ಟೋಕಿಯೋ ಒಲಿಂಪಿಕ್ಸ್‌: ಆತನು ದಾಸ್‌ ಬರಿಗೈಲಿ ವಾಪಸ್‌

By Kannadaprabha NewsFirst Published Aug 1, 2021, 8:06 AM IST
Highlights

* ಒಲಿಂಪಿಕ್ಸ್‌ ಪದಕ ಗೆಲ್ಲುವ ಆತನು ದಾಸ್ ಕನಸು ಭಗ್ನ

* ಕ್ವಾರ್ಟರ್‌ ಫೈನಲ್‌ನಲ್ಲೇ ಮುಗ್ಗರಿಸಿದ ಭಾರತದ ಆರ್ಚರಿಪಟು

* ಒಲಿಂಪಿಕ್ಸ್‌ನಲ್ಲಿ ಒಂದೂ ಪದಕ ಗೆಲ್ಲದ ಭಾರತದ ಆರ್ಚರಿ ವಿಭಾಗ

ಟೋಕಿಯೋ(ಆ.01): ಕೊನೆಯ ಆಶಾಕಿರಣವಾಗಿದ್ದ ಆರ್ಚರಿಪಟು ಆತನು ದಾಸ್‌ ಶನಿವಾರ ನಡೆದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಪರಭಾವಗೊಳ್ಳುವ ಮೂಲಕ, ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಬಿಲ್ಲುಗಾರಿಕೆ ವಿಭಾಗದಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದೆ. ಇದರೊಂದಿಗೆ ಈ ಬಾರಿ ಖಚಿತ ಪದಕದ ಭರವಸೆ ಮೂಡಿಸಿದ್ದ ಆರ್ಚರಿಪಟುಗಳು ಬರೀಗೈನಲ್ಲಿ ಭಾರತಕ್ಕೆ ಮರಳಲಿದ್ದಾರೆ.

ಎಲಿಮಿನೇಷನ್‌ ಸುತ್ತಿನಲ್ಲಿ ಲಂಡನ್‌ ಒಲಿಂಪಿಕ್ಸ್‌ ಚಿನ್ನದ ಪ್ರಕ ವಿಜೇತ ಓ ಜಿನ್‌ ಹೈಕ್‌ ವಿರುದ್ಧ ಜಯ ಸಾಧಿಸಿದ ಅತನು ದಾಸ್‌, ಮತ್ತದೇ ಶ್ರೇಷ್ಠ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಜಪಾನ್‌ನ ತಕಹರು ಪುರುಕಾವ ವಿರುದ್ಧ 6-4 ಅಂತರದಿಂದ ಸೋಲುಂಡರು. ವಿಶ್ವದ ಅಗ್ರ ಶ್ರೇಯಾಂಕಿತೆ ಆಗಿದ್ದರೂ ಅತನು ದಾಸ್‌ ಪತ್ನಿ ದೀಪಿಕಾ ಕುಮಾರಿಯೂ ಅಂತಿಮ 8ರ ಘಟದಲ್ಲೇ ನಿರ್ಗಮಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕೆಂಬ ಆಸೆ 3ನೇ ಬಾರಿಯೂ ಕೈಗೂಡಿರಲಿಲ್ಲ.

's Takaharu Furukawa gets the better of Atanu Das and it's over for in 💔

Atanu loses 6-4 to Furukawa after a close battle of bows 🏹 | |

— #Tokyo2020 for India (@Tokyo2020hi)

ಪೂಜಾ ರಾಣಿ ಕೈ ತಪ್ಪಿದ ಕಂಚು:

ಮಹಿಳೆಯರ 75 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಪೂಜಾ ರಾಣಿ, ಚೀನಾದ ಚಿಯಾನ್‌ ಲೀ ವಿರುದ್ಧ 0-5 ಅಂತರದಲ್ಲಿ ಪರಾಭವಗೊಂಡರು. ಇದರೊಂದಿಗೆ ಸೆಮೀಸ್‌ಗೇರಿ ಭಾರತಕ್ಕೆ ಮತ್ತೊಂದು ಪದಕ ಖಚಿತ ಪಡಿಸಲು ಪೂಜಾಗೆ ಸಾಧ್ಯವಾಗಲಿಲ್ಲ.

boxer Pooja Rani fails to advance in the women's middleweight (69-75kg) quarter-final, losing to Qian Li of 0-5 by unanimous decision 🥊 | | |

— #Tokyo2020 for India (@Tokyo2020hi)
click me!