ಇತಿಹಾಸ ರಚಿಸಿದ ಕನ್ನಡಿಗ ಸುಹಾಸ್; ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಖಚಿತಪಡಿಸಿದ ಮೊದಲ IAS ಅಧಿಕಾರಿ!

By Suvarna News  |  First Published Sep 4, 2021, 7:30 PM IST
  • ಟೋಕಿಯೋ ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಭಾರತದ ಮಿಂಚಿನ ಪ್ರದರ್ಶನ
  • ಪದಕ ಬೇಟೆಯಲ್ಲಿ ಇತಿಹಾಸ ರಚಿಸಿದ ಭಾರತ, 
  •  ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಖಚಿತಪಡಿಸಿದ ಮೊದಲ IAS ಅಧಿಕಾರಿ

ಟೋಕಿಯೋ(ಸೆ.04): ಪ್ಯಾರಾಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆಗೆ ಪ್ರಶಂಸೆಗಳ ಸುರಿಮಳೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಖುದ್ದು ಕರೆ ಮಾಡಿ ಪದಕ ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರಲ್ಲಿ ಸುಹಾಸ್ ಯತಿರಾಜ್  ಸಾಧನೆ ಹಲವು ವಿಶೇಷತೆ ಹೊಂದಿದೆ.  ಪ್ಯಾರಾಒಲಿಂಪಿಕ್ಸ್ ಕೂಟದ ಬ್ಯಾಡ್ಮಿಂಟನ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಸುಹಾಸ್ ಯತಿರಾಜ್ ಪದಕ ಗೆಲ್ಲಲಿರುವ ಮೊದಲ ಐಎಎಸ್ ಅಧಿಕಾರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಮತ್ತೊಂದು ವಿಶೇಷ ಅಂದರೆ ಸುಹಾಸ್ ಯತಿರಾಜ್ ಮೂಲತಹ ಕನ್ನಡಿಗ.

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

Tap to resize

Latest Videos

undefined

ಭಾನುವಾರ(ಸೆ.05) ನಡೆಯಲಿರುವ ಪ್ಯಾರಾಒಲಿಂಪಿಕ್ಸ್ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ಸುಹಾಸ್ ಯತಿರಾಜ್ ಫ್ರಾನ್ಸ್‌ನ ಲುಕಾಸ್ ಮಝೂರ್ ವಿರುದ್ಧ ಚಿನ್ನದ ಪದಕ್ಕಾಗಿ ಹೋರಾಟ ನಡೆಸಲಿದ್ದಾರೆ. ಫೈನಲ್ ತಲುಪುವ ಮೂಲಕ ಸುಹಾಸ್ ಪದಕ ಖಚಿತಪಡಿಸಿದ್ದಾರೆ.

ಸುಹಾಸ್ ಯತಿರಾಜ್ ನೋಯ್ಡಾದ ಗೌತಮ ಬುದ್ಧ ನಗರದ ಐಎಎಸ್ ಅಧಿಕಾರಿಯಾಗಿದ್ದಾರೆ. ಸುಹಾಸ್ ಸಂಪೂರ್ಣ ಹೆಸರು ಸುಹಾಸ್ ಲಾಲಿನಕೆರೆ ಯತಿರಾಜ್. ಮೂಲತಃ ಹಾಸನದ ಸುಹಾಸ್, ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಪದಕ ಗೆಲ್ಲಲಿರುವ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಲಂಡನ್‌ ಒಲಿಂಪಿಕ್ಸ್‌ ಟೀವಿಯಲ್ಲಿ ನೋಡಿ ಆರ್ಚರ್‌ ಆದ ಹರ್ವಿಂದರ್ ಸಿಂಗ್‌!

ಹಾಸನದಲ್ಲಿ ಬಾಲ್ಯ ಹಾಗೂ ಶಿಕ್ಷಣ ಪೂರೈಸಿದ ಸುಹಾಸ್ ಯತಿರಾಜ್ ತಂದೆ ಸರ್ಕಾರಿ ಉದ್ಯೋಗಿಯಾದ ಕಾರಣ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಮಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜನೀಯರಿಂಗ್ ಪದವಿ ಪಡೆದ ಸುಹಾಸ್ ಇದೀಗ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.

click me!