಂದು ನಿಮಿಷ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.
undefined
Tokyo 2020 ನಿಮ್ಮ ಛಲದ ಆಟ ಕಿರಿಯರಿಗೆ ಸ್ಪೂರ್ತಿ: ರಾಣಿ ಪಡೆಗೆ ಪ್ರಧಾನಿ ಮೋದಿ ಶಹಬ್ಬಾಶ್
| through to SF
Defeats Morteza Cheka Ghiasi in Men’s freestyle 65 Kg 🇮🇳👏👏 pic.twitter.com/1pgjRK28N5
| |
Men's Freestyle 65kg 1/4 Finals Results storms into Semifinals with a victory pin over Morteza Ghiasi. Used all his experience to sail through! March on champ 👏🙌 https://t.co/mNUKEveDfi pic.twitter.com/eC03JEdtpY
ಸೆಮಿಫೈನಲ್‌ನಲ್ಲಿ ಭಜರಂಗ್ ಪೂನಿಯಾ ಅಜರ್‌ಬೈಜಾನಿಯಾದ ಹಾಜಿ ಆಲಿಯಾವ್ ಎದುರು ಕಾದಾಡಲಿದ್ದಾರೆ. ಈ ಕಾದಾಟವು ಇಂದು ಮಧ್ಯಾಹ್ನ 2.55ಕ್ಕೆ ಆರಂಭವಾಗಲಿದೆ, ಈ ಪಂದ್ಯವನ್ನು ಜಯಿಸಿದರೆ ಭಜರಂಗ್ ಒಲಿಂಪಿಕ್ಸ್ ಪದಕ ಖಚಿತಪಡಿಸಿಕೊಳ್ಳಲಿದ್ದಾರೆ.