
ನವದೆಹಲಿ(ಸೆ.07): ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಅಪೂರ್ವ ಸಾಧನೆ ತೋರಿದ ಕನ್ನಡಿಗ, ಬ್ಯಾಡ್ಮಿಂಟನ್ ತಾರೆ ಸುಹಾಸ್ ಯತಿರಾಜ್, ಶೂಟರ್ ಅವನಿ ಲೇಖರಾ ಅವರನ್ನೊಳಗೊಂಡ ಸಾಧಕರ ತಂಡ ಸೋಮವಾರ ತವರಿಗೆ ಮರಳಿತು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಶೂಟಿಂಗ್‌ನಲ್ಲಿ ಚಿನ್ನ ಹಾಗೂ ಕಂಚು ಗೆದ್ದ ಅವನಿ ಲೇಖರಾ, ಬ್ಯಾಡ್ಮಿಂಟನ್ ಪದಕ ವಿಜೇತರಾದ ಸುಹಾಸ್ ಯತಿರಾಜ್, ಕೃಷ್ಣ ನಗರ್, ಮನೋಜ್ ಸರ್ಕಾರ್, ಶೂಟಿಂಗ್‌ನಲ್ಲಿ ಪದಕ ಗೆದ್ದ ಸಿಂಗರಾಜ್ ಅಧಾನ, ಮನೀಶ್ ನರ್ವಾಲ್ ಒಳಗೊಂಡ ತಂಡವನ್ನು ಹರ್ಯಾಣ ಕ್ರೀಡಾ ಸಚಿವ, ಮಾಜಿ ಹಾಕಿಪಟು ಸಂದೀಪ್ ಸಿಂಗ್, ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ ಅಧಿಕಾರಿಗಳು, ಕ್ರೀಡಾಪಟುಗಳ ಕುಟುಂಬಸ್ಥರು ಆತ್ಮೀಯವಾಗಿ ಸ್ವಾಗತಿಸಿದರು. ಈ ವೇಳೆ ಹೆಗಲ ಮೇಲೆ ತಮ್ಮ ನೆಚ್ಚಿನ ಕ್ರೀಡಾಪಟುಗಳ ಹೊತ್ತು ಅಭಿಮಾನಿಗಳು ಸಂಭ್ರಮಿಸಿದರು.
ಭಾರತ ಕ್ರೀಡಾ ಇತಿಹಾಸದಲ್ಲಿ ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೆ ವಿಶೇಷ ಸ್ಥಾನ; ಪದಕ ಸಾಧನೆಗೆ ಕೊಂಡಾಡಿದ ಮೋದಿ!
ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿದ್ದು, 5 ಚಿನ್ನ, 8 ಬೆಳ್ಳಿ ಸೇರಿದಂತೆ 19 ಪದಕಗಳನ್ನು ಗೆಲ್ಲುವ ಮೂಲಕ ನೂತನ ಇತಿಹಾಸ ರಚಿಸಿದ್ದಾರೆ. ಟೋಕಿಯೋದಿಂದ ಹಿಂದಿರುಗಿದ ಕ್ರೀಡಾಪಟುಗಳನ್ನು ಗುರುವಾರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.