2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಬ್ರೇಕ್‌ ಡ್ಯಾನ್ಸ್‌ ಸೇರ್ಪಡೆ..!

By Suvarna News  |  First Published Dec 9, 2020, 4:32 PM IST

2024ರ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಬ್ರೇಕ್ ಡ್ಯಾನ್ಸ್‌ ಸೇರಿದಂತೆ ಹೊಸದಾಗಿ 4 ಕ್ರೀಡೆಗಳು ಸೇರ್ಪಡೆಯಾಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಲೌಸಾನ್ನೆ(ಡಿ.09): 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬ್ರೇಕ್ ಡ್ಯಾನ್ಸ್‌, ಸರ್ಪಿಂಗ್, ಸ್ಕೇಟ್‌ ಬೋರ್ಡಿಂಗ್ ಮತ್ತು ಸ್ಪೋರ್ಟ್ಸ್‌ ಕ್ಲೈಂಬಿಂಗ್ ಕ್ರೀಡೆಗಳು ಪಾಲ್ಗೊಳ್ಳಲು ಅರ್ಹತೆಗಿಟ್ಟಿಸಿವೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಥಾಮಸ್ ಬಾಚ್ ಈ ನಾಲ್ಕು ಕ್ರೀಡೆಗಳ ಸೇರ್ಪಡೆಯನ್ನು ಖಚಿತಪಡಿಸಿದ್ದಾರೆ.

2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹೊಸದಾಗಿ 4 ಕ್ರೀಡೆಗಳ ಸೇರ್ಪಡೆಗೆ ಕುರಿತಂತೆ ಕಳೆದ ವರ್ಷವೇ ಆಯೋಜನಾ ಸಮಿತಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಮುಂದೆ ಪ್ರಸಾಪವಿರಿಸಿತ್ತು. ಸರ್ಪಿಂಗ್, ಕ್ಲೈಂಬಿಂಗ್ ಹಾಗೂ ಸ್ಕೇಟ್‌ ಬೋರ್ಡಿಂಗ್ ಕ್ರೀಡೆಗಳು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಸೇರ್ಪಡೆಯಾಗಿದೆ.

Latest Videos

undefined

ಸಮಯ ಹಾಗೂ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಪ್ಯಾರಿಸ್ ಒಲಿಂಪಿಕ್ ಆಯೋಜನಾ ಸಮಿತಿಯು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಎಲ್ಲಾ ಕಾರ್ಯಕ್ರಮಗಳು ಕೊರೋನೋತ್ತರ ಒಲಿಂಪಿಕ್ಸ್‌ ಕ್ರೀಡಾಕೂಟ ಇದಾಗಲಿದೆ ಎಂದು ಥಾಮಸ್ ಬಾಚ್ ತಿಳಿಸಿದ್ದಾರೆ.

ಒಂದೇ ಕಿಡ್ನಿ ಇದ್ರೂ ಸಾಧನೆಗೆ ಅಡ್ಡಿಯಾಗಲಿಲ್ಲ: ಅಂಜು ಬಾಬಿ ಜಾರ್ಜ್

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 10,500 ಅಥ್ಲೀಟ್‌ಗಳು ಭಾಗವಹಿಸಲು ಅನುವು ಮಾಡಿಕೊಡಲಾಗುವುದು. ಟೊಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಇನ್ನು ಪ್ಯಾರಿಸ್ ಕ್ರೀಡಾಕೂಟದಲ್ಲಿ ಸರಿಯಾಗಿ 50% ಪುರುಷ ಹಾಗೂ 50% ಮಹಿಳಾ ಕ್ರೀಡಾಪಟುಗಳಿಗೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ಕುರಿತಂತೆ ಮಾತನಾಡಿದ 2024ರ ಪ್ಯಾರಿಸ್ ಒಲಿಂಪಿಕ್ಸ್ ನಿರ್ದೇಶಕರಾದ ಜೀನ್ ಫಿಲಿಫ್ಪಿ ಗ್ಯಾಟಿನ್, 1900ರಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಈಗ 50% ಮಹಿಳೆಯರಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತಿರುವುದು ಒಳ್ಳೆಯ ರೂಪಕ ಎಂದು ಹೇಳಿದ್ದಾರೆ.
 

click me!