ಭವಿಷ್ಯದಲ್ಲಿ ಭಾರತವೇ ಬಲಿಷ್ಠ; ಮಹಿಳಾ ಹಾಕಿ ಹೋರಾಟ ಮೆಚ್ಚಿದ ಗ್ರೇಟ್ ಬ್ರಿಟನ್!

Published : Aug 06, 2021, 03:39 PM IST
ಭವಿಷ್ಯದಲ್ಲಿ ಭಾರತವೇ ಬಲಿಷ್ಠ; ಮಹಿಳಾ ಹಾಕಿ ಹೋರಾಟ ಮೆಚ್ಚಿದ ಗ್ರೇಟ್ ಬ್ರಿಟನ್!

ಸಾರಾಂಶ

ಕಂಚಿನ ಪದಕ ಮಿಸ್ ಮಾಡಿಕೊಂಡ ಭಾರತ ಮಹಿಳಾ ಹಾಕಿ ತಂಡ ಗ್ರೇಟ್ ಬಿಟನ್ ವಿರುದ್ಧ ಭಾರತಕ್ಕೆ ಸೋಲು,ಆದರೆ ಭಾರತದ ಹೋರಾಟಕ್ಕೆ ಮೆಚ್ಚುಗೆ ನಾವು ಪದಕ ಗೆಲ್ಲಲಿಲ್ಲ ಹಾಕಿ ಕೋಚ್ ಭಾವುಕ ಟ್ವೀಟ್

ಟೋಕಿಯೋ(ಆ.06): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಹಾಕಿ ಪ್ರದರ್ಶನ ಗತವೈಭವನ್ನು ನೆನೆಪಿಸಿದೆ. ಮಹಿಳಾ ತಂಡ ಗ್ರೇಟ್ ಬ್ರಿಟನ್ ವಿರುದ್ಧ ಮುಗ್ಗರಿಸಿ ಕಂಚಿನ ಪದಕ ಮಿಸ್ ಮಾಡಿಕೊಂಡಿದೆ. ಆದರೆ ಟೀಂ ಇಂಡಿಯಾ ಪ್ರದರ್ಶನಕ್ಕೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಭಾರತ ವಿರುದ್ಧ ಗೆದ್ದ ಗ್ರೇಟ್ ಬ್ರಿಟನ್, ಮಹಿಳಾ ತಂಡದ ಪ್ರದರ್ಶನವನ್ನು  ಶ್ಲಾಘಿಸಿದೆ. ಇಷ್ಟೇ ಅಲ್ಲ ಈ ಪ್ರದರ್ಶನ ನೋಡಿದರೆ ಮುಂದಿನ ದಿನಗಳನ್ನು ಭಾರತವೇ ಆಳುವಂತಿದೆ ಎಂದಿದೆ.

ಕಣ್ಣೀರಾಗಿದ್ದ ಭಾರತೀಯ ಮಹಿಳಾ ಹಾಕಿ ತಂಡವನ್ನು ಸಂತೈಸಿದ ಪ್ರಧಾನಿ ಮೋದಿ

ಕಂಚಿನ ಪದಕಕ್ಕಾಗಿ ನಡೆದ ತೀವ್ರ ಪೈಪೋಟಿಯಲ್ಲಿ ಗ್ರೇಟ್ ಬ್ರಿಟನ್ 4-3 ಅಂತರದಲ್ಲಿ ಗೆಲುವು ಸಾಧಿಸಿದೆ. ಕೇವಲ 1 ಗೋಲಿನ ಅಂತರದಲ್ಲಿ ಗ್ರೇಟ್ ಬ್ರಿಟನ್ ಕಂಚು ಗೆದ್ದುಕೊಂಡಿದೆ. ಪ್ರತಿ ನಿಮಿಷವೂ ಗ್ರೇಟ್ ಬ್ರಿಟನ್‌ಗೆ ಅತ್ಯಂತ ಸವಾಲಿನಿಂದ ಕೂಡಿತ್ತು. ಪದಕ ಗೆದ್ದ ಗ್ರೇಟ್ ಬ್ರಿಟನ್ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಭಾರತ ಮಹಿಳಾ ಹಾಕಿ ತಂಡದ ಪ್ರದರ್ಶನವನ್ನು ಕೊಂಡಾಡಿದೆ.

