* ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ಪುರುಷರ ಹಾಕಿ ತಂಡ ಪ್ರಕಟ
* ಮನ್‌ಪ್ರೀತ್ ಸಿಂಗ್ ಭಾರತ ಹಾಕಿ ತಂಡದ ನಾಯಕ
* 16 ಆಟಗಾರರನ್ನೊಳಗೊಂಡ ತಂಡ ಪ್ರಕಟಿಸಿದ ಹಾಕಿ ಇಂಡಿಯಾ
ಬೆಂಗಳೂರು(ಜೂ.18) ಮುಂಬರುವ ಟೋಕಿಯೋ ಒಲಿಂಪಿಕ್ಸ್ ಆರು ಅನುಭವಿ ಆಟಗಾರರು ಸೇರಿದಂತೆ 16 ಆಟಗಾರರನ್ನೊಳಗೊಂಡ ಭಾರತ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ. ಮನ್‌ಪ್ರೀತ್ ಸಿಂಗ್ ಭಾರತ ಹಾಕಿ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ.
ಅಮಿತ್ ರೋಹಿದಾಸ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ಸುಮಿತ್, ಸಂಶೀರ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಗುರ್ಜಾನ್ ಸಿಂಗ್ ಮತ್ತು ಲಲಿತ್ ಕುಮಾರ್ ಉಪಾಧ್ಯಾಯ್ ಸೇರಿಂದತೆ 10 ಆಟಗಾರರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಆಡಲು ಸಜ್ಜಾಗಿದ್ದಾರೆ. ಇನ್ನುಳಿದಂತೆ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್, ಮನ್‌ಪ್ರೀತ್, ಹರ್ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್ ಹಾಗೂ ಮನ್ದೀಪ್ ಸಿಂಗ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಸಾಕಷ್ಟು ಅನುಭವ ಹೊಂದಿದ್ದಾರೆ. ಇನ್ನು ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ 2016ರ ರಿಯೋ ಒಲಿಂಪಿಕ್ಸ್‌ನಿಂದ ವಂಚಿತರಾಗಿದ್ದ ಅನುಭವಿ ಡಿಫೆಂಡರ್ ಬಿರೇಂದರ್ ಲಾಕ್ರಾ ಕೂಡಾ ಈ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ.
Our 1⃣6⃣ warriors who will fight for the prestigious🥇at 🇮🇳
Team India 🏑 pic.twitter.com/Hj2enQcZ1Y
undefined
ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ಮಹಿಳಾ ಹಾಕಿ ತಂಡ ಪ್ರಕಟ
ಭಾರತ ತಂಡವು ಏಕೈಕ ಗೋಲ್ ಕೀಪರ್‌ನೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದೆ. ಈ ಮೂಲಕ ತಂಡದ ಭರವಸೆಯ ಗೋಲ್ ಕೀಪರ್ ಎನಿಸಿಕೊಂಡಿದ್ದ ಕ್ರಿಶನ್ ಬಹುದ್ದೂರ್ ಪಾಠಕ್ ಟೋಕಿಯೋ ಒಲಿಂಪಿಕ್ಸ್‌ನಿಂದ ವಂಚಿತರಾಗಿದ್ದಾರೆ. ಈ ಬಾರಿಯ ಒಲಿಂಪಿಕ್ಸ್ ಕೂಟಕ್ಕೆ ಓರ್ವ ಗೋಲ್ ಕೀಪರ್ ಐವರು ಡಿಫೆಂಡರ್, ಐವರು ಮಿಡ್ ಫೀಲ್ಡರ್, ಐವರು ಫಾರ್ವರ್ಡ್ ಆಟಗಾರರೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ.
ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡದ ಸಾಧನೆ ಅಮೋಘವಾಗಿದೆ. ಈ ಹಿಂದೆ ಭಾರತ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಎಂಟು ಬಾರಿ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದೆ. ಆದರೆ ಕಳೆದ 4 ದಶಕಗಳಿಂದ ಭಾರತ ಹಾಕಿ ತಂಡವು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಬರ ಅನುಭವಿಸುತ್ತಿದೆ. 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತ ಕಡೆಯ ಬಾರಿಗೆ ಹಾಕಿಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು.
ಒಲಿಂಪಿಕ್ಸ್‌ನಲ್ಲಿ ಈ ಬಾರಿಯೂ ಭಾರತ ಹಾಕಿ ತಂಡಕ್ಕೆ ಕಠಿಣ ಅಗ್ನಿ ಪರೀಕ್ಷೆ ಎದುರಾಗಲಿದೆ. ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಹಾಲಿ ಚಾಂಪಿಯನ್ ಅರ್ಜಿಂಟೀನಾ, ಮೂರು ಬಾರಿಯ ವಿಶ್ವ ಚಾಂಪಿಯನ್ ಹಾಗೂ ಹಾಲಿ ನಂ.1 ಶ್ರೇಯಾಂಕಿತ ಅಸ್ಟ್ರೇಲಿಯಾ, ನ್ಯೂಜಿಲೆಂಡ್, ಸ್ಪೇನ್ ಹಾಗೂ ಆತಿಥೇಯ ರಾಷ್ಟ್ರ ಜಪಾನ್ ಕೂಡಾ ಸ್ಥಾನ ಪಡೆದಿವೆ.
ಟೋಕಿಯೋ ಒಲಿಂಪಿಕ್ಸ್‌ಗೆ ಭಾರತ ಹಾಕಿ ತಂಡ ಹೀಗಿದೆ ನೋಡಿ:
ಗೋಲ್ ಕೀಪರ್: ಪಿ.ಆರ್. ಶ್ರೀಜೇಶ್
ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬೀರೇಂದರ್ ಲಾಕ್ರಾ.
ಮಿಡ್ ಫೀಲ್ಡರ್: ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ಸುಮಿತ್.
ಫಾರ್ವರ್ಡ್ ಪ್ಲೇಯರ್: ಶಂಶೀರ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಗುರ್ಜಾಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ್, ಮನ್ದೀಪ್ ಸಿಂಗ್.