* ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7 ಪದಕಗಳನ್ನು ಗೆದ್ದ ಭಾರತ
* ಒಲಿಂಪಿಕ್ಸ್ ಪದಕ ವಿಜೇತರಿಗೆ ಬಿಸಿಸಿಐ ಬಂಪರ್ ಬಹುಮಾನ
* ನೀರಜ್ ಚೋಪ್ರಾಗೆ ಹರಿದು ಬಂತು 9 ಕೋಟಿ ರುಪಾಯಿ ಬಹುಮಾನ
ನವದೆಹಲಿ(ಆ.08): ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಐತಿಹಾಸಿಕ ಚಿನ್ನ ಗೆದ್ದ ಬೆನ್ನಲ್ಲೇ ಬಿಸಿಸಿಐ ಚೋಪ್ರಾ ಸೇರಿ ಪದಕ ಗೆದ್ದ ಭಾರತದ ಕ್ರೀಡಾಪಟುಗಳಿಗೆ ನಗದು ಬಹುಮಾನ ಘೋಷಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ‘ಚಿನ್ನ ಗೆದ್ದ ನೀರಜ್ ಚೋಪ್ರಾಗೆ 1 ಕೋಟಿ, ಬೆಳ್ಳಿ ಗೆದ್ದ ರವಿ ದಹಿಯಾ, ಮೀರಾಭಾಯಿ ಚಾನುಗೆ ತಲಾ 50 ಲಕ್ಷ, ಕಂಚು ಗೆದ್ದ ಪಿ.ವಿ.ಸಿಂಧು, ಭಜರಂಗ್ ಪೂನಿಯಾ, ಲವ್ಲೀನಾ ಬೊರ್ಗೊಹೈನ್‌ಗೆ ತಲಾ 25 ಲಕ್ಷ ಹಾಗೂ ಪುರುಷರ ಹಾಕಿ ತಂಡಕ್ಕೆ 1.25 ಕೋಟಿ ನೀಡಲಾಗುವುದು’ ಎಂದು ತಿಳಿಸಿದ್ದಾರೆ.
INR 1 Cr. - 🥇 medallist
50 lakh each - 🥈 medallists & Ravi Kumar Dahiya
25 lakh each – 🥉 medallists , ,
INR 1.25 Cr. – men's team | |
undefined
ನೀರಜ್‌ಗೆ 9 ಕೋಟಿ ರುಪಾಯಿ ಬಹುಮಾನ..!
ಚಂಡೀಗಢ: ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಬಹುಮಾನಗಳ ಸುರಿಮಳೆಯೇ ಹರಿದು ಬರುತ್ತಿದ್ದು, ಸರಕಾರಿ ಉದ್ಯೋಗ, ನಿವೇಶನದ ಜೊತೆ 9 ಕೋಟಿ ರೂ. ಬಹುಮಾನವೂ ಸಿಗಲಿದೆ.
ಚಿನ್ನ ಗೆದ್ದ ನೀರಜ್‌ಗೆ ಮಹೀಂದ್ರಾದಿಂದ XUV 700 ಗಿಫ್ಟ್!
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಖಟ್ಟರ್ 6 ಕೋಟಿ ರು. ಬಹುಮಾನ, ಸರ್ಕಾರಿ ನೌಕರಿ, ಶೇ.50 ರಿಯಾಯ್ತಿಯಲ್ಲಿ ನಿವೇಶನ ಘೋಷಿಸಿದರೆ, ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ 2 ಕೋಟಿ ರುಪಾಯಿ ಬಹುಮಾನ ಘೋಷಿಸಿದ್ದಾರೆ.