ಚಿನ್ನ ಗೆದ್ದ ನೀರಜ್.. ಮೋದಿ ಅಂದು ಮಾಡಿದ್ದ ಟ್ವೀಟ್ ವೈರಲ್!

By Suvarna News  |  First Published Aug 7, 2021, 10:13 PM IST

*  ಟೊಕಿಯೋದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ
* ಐತಿಹಾಸಿಕ ಸಾಧನೆಗೆ ಇಡೀ ದೇಶದ ಮೆಚ್ಚುಗೆ
*  ಪ್ರಧಾನಿ ನರೇಂದ್ರ ಮೋದಿ 2019  ರಲ್ಲಿ ಮಾಡಿದ್ದ ಟ್ವೀಟ್ ವೈರಲ್
* ನೀರಜ್ ಚಿಕಿತ್ಸೆಗೆ ದಾಖಲಾಗಿದ್ದಾಗ ಹಾರೈಕೆ ತಿಳಿಸಿದ್ದರು


ನವದೆಹಲಿ(ಆ.07): ಟೋಕಿಯೋದಲ್ಲಿ ಚಿನ್ನ ಗೆದ್ದು ಐತಿಹಾಸಿಕ ದಾಖಲೆ ಬರೆದ ಹುಡುಗ ನೀರಜ್ ಚೋಪ್ರಾ  2019  ರಲ್ಲಿ ಮೊಣಕೈ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಟ್ವೀಟ್ ಒಂದು ಈಗ ವೈರಲ್ ಆಗುತ್ತಿದೆ.

ನೀರಜ್ ನೀವು ಬೇಗ ಗುಣಮುಖರಾಗುತ್ತೀರಿ ಎನ್ನುವ ನಂಬಿಕೆ ಇದೆ.. ನಮ್ಮ ಹಾರೈಕೆ ನಿಮ್ಮೊಂದಿಗೆ ಸದಾ ಇರುತ್ತದೆ ಎಂದು ಪ್ರಧಾನಿ ತಿಳಿಸಿದ್ದರು.  ನೀರಜ್ ಚೋಪ್ರಾ ಸಹ ಇದಕ್ಕೆ ಧನ್ಯವಾದ ತಿಳಿಸಿ   ಮೋದಿ ನಾಯಕತ್ವದ ಗುಣ ಕೊಂಡಾಡಿದ್ದರು.

Latest Videos

undefined

ಟೋಕಿಯೋ ಒಲಿಂಪಿಕ್ಸ್‌ನಲ್ಲಿ  ಭಾರತಕ್ಕೆ ಚಿನ್ನ ತೊಡಿಸಿದ  ಜಾವಲಿನ್‌ ಪಟು ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಇಡೀ ದೇಶವೇ ಕ್ರೀಡಾಪಟುವನ್ನು ಕೊಂಡಾಡುತ್ತಿದೆ.  ಮಿಲ್ಖಾ ಸಿಂಗ್ ಕನಸು ನನಸಾಗಿದೆ. ಪ್ರಧಾನಿ ಮೋದಿ ಸಹ ದೂರವಾಣಿ ಕರೆ ಮಾಡಿ ಚೋಪ್ರಾ ಅವರನ್ನು ಅಭಿನಂದಿಸಿದ್ದಾರೆ.

ಚಿನ್ನದ ಗುಡುಗ ನೀರಜ್‌ಗೆ ತರಬೇತಿ ಕೊಟ್ಟಿದ್ದು ಉತ್ತರ ಕನ್ನಡದ ಗುರು ಕಾಶಿನಾಥ್

ಒಲಿಂಪಿಕ್ಸ್ ಜಾವಲಿನ್‌ ಫೈನಲ್‌ ಸ್ಪರ್ಧೆಯಲ್ಲಿ ಬರೋಬ್ಬರಿ 87.58 ಮೀಟರ್ ಎಸೆಯುವ ಮೂಲಕ ಪದಕ ಜಯಿಸಿದ್ದಾರೆ. ಭಾರತ ಸ್ವಾತಂತ್ರ್ಯಗೊಂಡ ಬಳಿಕ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅಥ್ಲೀಟಿಕ್ಸ್‌ ವಿಭಾಗದಲ್ಲಿ ದೇಶಕ್ಕೆ ನೀರಜ್‌ ಚೋಪ್ರಾ ಮೊದಲ ಪದಕ ಗೆದ್ದು ಕೊಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಉದ್ಯೋಗಿಯಾಗಿರುವ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

 ಮೊದಲ ಪ್ರಯತ್ನದಲ್ಲಿ ನೀರಜ್‌ ಚೋಪ್ರಾ ಬರೋಬ್ಬರಿ 87.03 ಮೀಟರ್‌ ದೂರ ಎಸೆಯುವ ಮೂಲಕ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರು.

 

 

 

 

 

Thanks . I hope you are recovering well. My best wishes. https://t.co/UbZqwpvaXH

— Narendra Modi (@narendramodi)

Neeraj, you’re a brave youngster who has been making India proud continuously!

Everyone is praying for your quick and complete recovery. https://t.co/aTTFMbQHdp

— Narendra Modi (@narendramodi)
click me!