ಟೋಕಿಯೋ 2020: ಪಂದ್ಯ ಸೋತರೂ ಭಾರತೀಯರ ಹೃದಯ ಗೆದ್ದ ಮಹಿಳಾ ಹಾಕಿ ತಂಡ..!

ಎಂತ ಅದ್ಬುತ ಪಂದ್ಯ, ಅಷ್ಟೇ ಅದ್ಬುತ ಎದುರಾಳಿ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ಅದ್ಬುತ ಪ್ರದರ್ಶನ ನೀಡಿದೆ. ಹೀಗಾಗಿ ಮುಂದಿನ ಕೆಲ ವರ್ಷ ಭಾರತೀಯ ಹಾಕಿ ಮಹತ್ತರ ಮೈಲಿಗಲ್ಲು ನಿರ್ಮಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಗ್ರೇಟ್ ಬ್ರಿಟನ್ ಟ್ವೀಟ್ ಮಾಡಿದೆ.

 

ಭಾರತ ಮಹಿಳಾ ಹಾಕಿ ಪದಕ ಮಿಸ್ ಮಾಡಿಕೊಂಡಿದೆ ನಿಜ. ಆದರೆ ನೀಡಿದ ಪ್ರದರ್ಶನಕ್ಕೆ ಭಾರತೀಯರು ಮಾತ್ರವಲ್ಲ ವಿಶ್ವವೇ ತಲೆಬಾಗಿದೆ. ಇತ್ತ ಮುಗ್ಗರಿಸಿದ ಮಹಿಳಾ ಹಾಕಿ ಪಟುಗಳ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಮಹಿಳಾ ಹಾಕಿ ತಂಡಕ್ಕೆ ಕರೆ ಮಾಡಿ ಹೋರಾಟದ ಹಾದಿಯನ್ನು ಮೆಚ್ಚಿ ಶುಭಹಾರೈಸಿದ್ದಾರೆ. ಇತ್ತ ಮಹಿಳಾ ಹಾಕಿ ತಂಡದ ಕೋಚ್ ಜೋರ್ಡ್ ಮರಿಜ್ನೆ ಭಾವುಕ ಟ್ವೀಟ್ ಮಾಡಿದ್ದಾರೆ.

ಟೋಕಿಯೋ 2020: ಕೊನೆ ನಿಮಿಷದಲ್ಲಿ 11 ಸೆಕೆಂಡ್‌ ನಿಂತ ಗಡಿಯಾರ: ಎಡವಟ್ಟು!

ನಾವು ಪದಕ ಗೆಲ್ಲಲಿಲ್ಲ. ಆದರೆ ಅದಕ್ಕಿಂತ ದೊಡ್ಡ ಪ್ರಶಸ್ತಿಯನ್ನು ಗೆದ್ದಿದ್ದೇವೆ. ನಾವು ಕೋಟ್ಯಾಂತರ ಭಾರತೀಯರಿಗೆ ಹೆಮ್ಮೆ ತಂದಿದ್ದೇವೆ. ಕೋಟ್ಯಾಂತರ ಹುಡುಗಿಯರಿಗೆ ಸ್ಪೂರ್ತಿಯಾಗಿದ್ದೇವೆ. ನೀವು ಶಕ್ತಿ ಮೀರಿ ಪ್ರಯತ್ನಿಸಿದರೆ ನಿಮ್ಮ ಕನಸು ಸಾಕಾರಗೊಳಿಸಲು ಸಾಧ್ಯ ಎಂದು ತೋರಿಸಿದ್ದೇವೆ. ನಿಮ್ಮೆಲ್ಲರ ಪ್ರೀತಿ, ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದ ಎಂದು ಜೋರ್ಡ್ ಮರಿಜ್ನೆ ಟ್ವೀಟ್ ಮಾಡಿದ್ದಾರೆ.

ಸೋಲಿನ ಬಳಿಕ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಕೂಡ ಭಾವುಕರಾಗಿದ್ದಾರೆ. ಆದರೆ ನಾವು ಉತ್ತಮ ಹೋರಾಟ ನೀಡಿದ್ದೇವೆ ಎಂಬ ಸಂತೃಪ್ತಿ ಇದೆ. ಇಂದು ನಮ್ಮ ದಿನವಲ್ಲ ಎಂದಿದ್ದಾರೆ.


 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