ಕೊರೋನಾ ಭೀತಿಯ ನಡುವೆಯೇ ಒಲಿಂಪಿಕ್ಸ್ ಆಯೋಜಿಸಿರುವ ಜಪಾನ್ ಅಥ್ಲೀಟ್‌ಗಳಿಗೆ ಕೆಲವೊಂದು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಪೈಕಿ ಅಟಗಾರರಿಗೆ ಸೆಕ್ಸ್ ಮಾಡುವಂತಿಲ್ಲ ಎನ್ನುವ ಸೂಚನೆ ನೀಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಟೋಕಿಯೋ(ಫೆ.05): ಇದೇ ವರ್ಷ ಜುಲೈನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ವೇಳೆ ಕ್ರೀಡಾಪಟುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತಿಲ್ಲ ಎಂದು ಆಯೋಜಕರು ಸೂಚಿಸಿದ್ದಾರೆ.
ಕೊರೋನಾ ಸೋಂಕಿನ ಭೀತಿ ಇರುವ ಕಾರಣ ಕ್ರೀಡಾಪಟುಗಳು ಜಪಾನ್‌ಗೆ ಬಂದಿಳಿದಾಗಿನಿಂದ ವಾಪಸ್ ತೆರಳುವವರೆಗೂ ಹೇಗಿರಬೇಕು ಎನ್ನುವುದರ ಕುರಿತು ಆಯೋಜಕರು ಮಾರ್ಗಸೂಚಿ ಪ್ರಕಟಿಸಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ ವೇಳೆ ಶೇ.75ರಷ್ಟು ಕ್ರೀಡಾಪಟುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು ಎಂದು ಅಮೆರಿಕದ ಈಜುಪಟು ರಾರಯನ್ ಲಾಕ್ಟೆ ಹೇಳಿದ್ದರು.
ಇನ್ನು 2016ರ ರಿಯೋ ಒಲಿಂಪಿಕ್ಸ್ ವೇಳೆ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ 4.5 ಲಕ್ಷ ಕಾಂಡೋಮ್‌ಗಳನ್ನು ವಿತರಿಸಿತ್ತು. ಇದೇ ವೇಳೆ ಕ್ರೀಡಾಪಟುಗಳು ಟೋಕಿಯೋ ನಗರದಲ್ಲಿ ಸುತ್ತಾಡುವಂತಿಲ್ಲ, ಶಾಪಿಂಗ್ ನಡೆಸುವಂತಿಲ್ಲ ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಟೋಕಿಯೋ ಒಲಿಂಪಿಕ್ಸ್ ವೀಕ್ಷಿಸಲು ಹೋಗೋ ಅಭಿಮಾನಿಗಳು ಕೂಗುವಂತಿಲ್ಲ..!
ಟೋಕಿಯೋ ಒಲಿಂಪಿಕ್ಸ್ ವೀಕ್ಷಿಸಲು ಬರುವ ಪ್ರೇಕ್ಷಕರಿಗೂ ಆಯೋಜಕರು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದರು. ಈ ಪೈಕಿ ಪ್ರೇಕ್ಷಕರು ತಮ್ಮ ದೇಶದ ಆಟಗಾರರನ್ನು ಹುರಿದುಂಬಿಸಲು ಕೂಗುವಂತಿಲ್ಲ, ಸಾಮಾಜಿಕ ಅಂತರವನ್ನು ಕಾಪಾಡಬೇಕು, ಮಾಸ್ಕ್ ಕಡ್ಡಾಯ ಎಂಬಿತ್ಯಾದಿ ಕೊರೋನಾ ಮುನ್ನೆಚ್ಚರಿಕಾ ಕ್ರಮಗಳನ್ನು ಆಯೋಜಕರು ತಿಳಿಸಿದ್ದರು.